'ಪಕ್ಷೇತರರ ಗೆಲವಿನಿಂದ ಕಾಂಗ್ರೆಸ್ ಗಾಬರಿ'
ಶಹಾಪುರ: ಉನ್ನತ ಮಟ್ಟದ ನಾಯಕರ ಬೆಂಬಲ, ರಾಷ್ಟ್ರೀಯ ಮಾನ್ಯತೆ ಪಡೆದ ಪಕ್ಷಗಳ ಚಿಹ್ನೆ ಇಲ್ಲದೆ ಪುರಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಎದುರಾಳಿ ಕಾಂಗ್ರೆಸ್ಸಿಗೆ ನಡುಕ ಹುಟ್ಟಿಸಿದ್ದು ಸಾಮಾನ್ಯ ಸಂಗತಿಯಲ್ಲ. ಜನತೆ ಕಾಂಗ್ರೆಸ್ ವಿರುದ್ಧವೇ ಮತ ಚಲಾಯಿಸಿದ್ದಾರೆಂದು ಹಿರಿಯ ಮುಖಂಡ ಮಲ್ಲಣ್ಣ ಮಡ್ಡಿ ತಿಳಿಸಿದರು.
ಶಿರವಾಳ ಗೌಡರ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿ 5 ಸ್ಥಾನಗಳಲ್ಲಿ ಜಯಗಳಿಸಿ ಉಳಿದಂತೆ ಬೆರಳೆಣಿಕೆಯ ಮತಗಳ ಅಂತರದಲ್ಲಿ ಕೆಲವರು ಪರಾಜಿತರಾಗಿದ್ದು ದೊಡ್ಡ ಸಾಧನೆಯೇ ಆಗಿದೆ ಎಂದು ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭ ಮತ್ತು ಚಿಂತನ- ಮಂಥನ ಸಭೆಯಲ್ಲಿ ಅವರು ಮಾತನಾಡಿದರು.
ಗೆಲ್ಲಲು ಕಾಂಗ್ರೆಸ್ ಹರಸಾಹಸ: ಸ್ಥಳೀಯ ಶಾಸಕರು ಕಾಂಗ್ರೆಸ್ನವರೇ ಆಗಿದ್ದು, ಹಿಂದಿನ ಪುರಸಭೆ ಅಧಿಕಾರ ಅವರದೇ ಇದ್ದರೂ ಪಕ್ಷೇತರ ಅಭ್ಯರ್ಥಿಗಳ ವಿರುದ್ಧ ಕಾಂಗ್ರೆಸ್ ಗೆಲ್ಲಲು ಹರಸಾಹಸ ಪಟ್ಟಿದೆ. ಅದಕ್ಕಾಗಿ ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂಬುದು ಇಡೀ ಪಟ್ಟಣದ ಜನತೆಗೆ ಗೊತ್ತಿದೆ. ಆಡಳಿತದ ವಿರುದ್ಧವಾದ ಅಲೆ ಇದ್ದು ಪಕ್ಷೇತರರಾಗಿ ಸ್ಫರ್ಧಿಸಿದವರು ಯಾವುದೇ ಕಾರಣಕ್ಕೂ ಅಧೈರ್ಯರಾಗದೇ ಮುಂದೆ ಬರುವ ವಿಧಾನಸಭೆ ಚುನಾವಣೆಗೆ ಇದೇ ಹುಮ್ಮಸ್ಸಿನಲ್ಲಿ ಸಜ್ಜಾದಲ್ಲಿ ಗೆಲವು ನಿಶ್ಚಿತವಾಗಿದೆ ಎಂದರು. ಯುವ ಮುಖಂಡ ಗುರುಪಾಟೀಲ ಶಿರವಾಳ ಮಾತನಾಡಿದರು.
ಸತ್ಕಾರ: ಈ ವೇಳೆ ವಿಜೇತ ಅಭ್ಯರ್ಥಿಗಳು ಮತ್ತು ಪರಾಜಿತಗೊಂಡ ಅಭ್ಯರ್ಥಿಗಳಿಗೂ ಅಭಿನಂದಿಸಿ ಸತ್ಕರಿಸಲಾಯಿತು. ಶರಣಪ್ಪ ಮುಂಡಾಸ, ಗೌಸುದ್ದೀನ್, ಗುರುಮದ್ದೀನ್, ಯಲ್ಲಪ್ಪ ಮಾಸ್ಟರ್, ಬಸವರಾಜ ಆನೇಗುಂದಿ, ಸಲೀಮಾ ಬೇಗಂ, ಲಾಲ ಅಹ್ಮದ್ ಖುರೇಶಿ, ದೊಡ್ಡಮಾನಯ್ಯ, ಶೇಖ ಲಾಡ್ಲೆ ಮಶಾಕ ಸಾಬ್, ಬಸವರಾಜ ವಗ್ಗನರ, ಅಥಿಕ್ ಸಿದ್ದಕಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

