ಚರಂಡಿ ನೀರು ರಸ್ತೆಗೆ ಜನರದ್ದು ಸರ್ಕಸ್ ಸಂಚಾರ
ವಾಡಿ (ಶಹಾಬಾದ್): ಪುರಸಭೆ ನೈರ್ಮಲ್ಯ ನಿರೀಕ್ಷರ, ಚುನಾಯಿತ ಸದಸ್ಯರ ನಿರ್ಲಕ್ಷ್ಯದಿಂದಾಗಿ ಸೂಕ್ತ ಚರಂಡಿ ಇಲ್ಲದೆ ತುಂಬಿದ ಚರಂಡಿ ನೀರು ರಸ್ತೆಯಲ್ಲಿ ಹಳ್ಳದಂತೆ ಹರಿಯುತ್ತಿದೆ. ಸಾರ್ವಜನಿಕರು ಕೊಳಚೆ ನೀರಿನಲ್ಲೇ ಸರ್ಕಸ್ ಮಾಡುತ್ತಾ ಓಡಾಡುವಂತಾಗಿದೆ.
ಪಟ್ಟಣದ ಅತ್ಯಂತ ಹಿಂದುಳಿದ ಪ್ರದೇಶವಾದ ವಾರ್ಡ್ 1ರ ಬಸವನ ಗಣಿ ಪ್ರದೇಶದಲ್ಲಿ ಪುರಸಭೆ ವತಿಯಿಂದ ಈ ಭಾಗದ ಮನೆಗಳಿಂದ ಹರಿದು ಬರುವ ಬಚ್ಚಲು ನೀರು ಸರಿಯಾಗಿ ಹರಿದು ಹೋಗಲು ಚರಂಡಿ ಇಲ್ಲ. ಕೇವಲ ರಸ್ತೆ ಬದಿಯಲ್ಲಿ ಚರಂಡಿಗಾಗಿ ತಗ್ಗು ಮಾತ್ರ ನಿರ್ಮಿಸಿರುವುದರಿಂದ ಸುತ್ತಲಿನ ಮನೆಗಳ ಬಚ್ಚಲು ನೀರು ತೆಗ್ಗುಗಳಲ್ಲಿ ಶೇಖರವಾಗಿ ಹೆಚ್ಚಾದ ನೀರು ರಸ್ತೆಯ ಮೇಲೆ ಹರಿಯುತ್ತಿದೆ.
ಅನಿವಾರ್ಯ: ಇನ್ನು ನಲ್ಲಿ ನೀರು ಬಂದಾಗ ಇದರ ಪ್ರಮಾಣ ಹೆಚ್ಚುವುದು. ತೆಗ್ಗಿನಲ್ಲಿ ಕೊಳಚೆ ನೀರು ಶೇಖರವಾಗಿ ರಸ್ತೆಗೆ ಬರುವುದರಿಂದ ಸಾರ್ವಜನಿಕರು, ಮಕ್ಕಳು ಅದೇ ರಸ್ತೆಯಲ್ಲಿ ಓಡಾಡಬೇಕಾದ ಅನಿವಾರ್ಯತೆ ಇದೆ.
ಈ ಭಾಗದ ಜನರು ರಸ್ತೆಯಲ್ಲಿ ಹರಿಯುತ್ತಿರುವ ಕೊಳಚೆ ನೀರಿನ ಮಧ್ಯೆಯೇ ತಮ್ಮ ಮನೆಗೆ ಕುಡಿಯುವ ನೀರು ತರಬೇಕಾಗಿದೆ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ಪುರಸಭೆ ಮುಖ್ಯಾಧಿಕಾರಿಗಳಿಗೆ, ನೈರ್ಮಲ್ಯ ನಿರೀಕ್ಷಕರಿಗೆ ಮನವಿ ಮಾಡಿದರೂ ಸಹ ಕ್ಯಾರೆ ಎನ್ನುತ್ತಿಲ್ಲ ಎಂದು ದೂರುತ್ತಾರೆ.
ನರಕ ಯಾತನೆ: ಭಾಗದಿಂದ ಬಿಜೆಪಿ ಬೆಂಬಲಿತ ಚುನಾಯಿತ ಸದಸ್ಯರ ಮನೆ ಇರುವದು ವಾಡಿ ಪಟ್ಟಣ ಭಾಗದ ರೇಸಕಮ್ ತಾ ಂಡಾ ಪ್ರದೇಶದಲ್ಲಿ. ಇದರಿಂದ ಚುನಾಯಿತ ಸದಸ್ಯರಿಗೆ ಪ್ರತಿದಿನ ಸ್ಥಳೀಯರು ಅನುಭವಿಸುವ ನರಕಯಾತನೆ ಕಾಣದಂತಾಗಿದೆ.
ರಸ್ತೆಯ ಮೇಲೆ ಹರಿಯುತ್ತಿರುವ ಕೊಳಚೆ ನೀರಿನಿಂದ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗ ಹರಡಿ, ಪರದಾಡುವ ಮುನ್ನವೇ ಪುರಸಭೆ, ಚುನಾಯಿತ ಪ್ರತಿನಿಧಿಗಳು ಎಚ್ಚೆತ್ತು ಕೂಡಲೆ ತೆಗ್ಗುಗಳಲ್ಲಿ ಶೇಖರವಾಗುವ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕಾಗಿದೆ. ಕೊಳಚೆ ಇರುವ ಭಾಗದಲ್ಲಿ ಕ್ರಿಮಿನಾಶಕ ಸಿಂಪಡಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

