ಹಂಸಧ್ವನಿ ಕಲಾನಿಕೇತನ ವಾರ್ಷಿಕೋತ್ಸವ
ಗುಲ್ಬರ್ಗ: ನಗರದ ಸಂಗಮೇಶ್ವರ ಸಭಾಗೃಹದಲ್ಲಿ ಹಂಸಧ್ವನಿ ತಬಲಾ ಕಲಾನಿಕೇತನದ 11ನೇ ವಾರ್ಷಿಕೋತ್ಸವದ ಅಂಗವಾಗಿ ಈಚೆಗೆ ಎರಡು ದಿನಗಳ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಗಂಗಾವತಿ ಪ್ರಾಣೇಶ ಕಾರ್ಯಕ್ರಮ ಉದ್ಘಾಟಿಸಿದರು. ನೂತನ ವಿದ್ಯಾಲಯ ಸಂಸ್ಥೆಯ ಡಾ. ಸ್ವಾಮಿರಾವ ಕುಲ್ಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಾಜಿ ಕುಲ್ಕರ್ಣಿ, ಮಹಾಮನಿ ಹತ್ತಿಗೂಡುರು, ಡಾ. ರಾಜೇಂದ್ರ ಯರನಾಳ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯ ಸಂಗೀತಗಾರ ಭಗವಂತಪ್ಪ ದೇಸಾಯಿ ಕಲ್ಲೂರ, ಭಗವಂತರಾವ ದೀಕ್ಷೀತ, ಅನಂತ ಹರಸೂರ ಹಾಗೂ ಗುಲ್ಬರ್ಗ ಸಂಗೀತ ಕ್ಷೇತ್ರದಲ್ಲಿ ಕಿರಿಯ ವಯಸ್ಸಿನಲ್ಲಿ ಆಕಾಶವಾಣಿ ಎ ಶ್ರೇಣಿ ಪಡೆದ ರಾಘವೇಂದ್ರ ಬಡಶೇಷಿ ಹಾಗೂ ಶಂಕರ ದೇಸಾಯಿ ಕಲ್ಲೂರವರನ್ನು ಸನ್ಮಾನಿಸಲಾಯಿತು.ಬಡ ವಿದ್ಯಾರ್ಥಿ ಸಂತೋಷ ಗೋಪಾಲರಾವ ವಿದ್ಯಾರ್ಥಿಗೆ ಉಚಿತ ತಬಲಾ ಶಿಕ್ಷಣ ನೀಡುವುದಲ್ಲದೆ ಉಚಿತವಾಗಿ ಒಂದು ಜೊತೆ ತಬಲಾ ನೀಡಲಾಯಿತು. ವಿದ್ಯಾರ್ಥಿಗಳಿಂದ ಗಾಯನ, ವಾದನ, ತಾಲಮಾಲಾ ಚಳ್ಳಮ್ವಾದ್ಯವೃಂದ ನಂತರ ಪ್ರತಿಭಾ ತಂಡದವರಿಂದ ತಬಲಾ ಸೋಲೋ ನಡೆಯಿತು ಎಂದು ಅಧ್ಯಕ್ಷ ರವೀಂದ್ರ ಕುಲ್ಕರ್ಣಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

