ಮಹಿಳೆಗೆ ಕಾನೂನು ಜ್ಞಾನ ಅವಶ್ಯ: ರೇಶ್ಮಿ
ಯಾದಗಿರಿ: ಮಹಿಳೆಯರಿಗೆ ಮನೆ ಬಳಕೆ ಸಾಮಗ್ರಿಗಳು ಎಷ್ಟು ಅಗತ್ಯವೋ, ಅದೇ ರೀತಿ ಕಾನೂನಿನ ಅರಿವು ಕೂಡ ಅಷ್ಟೇ ಅವಶ್ಯ ಎಂದು ಗುಲ್ಬರ್ಗದ ವಕೀಲರಾದ ಮಾಲತಿ ಎಸ್. ರೇಶ್ಮಿ ಹೇಳಿದರು.
ಇಲ್ಲಿಯ ನಗರಸಭೆ ಆವರಣದಲ್ಲಿ ಶುಕ್ರವಾರ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆಯ ಉಪಘಟಕವಾದ ಸಮುದಾಯ ಅಭಿವೃದ್ಧಿ ಜಾಲದಡಿಯಲ್ಲಿ ಹಮ್ಮಿಕೊಂಡಿದ್ದ ನಾಗರಿಕರ ಹಕ್ಕು ಜವಾಬ್ದಾರಿ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊಳ್ಳುಬಾಕ ಸಂಸ್ಕೃತಿ ಜೀವಂತ- ವಿಷಾದ: ಮಹಿಳೆಯರ ಮತ್ತು ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿವೆ. ಇಂತಹ ಸಾಮಾಜಿಕ ಪಿಡುಗು ಹೋಗಲಾಡಿಸಲು ಮಹಿಳೆರಿಗೆ ಕಾನೂನಿನ ಜ್ಞಾನ ತುಂಬಾ ಅವಶ್ಯವಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿ ನಡೆಯುತ್ತಿರುವುದರಿಂದ ಮಹಿಳೆಯರಿಗಾಗಿ ಹೆಚ್ಚಿನ ಕಾನೂನು ಕೊಟ್ಟಿದ್ದಾರೆ. ದೇಶ ಸ್ವತಂತ್ರಗೊಂಡು ಹಲವು ವರ್ಷಗಳೇ ಸಂದಿವೆ. ಆದರೂ ಕೊಳ್ಳುಬಾಕ ಸಂಸ್ಕೃತಿ ಇನ್ನೂ ಮರೆಗೆ ಸರಿಯದಿರುವುದು ವಿಪರ್ಯಾಸ ಎಂದರು.
ವರದಕ್ಷಿಣೆ ತೆಗೆದುಕೊಳ್ಳುವವರು ತಮ್ಮದೇ ವ್ಯಕ್ತಿತ್ವವನ್ನು ಮಾರಿಕೊಂಡ ಹಾಗೆ. ವರದಕ್ಷಿಣೆ ವಿರುದ್ಧ ಪ್ರತಿಯೊಬ್ಬರೂ ಜಾಗೃತಗೊಳ್ಳಬೇಕು. ವರದಕ್ಷಿಣೆ ನೀಡಿ ಮದುವೆ ಮಾಡಿದ ಬಳಿಕ ತನ್ನ ಮನೆ, ಸೊತ್ತುಗಳನ್ನು ಕಳೆದುಕೊಂಡು ಮಾನಸಿಕವಾಗಿ ಕುಗ್ಗಿದ ಅನೇಕ ಪೋಷಕರು ಸಮುದಾಯದಲ್ಲಿದ್ದಾರೆ. ಮಹಿಳೆಯು ಸುಂದರ ಕುಟುಂಬದ ಉದ್ಧಾರಕ್ಕೆ ಕಾರಣಕರ್ತಳು. ಆದರೆ ಅದೇ ಮಹೀಳೆಯು ವರದಕ್ಷಿಣೆಯ ಕಾರಣದಿಂದ ಮಾನಸಿಕ ಹಾಗೂ ದೈಹಿಕ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ವಿಷಾದನೀಯ. ಹೆಣ್ಣು ಮಕ್ಕಳು ಸುಶಿಕ್ಷಿತರಾಗಿ ಕಾನೂನು ಸೌಲಭ್ಯ ಪಡೆಯಬೇಕು ಎಂದು ಕರೆ ನೀಡಿದರು.
ಸ್ವಾವಲಂಬಿಗಳಾಗಿ ಬದುಕಿ: ಪೌರಾಯುಕ್ತ ಮಹ್ಮದ ಮುನೀರ್ ಮಾತನಾಡಿ, ಪಾಲಕರು ತಪ್ಪದೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಹಿಳೆಯರು ಸ್ವಸಹಾಯ ಗುಂಪುಗಳ ಮೂಲಕ ಹಣ ಉಳಿತಾಯ ಮಾಡಿ, ಅರ್ಥಿಕವಾಗಿ ಸಬಲರಾಗಬೇಕು. ನಮ್ಮಲ್ಲಿರುವ ಕೀಳರಿಮೆ ಬಿಟ್ಟು ಸ್ವಾವಲಂಬಿಗಳಾಗಿ ಬದುಕಬೇಕೆಂದು ಕಿವಿಮಾತು ಹೇಳಿದರು.
ಸಮುದಾಯ ಅಭಿವೃದ್ಧಿ ಅಧಿಕಾರಿ ಡಾ. ನಾಗರತ್ನ ದೇಶಮಾನೆ, ವ್ಯವಸ್ಥಾಪಕ ನೀಲಕಂಠರಾಯ, ಸುನೀಲ್ ಮುಂತ್ತಗಿ ಇದ್ದರು. ದೇವಿಂದ್ರಪ್ಪ ಚಿಂತಗುಂಟಾ ನಿರೂಪಿಸಿದರು. ಸುನೀಲ್ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

