ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Published On :

'ಸಾಹಿತ್ಯಕ್ಕೆ ಹೈ-ಕ ಕೊಡುಗೆ ಅಪಾರ'
ಚಿಂಚೋಳಿ: ಕನ್ನಡ ಸಾಹಿತ್ಯಕ್ಕೆ ಹೈ-ಕ ಪ್ರದೇಶದ ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯ ಉಳುವಿಗಾಗಿ ಸಾಹಿತಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಾಲೂಕು ಎಪಿಎಂಸಿ ನಿರ್ದೇಶಕ ರಮೇಶ ಯಾಕಾಪುರ ಹೇಳಿದರು. ತಾಲೂಕಿನ ನಿಡಗುಂದಾ ಗ್ರಾಮದಲ್ಲಿ ಶುಕ್ರವಾರ ನಡೆದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ನಾಡಿನ ಸಾಹಿತ್ಯವನ್ನು ಉಳಿಸಿ ಬೆಳೆಸಲು ಹೈದ್ರಾಬಾದ್-ಕರ್ನಾಟಕ ಪ್ರದೇಶದ ಕಲ್ಯಾಣ ನಾಡಿನ ಸಾಹಿತಿಗಳು ಶ್ರಮಿಸಿದ್ದಾರೆ ಎಂದರು. ಗುಲ್ಬರ್ಗ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಸುಭಾಷ ರಾಠೋಡ, ಡಾ. ಈಶ್ವರಯ್ಯ ಕೊಡಂಬಲ್, ಡಾ. ಕಲ್ಯಾಣರಾವ ಪಾಟೀಲ್, ಪ್ರೊ. ಶೋಭಾದೇವಿ ಚೆಕ್ಕಿ ವಿವಿಧ ವಿಷಯಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಪ್ರೊ. ಸೂಗಯ್ಯ ಹಿರೇಮಠ, ಜಿಲ್ಲಾ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್, ತಾಲೂಕು ಕಸಾಪ ಅಧ್ಯಕ್ಷ ಸುಭಾಷ ಶೀಲವಂತ, ಲಕ್ಷ್ಮಣ ಆವಂಟಿ, ಎಸ್.ಎಂ. ಖಾದ್ರಿ,  ಡಾ. ಶ್ರೀ ಶೈಲ್ ನಾಗರಾಳ, ಪ್ರೊ. ಶೋಭಾದೇವಿ ಚೆಕ್ಕಿ, ಸುರೇಶ ಕೊರವಿ ಇದ್ದರು. ಗುರುರಾಜ ಅಗ್ನಿಹೋತ್ರಿ ಸ್ವಾಗತಿಸಿದರು. ವೀರಣ್ಣ ನಿರೂಪಿಸಿದರು. ಜಾಕೀರ ಹುಸೇನ್ ವಂದಿಸಿದರು.
ಮುಖ್ಯಗುರು ಅಮಾನತು
ಆಳಂದ: ತಾಲೂಕಿನ ಬೆಳಮಗಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಶಿವಕುಮಾರ ಕೊಮಾಶೆಟ್ಟಿ ಅವರನ್ನು ಅಮಾನತು ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಶಾಲೆಯಲ್ಲಿ ರೇಣುಕಾಚಾರ್ಯ ಸಹ ಶಿಕ್ಷಕರು ಅ.2011ರಿಂದ ಆಗಸ್ಟ್ 2012ರವರೆಗೆ ಅನಧಿಕೃತ ಗೈರು ಹಾಜರಿ ಇದ್ದರೂ ಇವರ ವರದಿಯನ್ನು ಇಲಾಖೆಗೆ ತಿಳಿಸಿರುವುದಿಲ್ಲ. ಹೀಗಾಗಿ ರೇಣುಕಾಚಾರ್ಯರ ಸಂಬಳವಾಗಲು ಮುಖ್ಯಗುರು ಶಿವಕುಮಾರ ಕೊಮಾಶೆಟ್ಟಿ ಕಾರಣರಾಗಿರುತ್ತಾರೆ. ಹೀಗಾಗಿ ಇವರನ್ನು ಇಲಾಖೆ ಮೇಲಾಧಿಕಾರಿಗಳು ಅಮಾನತು ಮಾಡಿದ್ದಾರೆ.
ಕಾರ್ಖಾನೆ ಮುಂದೆ ನಾಳೆ ಪ್ರತಿಭಟನೆ
ಆಳಂದ: ತಾಲೂಕಿನ ಭೂಸನೂರ ಸಮೀಪದ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಯವರು ಪ್ರಸಕ್ತ ಸಾಲಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ಗೆ 2300 ನೀಡಬೇಕು, ಕಬ್ಬು ಕಡಿಯುವಾಗ ರೈತರಿಂದ ಹಣ ವಸೂಲಿ ಮಾಡುವುದು ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.4ರಂದು ಬೆಳಗ್ಗೆ 10 ಗಂಟೆಗೆ ಕಾರ್ಖಾನೆ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕು ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ ತಿಳಿಸಿದ್ದಾರೆ.
ಖರ್ಗೆ ಚಿತ್ತಾಪುರಕ್ಕೆ
ಚಿತ್ತಾಪುರ: ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾ.3ರಂದು ಮಧ್ಯಾಹ್ನ 2ಕ್ಕೆ ಅಭ್ಯರ್ಥಿಗಳ ಮನವಿ ಮೇರೆಗೆ ಚುನಾವಣಾ ಪ್ರಚಾರ ಕೈಗೊಳ್ಳಲು ಚಿತ್ತಾಪುರಕ್ಕೆ ಆಗಮಿಸಲಿದ್ದಾರೆ ಎಂದು ಭೀಮಣ್ಣ ಸಾಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.