ಗುಲ್ಬರ್ಗಾ

ಬಿದರಾಣಿ, ಅನೇಕರು ಕಾಂಗ್ರೆಸ್ ಸೇರ್ಪಡೆ

Published On :

ಯಾದಗಿರಿ: ಸಾಮಾನ್ಯ ಜನತೆಯ ಬಗ್ಗೆ ಕಾಳಜಿ ಹೊಂದಿರುವ ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಅವರ ಮೇಲಿನ ಅಭಿಮಾನದಿಂದ ತಮ್ಮ ನೇತೃತ್ವದಲ್ಲಿ ಮತಕ್ಷೇತ್ರದ ಬಿದರಾಣಿ ಗ್ರಾಮದ ನೂರಕ್ಕೂ ಹೆಚ್ಚು ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದಾಗಿ ಗ್ರಾಮದ ಮುಖಂಡ ರಾಜಾಸಾಬ ದೊಡ್‌ಡಮನಿ ತಿಳಿಸಿದ್ದಾರೆ. ಈಚೆಗೆ ನಡೆದ ಸರಳ ಸಮಾರಂಭದಲ್ಲಿ ಶಾಸಕ ಮಾಲಕರೆಡ್‌ಡಿ ಸಮ್ಮುಖದಲ್ಲಿ ವಿವಿಧ ಪಕ್ಷಗಳ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರಿದರು. ಪ್ರಮುಖರಾದ ಮಹಾದೇವಪ್ಪಗೌಡ, ರಾಮಣ್ಣ ದೊರಿ, ಚಂದಣ್ಣಗೌಡ, ದೇವಿಂದ್ರಪ್ಪ ದೊರಿ ಮೊಕಾಶಿ, ಸಾಯಬಣ್ಣ ಇಬ್ರಾಹಿಂಪುರ, ಹಣಮಂತರಾಯಗೌಡ, ಹಿರೇಪ್ಪಗೌಡ, ನಿಂಗಪ್ಪ ಶಾಪುರ, ಸಾದೇವಪ್ಪ ಶಾಪುರ, ಸಣ್ಣರಾಜಾಸಾಬ, ಬಸವರಾಜ ಹೊನದುರ್ಗ ಇತರರು ಸೇರ್ಪಡೆಯಾದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್, ಶಣ್ಮುಖಪ್ಪ ಸಾಹುಕಾರ, ರಾಹುಲ ಅರಿಕೇರಿ ಇದ್ದರು.
ನ್ಯಾಯಮೂರ್ತಿಗಳ ಪ್ರವಾಸ ಕಾರ್ಯಕ್ರಮ
ಯಾದಗಿರಿ: ಧಾರವಾಡದ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ಅವರು ಮಾ.15ರಂದು ಯಾದಗಿರಿಗೆ ಆಗಮಿಸಲಿದ್ದಾರೆ. ಶುಕ್ರವಾರ ರಾತ್ರಿ ಯಾದಗಿರಿಗೆ ಆಗಮಿಸಿ, ಮಾ.16 ರಂದು ಬೆ.9.15ಕ್ಕೆ ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ ನೀಡಲಿದ್ದಾರೆ. ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡಕ್ಕಾಗಿ ಭೂಸ್ವಾಧೀನ ಪಡಿಸಿಕೊಳ್ಳಬೇಕಾದ ಭೂಮಿ ಪರಿಶೀಲಿಸಲಿದ್ದಾರೆ. ನಂತರ 11.30ಕ್ಕೆ ಶಹಾಪುರಕ್ಕೆ ತೆರಳಲಿದ್ದು, ನ್ಯಾಯಾಲಯಕ್ಕೆ ಭೇಟಿ ನೀಡುವರು. ಅಲ್ಲಿಂದ ಸುರಪುರಕ್ಕೆ ಹೋಗಿ ನ್ಯಾಯಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.