ಜಗಜೀವನರಾಂ ಜಯಂತಿಗೆ ರಜೆ ಘೋಷಿಸಿ
ಗುಲ್ಬರ್ಗ: ಡಾ. ಬಾಬು ಜಗಜೀವನರಾಂ ಅವರ ಜಯಂತ್ಯುತ್ಸವಕ್ಕೆ ಸರ್ಕಾರಿ ರಜೆ ಘೋಷಣೆ ಮಾಡಲು ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರಗಳನ್ನು ಅಂಟಿಸಬೇಕೆಂದು ಡಾ.ಬಾಬು ಜಗಜೀವನರಾಂ ತರುಣ ಸಂಘ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಿದೆ.
ಡಾ. ಜಗಜೀವನರಾಂ ದಲಿತರಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ರಾಷ್ಟ್ರೀಯ ನಾಯಕ, ಹಸಿರು ಕ್ರಾಂತಿ ಹರಿಕಾರ ಡಾ. ಜಗಜೀವನರಾಂ ಜಯಂತ್ಯುತ್ಸವ ನಿಮಿತ್ತ ಏಪ್ರಿಲ್ 5 ರಂದು ಕರ್ನಾಟಕ ಸರ್ಕಾರ ಸರ್ಕಾರಿ ರಜೆ ಘೋಷಣೆ ಮಾಡಬೇಕೆಂದು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷ ರಾಜಕುಮಾರ ಎಸ್. ಕಟ್ಟಿಮನಿ, ಕಾರ್ಯದರ್ಶಿ ಸಚಿನ ಆರ್. ಕಟ್ಟಿಮನಿ, ಗೌರವಾಧ್ಯಕ್ಷ ಚಂದಪ್ಪ ಕಟ್ಟಿಮನಿ, ಸಂಗಪ್ಪ ಕಟ್ಟಿಮನಿ, ಅಂಬಾರಾಯ ಎಂ.ಕೆ ಚಲಗೇರಾ, ವಿಠ್ಠಲ್ ಆರ್. ಅಳ್ಳಗಿ, ಶರಣು ಎಸ್ ಸಗರಕಲ್ ತಾರಫೈಲ್ ಇದ್ದರು.
ಇದೇ ಸಂದರ್ಭದಲ್ಲಿ ಹಣಮಂತ ರತ್ನಡಗಿ, ಮಲ್ಲಪ್ಪ ಚಿಗನೂ, ಶ್ರೀಧರ ಚಾಮನಾಳ, ದೇವು ಬೀಲವಾರ, ಸುನಿಲ ಇಂದಿರಾನಗರ, ಸಾಯಿಬಣ್ಣ ಹಿರಾಪುರ, ಅಮೃತ ಸಿ. ಕಟಾರ, ನಾಗರಾಜ ಅತೂರ, ಶರಣಬಸಪ್ಪ, ರಂಜಿತ, ಸಿದ್ದರಾಮ, ರವಿ, ವೀರಭದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

