ಗುಲ್ಬರ್ಗಾ

16ರಂದು ವಿಶ್ವರಾಧ್ಯರ ರಥೋತ್ಸವ: ಡಾ.ಗಂಗಾಧರಶ್ರೀ

Published On :

ಯಾದಗಿರಿ: ಪ್ರತಿ ವರ್ಷದಂತೆ ಈ ಸಲವೂ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಶ್ರದ್ಧಾ ಕೆಂದ್ರವಾಗಿರುವ ಅಬ್ಬೆತುಮಕೂರಿನ ಸಿದ್ಧಸಂಸ್ಥಾನ ಮಠದ ವಿಶ್ವರಾಧ್ಯರ ಜಾತ್ರಾ ಮಹೋತ್ಸವ ಮಾ.16ರಿಂದ ಅದ್ಧೂರಿಯಾಗಿ ನಡೆಯಲಿದೆ ಎಂದು ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಹೇಳಿದರು.
ವಿವಿಧೆಡೆಯಿಂದ ಭಕ್ತರು: ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾ.16ರಂದು ಬೆಳಗ್ಗೆ 10ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪುರವಂತರ ಸೇವೆಯೊಂದಿಗೆ ವಿಶ್ವರಾಧ್ಯರ ಪಲ್ಲಕ್ಕಿ ಉತ್ಸವ ಜರುಗಲಿದೆ. ಸಂಜೆ 6.30 ಕ್ಕೆ ರಥೋತ್ಸವ ನಡೆಯಲಿದೆ.  ಜಾತ್ರೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಇತರ ಭಾಗಗಳಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸಲಿದ್ದಾರೆ. ಅಂದು ರಾತ್ರಿ 8ಕ್ಕೆ ಮಾನವ ಧರ್ಮ ಸಮಾವೇಶ ನಡೆಯಲಿದೆ. ವಿಶ್ವರಾಧ್ಯರ ಪುರಾಣ ಪ್ರವಚನ ನಡೆಯಲಿದೆ. ನಂತರ ಗುಲ್ಬರ್ಗ ಓಂಕಾರ ನೃತ್ಯ ತಂಡದವರಿಂದ ಭರತ ನಾಟ್ಯ ಹಾಗೂ ಅರುಣೋದಯ ಕಲಾ ತಂಡ ಮತ್ತು ಶಂಕ್ರಣ್ಣ ಕೋತಬಾಳ ಸಂಗಡಿಗರಿಂದ ಜನಪದ ಜಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ದಿ.17ರಂದು ಬೆಳಗ್ಗೆ 10 ಗಂಟೆಗೆ ಮತ್ತು ಸಂಜೆ 6ಕ್ಕೆ ಭಕ್ತ ಬಾಂಧವರ ವಿಶೇಷ ಕಾರ್ಯಕ್ರಮ ಜರುಗಲಿದೆ. ದಿ.18ರಂದು ಬೆಳಗ್ಗೆ 10 ಗಂಟೆಗೆ ಶರಣ ಸಂಸ್ಕೃತಿ ಶಿಬಿರ ಮತ್ತು ಗುರು ಶಿಷ್ಯರ ಸಮಾಗಮ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
  ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ಪ್ರತಿವರ್ಷ ಜಾತ್ರಾ ಮಹೋತ್ಸವದಲ್ಲಿ ನೀಡಲಾಗುತ್ತಿದ್ದ ವಿಶ್ವಶ್ರೀ ಪ್ರಶಸ್ತಿಯನ್ನು ಈ ಬಾರಿ ಜಾತ್ರೆ ಬದಲು ಏಪ್ರಿಲ್ ತಿಂಗಳಲ್ಲಿ ಮಠದ ವತಿಯಿಂದ ಜರಗುವ ಮಹಾರುದ್ರಯಾಗ ಹಾಗೂ 770 ಅಮರಗಣಂಗಳ ಮಹಾಮಂಟಪ, ಸಂತ ಸಮಾಗಮ, ಸಾಮೂಹಿಕ ವಿವಾಹ ಕಾರ್ಯಕ್ರಮದ ಸಂದರ್ಭದಲ್ಲೇ ನೀಡಲಾಗುವುದು ಎಂದು ಪ್ರಕಟಿಸಿದರು.
  ಜಾತ್ರಾ ಮಹೋತ್ಸವ ಅಂಗವಾಗಿ ಪೆಂಡಾಲ್,  ಕಟೌಟ್, ಬೃಹತ್ ವೇದಿಕೆಗಳು ಸೇರಿದಂತೆ ವಿವಿಧ  ಕಾರ್ಯಕ್ರಮಗಳ ಸಿದ್ಧತೆಗಳು ಆರಂಭವಾಗಿದೆ. ದಾಸೋಹಕ್ಕಾಗಿ ಭಕ್ತಾದಿಗಳು ರೊಟ್ಟಿ, ಧವಸ ಧಾನ್ಯ ಅರ್ಪಿಸಿದ್ದಾರೆ ಎಂದರು. ಡಾ.ಸುಭಾಶ್ಚಂದ್ರ ಕೌಲಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.