ನೃಪತುಂಗ ಬಸ್ ಸೇವೆಗೆ ಆಗ್ರಹ
ಗುಲ್ಬರ್ಗ: ನಗರದ ಎಂಎಸ್ಕೆ ಮಿಲ್ದಿಂದ ಬೋರಾಬಾಯಿ ನಗರದ ಮಾರ್ಗವಾಗಿ ಸೂಪರ್ ಮಾರ್ಕೆಟ್ಗೆ ಹೋಗಲು ನೃಪತುಂಗ ಬಸ್ ಸೇವೆ ಒದಗಿಸಬೇಕೆಂದು ಕರ್ನಾಟಕ ಶುದ್ಧೀಕರಣ ಹೋರಾಟ ವೇದಿಕೆ ಆಗ್ರಹಿಸಿದೆ. ಈ ಬಡಾವಣೆಯಲ್ಲಿ ಶಾಲೆ- ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸೂಪರ್ ಮಾರ್ಕೆಟ್ಗೆ ಹೋಗಲು ಅನುಕೂಲವಾಗುತ್ತದೆ. ಬೋರಾಬಾಯಿ ನಗರದಲ್ಲಿ ಬಡ ಕೂಲಿ ಕಾರ್ಮಿಕರು ಬಹಳಷ್ಟು ಜನರು ವಾಸಿಸುತ್ತಿದ್ದಾರೆ. ನೃಪತುಂಗ ಬಸ್ ಈ ಮಾರ್ಗವಾಗಿ ಹೋದರೆ ಜನರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಜಿಲ್ಲಾಧ್ಯಕ್ಷ ರಮೇಶ ಸರಡಗಿ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಮಲ್ಲೇಶಪ್ಪ ತಾಳಮಡಗಿ, ಜಿಲ್ಲಾ ಮಹಿಳಾ ಅಧ್ಯಕ್ಷ ತ್ರಿವೇಣಿ ತಾಳಮಡಗಿ, ಯಲ್ಲಾಲಿಂಗ ಹಳ್ಳಿ, ರವಿ ಭಾವೆ, ಶರಣಪ್ಪ ಭಾವೆ, ವಿಜಯಕುಮಾರ ಸವಳಗಿಕರ, ಕಾಶೀನಾಥ ಶಾಬಾದಿಕರ, ಸುಧೀರ ತೇಲಂಗಿ, ಮನೋಹರ ತಾಳಮಡಗಿ, ಹರಿಪ್ರಸನ್ನ ಆಗ್ರಹಿಸಿದ್ದಾರೆ.
ಪುರಾಣ ಮಂಗಳ
ಗುಲ್ಬರ್ಗ: ಅಫಜಲ್ಪುರ ತಾಲೂಕಿನ ವಡ್ಡಳ್ಳಿ ಗ್ರಾಮದಲ್ಲಿ ಮಾ.10 ರಂದು ಬೆಳಗ್ಗೆ 9ಕ್ಕೆ ಪುರಾಣ ಮಂಗಳ ಹಾಗೂ ಧರ್ಮ ಸಭೆ ಜರುಗಲಿದೆ. ಷ.ಬ್ರ. ವಿಶ್ವರಾಧ್ಯ ಮಳೇಂದ್ರ ಶಿವಯೋಗಿ ಶಿವಾಚಾರ್ಯ ಹಿರೇಮಠ ಸಭೆಯ ಸಾನಿದ್ಯವಹಿಸುವರು. ವಿರಕ್ತಮಠದ ಮ.ನಿ.