ಸತತ ಅಭ್ಯಾಸದಿಂದ ಉತ್ತಮ ಫಲಿತಾಂಶ: ಡಿಡಿಪಿಐ
ಸುರಪುರ: ಪರೀಕ್ಷೆ ಹತ್ತಿರ ಬಂದಾಗ ಮಾತ್ರ ಓದಿನಲ್ಲಿ ತೊಡಗಿಸಿಕೊಳ್ಳುವ ಕೆಟ್ಟ ಹವ್ಯಾಸ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಬೆಳೆಯುತ್ತಿದೆ. ನಿರಂತರ ಓದು, ಸತತ ಅಭ್ಯಾಸ ಮಾತ್ರ ಉತ್ತಮ ಫಲಿತಾಂಶ ತರುತ್ತದೆ ಎಂದು ಡಿಡಿಪಿಐ ರಾಮಾಂಜನೇಯ ಹೇಳಿದರು.
ಸಮೀಪದ ರಂಗಂಪೇಟೆಯ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ವಿ.ಕೆಂಪರಂಗಯ್ಯ ಮಾತನಾಡಿ, ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆ, ಸಾಗಿ ಬಂದ ಬದುಕಿನ ದಾರಿ ಮತ್ತು ಸಾಧನೆಗಳ ಬಗ್ಗೆ ಏಕಾಗ್ರತೆ ಕೊಟ್ಟು ಓದಿ. ಇದರಿಂದ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪ್ರಾಚಾರ್ಯ ಬಸವರಾಜ ಕೊಡೇಕಲ್, ಉಪ ಪ್ರಾಚಾರ್ಯ ಮಲ್ಲಪ್ಪ ಬಿಲ್ಲವ್ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ರಾಜೂ ಪುಲ್ಸೆ, ಶಿಕ್ಷಕರಾದ ಮನೋಹರ, ಗುರುಲಿಂಗಪ್ಪ ಖಾನಾಪುರ, ನಜೀರ ಅಹ್ಮದ್, ಶರಣಪ್ಪ ಬರ್ಲಾ, ಈರಣ್ಣ ಕೊಳ್ಳಿ, ಮಹ್ಮದ ಜಲೀಲ್, ವನಜಾಕ್ಷಿ ಪಾಟೀಲ್, ನಾಗರತ್ನ, ಭಾಗ್ಯಶ್ರೀ ಕುಲಕರ್ಣಿ ಇದ್ದರು. ರಾಜಶೇಖರ ಸ್ವಾಗತಿಸಿ, ಶ್ರೀನಿವಾಸ ಕುಲಕರ್ಣಿ ನಿರೂಪಿಸಿದರು. ಈರಣ್ಣ ಹೊಸ್ಮನಿ ವಂದಿಸಿದರು.
'ಸಂತಸದ ಜೀವನಕ್ಕೆ ಸತ್ಸಂಗ ಅವಶ್ಯ'
ಯಾದಗಿರಿ: ವಿಜ್ಞಾನ ತಂತ್ರಜ್ಞಾನದ ಭರಾಟೆಯಲ್ಲಿ ತಮಗೆ ತೋಚಿದಂತೆ ಇಂದಿನ ಪೀಳಿಗೆ ನಡೆಯುತ್ತಿದೆ. ಇದು ವಿಷಾದನೀಯ ಸಂಗತಿ ಎಂದು ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠ ನೇರಡಗುಂಬ ಶಾಖಾಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ನುಡಿದರು.
ಶಹಾಪುರ ತಾಲೂಕಿನ ಕೋಡಾಲ ಗ್ರಾಮದಲ್ಲಿ ಗಡ್ಡೆ ಬಸವೇಶ್ವ ರಥೋತ್ಸವದ ನಂತರ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಜೀವನದಲ್ಲಿ ಸಂತೋಷ ಹಾಗೂ ನೆಮ್ಮದಿ ಕಾಣಬೇಕಾದರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವಕರು ಸಕ್ರಿಯವಾಗಿ ಭಾಗವಹಿಸಬೇಕು ಎಂದರು. ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ ಮಾತನಾಡಿ, ಬದುಕಲು ಕಲಿಯಬೇಕಾದರೆ ಶಿವ ಶರಣರ ಆದರ್ಶಗಳು ಹಾಗೂ ಜೀವನ ಚರಿತೆಯನ್ನು ಓದಬೇಕು ಎಂದರು. ಮುಖಂಡ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ಮಾತನಾಡಿದರು.
ಬೆಂಡೆಬೆಂಬಳಿ ಗ್ರಾಪಂ ಅಧ್ಯಕ್ಷ ಸಂಗಪ್ಪಗೌಡ ಹಳಿಮನಿ, ಬುಡ್ಡನಗೌಡ ಜಾಗಟಗಲ್, ಜಿಪಂ ಮಾಜಿ ಸದಸ್ಯ ಸಿದ್ದಣ್ಣಗೌಡ ಕಾಡಂನೋರ, ತಾಪಂ ಸದಸ್ಯ ಬಸವರಾಜ ಜೋಳದಡಗಿ, ಎಪಿಎಂಸಿ ಸದಸ್ಯ ಸೋಮಶೇಖರಸ್ವಾಮಿ, ಕರವೇ ಅಧ್ಯಕ್ಷ ಭೀಮುನಾಯಕ, ಸಿದ್ರಾಮರಡ್ಡಿ ಚೆನ್ನೂರ, ಬಸವರಾಜ ನೀಲಹಳ್ಳಿ, ಶಿವುಕುಮಾರ ಕೊಂಕಲ್, ನಿಂಗಣ್ಣ ಜಡಿ, ಅಬ್ದುಲ್ ಬಾಷಾ ಚಿಗಾನೂರ, ಅಜ್ಮೀರ, ಸುರೇಶ ಕೋಡಾಲ, ಭೀಮು, ಸಿದ್ದಪ್ಪಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

