ಗುಲ್ಬರ್ಗಾ

900 ರೈತರಿಂದ 4.30 ಕೋಟಿ ವಸೂಲಿ

Published On :

ಆಳಂದ: ತಾಲೂಕಿನ ತಡಕಲ್ ಕೃಷ್ಣಾ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಬುಧವಾರ ನಡೆದ ಸ್ವಯಂಪ್ರೇರಿತ ಸಾಲ ಮರುಪಾವತಿ ಶಿಬಿರದಲ್ಲಿ 10 ಸೇವಾ ಗ್ರಾಮಗಳ 900 ರೈತರಿಂದ 4.30 ಕೋಟಿ ಸಾಲ ಮರುಪಾವತಿ ಮಾಡುವ ಮೂಲಕ ಇತರ ಬ್ಯಾಂಕುಗಳಿಗೆ ರೈತರು ಮಾದರಿಯಾದರು.
ಬೆಳಗ್ಗೆಯಿಂದ ಆರಂಭವಾದ ಮರುಪಾವತಿ ರೈತರು ಸರತಿಯಲ್ಲಿ ನಿಂತು ತಡ ರಾತ್ರಿಯವರೆಗೂ ಹಣ ಕಟ್ಟಿದರು. ನಂತರ ನಡೆದ ಸಮಾರಂಭದಲ್ಲಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಟಿ.ಇ. ನಾಗಪ್ಪ ಮಾತನಾಡಿದರು.
ಮಾರ್ಚ್ 31ರ ಒಳಗಾಗಿ ಇನ್ನು 19 ಶಾಖೆಗಳನ್ನು ತೆರೆಯಲು ಉದ್ದೇಶಿಸಿದ್ದು, ಅದರಲ್ಲಿ ಮುನ್ನಹಳ್ಳಿ ಮತ್ತು ರುದ್ರವಾಡಿ ಗ್ರಾಮಗಳಿಗೆ ಬರುವ ದಿನಗಳಲ್ಲಿ ಹೊಸ ಶಾಖೆ ಆರಂಭಿಸಲಾಗುವುದು ಎಂದು ತಿಳಿಸಿದರು.
ಪ್ರಾದೇಶಿಕ ವ್ಯವಸ್ಥಾಪಕ ಎಸ್.ಬಿ. ಕುಲಕರ್ಣಿ ಮಾತನಾಡಿ, ಬ್ಯಾಂಕಿಗೆ ಗ್ರಾಹಕರೇ ದೇವರು. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಹೆಚ್ಚಿನ ಸಾಲ ಪಡೆಯಲೂ ಮುಂದಾಗಬೇಕು. ಅಂದಾಗ ಮಾತ್ರ ಬ್ಯಾಂಕಿನ ಅಭಿವೃದ್ಧಿ ಜೊತೆಗೆ ಸಾಲಗಾರರು ಆರ್ಥಿಕವಾಗಿ ಸದೃಢರಾಗಲೂ ಸಾಧ್ಯ ಎಂದರು.
ಶಾಖಾ ವ್ಯವಸ್ಥಾಪಕ ಜಿ.ವಿ. ಶಾಸ್ತ್ರೀ ಮಾತನಾಡಿ, ಕಳೆದ ವರ್ಷ 5.11 ಕೋಟಿ ಸಾಲ ಮರುಪಾವತಿಯಾಗಿತ್ತು. ಈ ಬಾರಿ 7 ಕೋಟಿ ಗುರಿ ಹೊಂದಿಲಾಗಿತ್ತು ಎಂದು ಹೇಳಿದರು.
ಕ್ಷೇತ್ರಾಧಿಕಾರಿ ಎಸ್.ಪಿ. ಬೋಧಾ, ಎನ್.ಎಸ್. ಗಂಧಿ, ರಾಚಯ್ಯ ಸ್ವಾಮಿ, ಸುಲ್ತಾನಪ್ಪ ವಾಗ್ದರಿ, ಶಿವಾನಂದ ಬೆಳ್ಳೆ, ಶಿವಪುತ್ರಪ್ಪ ಬೆಳ್ಳೆ, ವೀರಭದ್ರಪ್ಪ ಪಾಟೀಲ್, ಎಂ.ಎಸ್. ಬೆಳ್ಳೆ, ಎಂ.ಸಿ. ಸ್ವಾಮಿ, ನಂದಕುಮಾರ ಬುಜುರ್ಕೆ, ಸೂರ್ಯಕಾಂತ ಸರಸಂಬಿ, ಮಹಾರುದ್ರಪ್ಪ ಕುಲಕರ್ಣಿ, ಸಿದ್ರಾಮಪ್ಪ ಶೇಗಜೀ ಸೇರಿದಂತೆ ರೈತರು ಪಾಲ್ಗೊಂಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.