ಸಿದ್ದಾರ್ಥ ಕಾಲೇಜಿನಲ್ಲಿ ಕಾನೂನು ಉಪನ್ಯಾಸ
ಗುಲ್ಬರ್ಗ: ನಗರದ ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದ ರೆಮಿಡಿಯಲ್ ಕೋಚಿಂಗ್ ಕ್ಲಾಸ್ನಲ್ಲಿ “ºÛVÚËÚN ನೆರವೇರಿಕೆ-ಸ್ವತ್ತು ಹಸ್ತಾಂತರ ಅಧಿನಿಯಮ 1882’ ಎಂಬ ವಿಷಯದ ಮೇಲೆ ಬಳ್ಳಾರಿ ವಿ.ಎಸ್.ಆರ್. ಕಾನೂನು ಮಹಾವಿದ್ಯಾಲಯದ ಡಾ.ಎಚ್. ರಾಘವೇಂದ್ರಚಾರ್ಯ ಉಪನ್ಯಾಸ ನೀಡಿದರು. ಸ್ಥಿರ ಆಸ್ತಿಯನ್ನು ಮಾರಾಟ, ಗೇಣಿ, ಅಡಮಾನ, ದಾನ ಹಾಗೂ ವಿನಿಮಯದ ಮೂಲಕ ಐದು ಪ್ರಕಾರವಾಗಿ ವರ್ಗಾವಣೆ ಮಾಡಬಹುದು ಎಂದು ಹೇಳಿದರು.ನೆರವೇರಿಕೆಯು ಸ್ಥಿರ ಸ್ವತ್ತನ್ನು ಹಸ್ತಾಂತರ ಮಾಡಲು ಮಾತ್ರ ಅನ್ವಯವಾಗುತ್ತದೆ. ಅದೇ ರೀತಿ, ಯಾವುದೇ ಆಸ್ತಿ ಮೇಲೆ ದಾವೆ ಇರಬೇಕಾದರೆ ಆಸ್ತಿಯನ್ನು ಮಾರಾಟ ಖರೀದಿಯನ್ನು ಮಾಡಬಾರದು ಹಾಗೂ ದಾವೆ ಇತ್ಯರ್ಥವಾಗದೆ ಸಿದ್ಧಾಂತದ ತತ್ವ ಅನ್ವಯವಾಗುತ್ತದೆ ಎಂದು ವಿವರಿಸಿದರು. ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸನ್ಮಾನ ಸಮಾರಂಭ
ಅಫಜಲ್ಪುರ: ತಾಲೂಕಿನ ನಂದರ್ಗಾ ಗ್ರಾಮದಲ್ಲಿ ನೂತನವಾಗಿ ಆಯ್ಕೆಯಾದ ಬಳೂರಗಿ ಗ್ರಾಪಂ ಅಧ್ಯಕ್ಷೆ ಶಿವಲೀಲಾ ವಿಶ್ವನಾಥ ಕಾಮನಳ್ಳಿ ಇವರನ್ನು ನಿವೃತ್ತ ಶಿಕ್ಷಕ ಶರಣಪ್ಪ ವಿ. ದೇಸಾಯಿ ಜೇವರ್ಗಿ ಬಿ. ಫುಲ್ ಆಹೇರಿ ಸನ್ಮಾನಿಸಿದರು. ಅವರೊಂದಿಗೆ ಆಗಮಿಸಿದ ನಿವೃತ್ತ ಶಿಕ್ಷಕ ಬಾಗಸರಪ್ಪಾ ಕುಂಬಾರ, ನಾಟಕಕಾರ ಕವಿ ಕಲಾವಿದ ರಮಾನಂದ ಹಿರೇಜೇವರ್ಗಿ, ಜಿಲಾನಿ ಜಮಾದಾರ ನೂತ ಅಧ್ಯಕ್ಷರಿಗೆ ಸನ್ಮಾನಿಸಿದರು.ರಮಾನಂದ ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಬಳೂರ್ಗಿ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಜೇವರ್ಗಿ ಬಿ. ತೇಲ್ಲೋಣಿ, ನಂದರ್ಗಿ, ಬಳೂರಗಿ ಗ್ರಾಮಗಳ ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಹೇಳಿದರು. ಗುರುಪಾದಪ್ಪ ಕಾಮಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