ಪ್ರ ಗವಿ ಮಹಾಂತ ಸ್ವಾಮಿ, ರುದ್ರಮುನಿ ಶಿವಾಚಾರ್ಯ, ಅಭಿನವ ವೆಂಕಟೇಶ್ವರ ಸ್ವಾಮಿ, ಶಿವಕುಮಾರ ದೇವರು, ಬಳಿರಾಮ ಮಹಾರಾಜರು, ಉಪಸ್ಥಿತರಿರುವರು. ಗೋವಿಂದ ಭಟ್ಟ ಪುರಾಣಮಂಗಳ ಕಾರ್ಯಕ್ರಮ ಉದ್ಘಾಟಿಸುವರು. ಪಂಡಿತ ರತ್ನ ಸಿದ್ದರಾಮ ಸ್ವಾಮಿ ಪುರಾಣ ಪ್ರವಚನ ನೀಡಲಿದ್ದಾರೆ. ಗುರುಶಾಂತಪ್ಪ ಪಟ್ಟೇದಾರ, ಸುರೇಶ ಐಮೂಲಿ, ದತ್ತು ಜಾಧವ ಅತಿಥಿಗಳಾಗಿ ಆಗಮಿಸಿ, ಮಧ್ಯಾಹ್ನ ಪಲ್ಲಕ್ಕಿ ಉತ್ತವ ನಡೆಯಲಿದೆ. ಸಂಜೆ ಮಹಾಶಿವರಾತ್ರಿಯ ಅಂಗವಾಗಿ ದೇವಸ್ಥಾನದಲ್ಲಿ ಸಾಮೂಹಿಕ ಲಿಂಗಪೂಜೆ ಜರುಗಲಿದೆ ಎಂದು ಶಾಂತಮಲ್ಲಪ್ಪ ಪೊಲೀಸ್ ಪಾಟೀಲ್ ತಿಳಿಸಿದ್ದಾರೆ.
ನಂದೂರಿನಲ್ಲಿ ಗಾಯನ
ಸೇಡಂ: ಇತ್ತೀಚೆಗೆ ನಂದೂರಿನ ಕರಿಬಸವೇಶ್ವರ ದೇವಸ್ಥಾನದಲ್ಲಿ ಮುಗಳನಾಗಾಂವ ಅಭಿನವ ಸಿದ್ಧಲಿಂಗ ಸ್ವಾಮೀಜಿ ಪಾದಯಾತ್ರೆ ಸಂಪನ್ನ ಕಾರ್ಯಕ್ರಮದಲ್ಲಿ ಇಲ್ಲಿನ ಖ್ಯಾತ ಸಂಗೀತಗಾರರಾದ ಶ್ರೀಮತಿ ಪದ್ಮಾ ಶ್ರೀನಿವಾಸ ಸವಾಯಿ ವಚನ ಹಾಗೂ ದಾಸಸಾಹಿತ್ಯವನ್ನು ಹಾಡುವ ಮೂಲಕ ಜನರನ್ನು ರಂಜಿಸಿದರು. ಶ್ರೀಶೈಲ ಆರ್. ವಿಶ್ವಕರ್ಮ ತಬಲಾ ಸಾಥ ನೀಡಿದರು. ಕು. ಅಂಜನಾ ಭೋವಿ, ಪ್ರಿಯಾಂಕಾ, ನಂದಕಿಶೋರ, ಮನೋಹರ್ ಆರ್. ವಿಶ್ವಕರ್ಮ ಸಹಗಾಯನ ಮಾಡಿದರು.
ಡಾಕ್ಟರೇಟ್ ಪದವಿ
ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ ಸಂತೋಷ ವೀರಶೆಟ್ಟಿ ಮಂಡಿಸಿದ ಫ್ರೀ ಅಂಡ್ ಫೋರ್ಸಡ್ ಕನ್ವೆಕ್ಟಿವ್ ಫ್ಲೋ ಇನ್ ಎ ವರ್ಟಿಕಲ್ ಚಾನೆಲ್ ವಿತ್ ಬೌಂಡ್ರಿ ಕಂಡಿಶನ್ ಆಫ್ ದಿ ಥರ್ಡ್ ಕೈಂಡ್ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿದೆ. ಪ್ರೊ. ಜೆ.ಸಿ. ಉಮಾವತಿ ಮಾರ್ಗದರ್ಶಕರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

