ಗುಲ್ಬರ್ಗಾ

ಖಾಸಗಿ ವಿವಿಗಳು ಮೂಢನಂಬಿಕೆಯ ಪ್ರಚಾರ ಕೇಂದ್ರಗಳು: ಎಐಡಿಎಸ್‌ಒ

Published On :

ಗುಲ್ಬರ್ಗ:  ರಾಜ್ಯ ಸರ್ಕಾರ ಅನುಮತಿ ನೀಡಿರುವ ಖಾಸಗಿ ವಿಶ್ವವಿದ್ಯಾಲಯಗಳು ಮೂಢ ನಂಬಿಕೆಯ ಪ್ರಚಾರ ಕೇಂದ್ರಗಳಾಗಿ ಮಾರ್ಪಾಡುತ್ತಿವೆ.
ಇದು ಶಿಕ್ಷಣ ವಿರೋಧಿ ನೀತಿ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ ಖಂಡಿಸಿದೆ.
ಆಧ್ಯಾತ್ಮಿಕ ವಿಶ್ವವಿದ್ಯಾಲಗಳಿಗೆ ಅನುಮತಿ ನೀಡಿ ಮಧ್ಯಕಾಲಿನ ಯುಗದ ಅನಿಷ್ಠ ಆಚರಣೆಗಳನ್ನು ಬಲಪಡಿಸಿದಂತಾಗುತ್ತದೆ. 22 ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಹರ್ಷ ಕ್ರಿಯಾ ಫೌಂಡೇಶನ್‌ನ ಅಮೃತ ಸಿಂಚನ ಖಾಸಗಿ ವಿಶ್ವವಿದ್ಯಾಲಯಕ್ಕೂ ಅನುಮತಿ ನೀಡಿದೆ.
ಈ ವಿವಿಯಲ್ಲಿ ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ, ರತ್ನ ಹಾಗೂ ಬಣ್ಣದ ಹರಳುಗಳಿಂದ ಅದೃಷ್ಟಗಳಿಸುವ ಕುರಿತಂತೆ ರುದ್ರಾಕ್ಷಿ, ಫೆಂಗ್‌ಶುಯಿ, ವಾಸ್ತುಶಾಸ್ತ್ರ ಮುಂತಾದ ಅವೈಜ್ಞಾನಿಕ ಮೂಢ ಆಚರಣೆಗಳ ಕುರಿತಾದ ಕೋರ್ಸ್‌ಗಳಿಗೆ ಡಿಪ್ಲೊಮಾ, ಪದವಿ ನೀಡಲಾಗುವುದೆಂದು ತಿಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರ ವಿರುದ್ಧ ನಾಡಿನ ಪ್ರಗತಿಪರ ಚಿಂತಕರು, ವಿಜ್ಞಾನಿಗಳು, ಶಿಕ್ಷಣ ತಜ್ಞರು ಧ್ವನಿ ಎತ್ತಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಸಂಶೋಧನೆ ಎಂಬ ಪೊಳ್ಳು ಸಮರ್ಥನೆ ನೀಡಿ ತನ್ನನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದು ಎಐಡಿಎಸ್‌ಓ ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ಗುಲ್ಬರ್ಗ ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಸ್.ಹೆಚ್. ಹಾಗೂ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಶರ್ಮಾ ಆರೋಪಿಸಿದ್ದಾರೆ.
ಸಾರ್ವತ್ರಿಕ ಜ್ಞಾನ ಕೇಂದ್ರಗಳಾದ ಖಾಸಗಿ ವಿಶ್ವವಿದ್ಯಾಲಯಗಳು ವೈಜ್ಞಾನಿಕ ಹಾಗೂ ಧರ್ಮ ನಿರಪೇಕ್ಷವಾಗಿರಬೇಕೆಂಬುದು ನವೋದಯ ಚಿಂತಕರ, ಸಾಹಿತಿಗಳ ಸ್ವಾತಂತ್ರ್ಯ ಹೋರಾಟಗಾರರ ಪರಿಕಲ್ಪನೆಯಾಗಿತ್ತು.
ಲೌಕಿಕವಾದ ವಿಚಾರಗಳನ್ನು ಮಾತ್ರ ಬೋದಿಸಬೇಕಾಗಿರುವುದು ಪ್ರಜಾತಂತ್ರ ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ಈ ಎಲ್ಲಾ ಉದಾತ್ತ ಪರಿಕಲ್ಪನೆಗಳನ್ನು ಗಾಳಿಗೆ ತೂರಿದೆ.
 ಇದರಿಂದಾಗಿ ಸಮಾಜದಲ್ಲಿ ಧರ್ಮಾಂಧತೆ ಬೆಳಯುವುದಲ್ಲದೆ ಕೋಮು ಸಾಮರಸ್ಯವೂ ಹದಗೆಡುವುದರಲ್ಲಿ ಸಂದೇಹವಿಲ್ಲ.
ಆದ್ದರಿಂದ ಆಧ್ಯಾತ್ಮ ವಿವಿಗೆ ನೀಡಿರುವ ಅನುಮತಿಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.