ಗುಲ್ಬರ್ಗಾ

ಜಮೀನು ಕಳೆದುಕೊಂಡವರಿಗೆ ಉದ್ಯೋಗ ನೀಡಿ

Published On :

ಕನ್ನಡಪ್ರಭ ವಾರ್ತೆ, ಚಿಂಚೋಳಿ, ಮಾ.16
ತಾಲೂಕಿನ ಛತ್ರಸಾಲಾ ಗ್ರಾಮದಲ್ಲಿ ಸಿಮೆಂಟ್ ಕಂಪನಿ ನಿರ್ಮಾಣಕ್ಕಾಗಿ ಜಮೀನು ನೀಡಿದ ರೈತರ ಕುಟುಂಬದ ಸದಸ್ಯರಿಗೆ ಖಾಯಂ ಉದ್ಯೋಗ ನೀಡದೇ ಬೇರೆ ರಾಜ್ಯದವರಿಗೆ ಉದ್ಯೋಗ ನೀಡುತ್ತಿರುವುದನ್ನು ತಡೆಯಬೇಕು, ಜಮೀನು ಕಳೆದುಕೊಂಡ ಪ್ರತಿಯೊಂದು ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ಗ್ರಾಮದ ವಿಕಾಟ್ ಸಾಗರ ಸಿಮೆಂಟ್ ಕಂಪನಿ ಮುಂದೆ ಭೂಮಿ ಕಳೆದುಕೊಂಡ ಹೋರಾಟ ಸಮಿತಿಯ ರೈತರು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಿದ್ದಾರೆ.
1600 ಎಕರೆ ಖರೀದಿ: ವಿಕಾಟ್ ಸಾಗರ ಸಿಮೆಂಟ್ ಕಂಪನಿಯಲ್ಲಿ ಖಾಯಂ ಉದ್ಯೋಗ ನೀಡುತ್ತೇವೆಂದು ಗ್ರಾಮದ ರೈತರಿಗೆ ಆಶ್ವಾಸನೆ ನೀಡಿ ಗ್ರಾಮದಲ್ಲಿರುವ ಒಟ್ಟು 1600 ಎಕರೆ ಜಮೀನು ಖರೀದಿ ಮಾಡಲಾಗಿದೆ ಎಂದು ತಿಳಿಸಿದರು.
  ಕಳೆದ 4 ವರ್ಷಗಳಿಂದ ಜಮೀನು ನೀಡಿದ ರೈತರ ಕುಟುಂಬಗಳಿಗೆ ಕಂಪನಿಯಲ್ಲಿ ಯಾವುದೇ ಉದ್ಯೋಗ ನೀಡುತ್ತಿಲ್ಲ. ಹೊರತಾಗಿ ರಾಜಸ್ತಾನ, ಹರಿಯಾಣ, ಪಂಜಾಬ್, ಚೆನೈ, ಬಿಹಾರ, ಆಸ್ಸಾಂ ಮತ್ತು ಇತರ ಹೊರ ರಾಜ್ಯಗಳಿಂದ ಜನರನ್ನು ಕರೆ ತಂದು ಉದ್ಯೋಗ ನೀಡಲಾಗುತ್ತಿದೆ ಎಂದು ಆರೋಪಿಸಿದರು.
  ಕಂಪನಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಮೂಲ ಸೌಕರ್ಯ ನೀಡಿಲ್ಲ, ಡಾ. ಸರೋಜನಿ ಮಹರ್ಷಿ ವರದಿ ಪ್ರಕಾರ ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೇಮಕಾತಿಯಲ್ಲಿ ಆದ್ಯತೆ ನೀಡಬೇಕೆಂದು ನಾಗಯ್ಯ ಸ್ವಾಮಿ ಆಗ್ರಹಿಸಿದರು.
ಗೌತಮ ಬೊಮ್ಮನಳ್ಳಿ, ಶರಣಬಸಪ್ಪ ಮಮಶೆಟ್ಟಿ, ನಿಯಾಜ್ ಅಲಿ, ಮಹಾಂತೇಶ ಕಟ್ಟಿಮನಿ, ವಿಠ್ಠಲ್ ಹಿಂಡಿ, ಜಗನ್ನಾಥ ಪೂಜಾರಿ, ಕಾಶಪ್ಪ ಗರಗಪಳ್ಳಿ, ಅಂಜಲಪ್ಪ ಕುಂಬಾರ, ದವಲಸಾಬ್ ನದಾಫ್, ಸುಭಾಷ ದೀಪನೋರ್, ಮಾರುತಿ ಗಂಜಗಿರಿ ಮುಂತಾದವರು ಮಾತನಾಡಿದರು.
ತುಕಾರಾಮ, ನಾಗಪ್ಪ ಭೀಮಶಪ್ಪ, ಕೃಷ್ಣ ದಯಾಳ, ತಿಪ್ಪಣ್ಣ, ಅರ್ಜುನಪ್ಪ, ಚಂದ್ರಪ್ಪ ಛತ್ರಸಾಲಾ ಮುಂತಾದವರು ಅನಿರ್ದಿಷ್ಟ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದರು.
ಛತ್ರಸಾಲಾ ಗ್ರಾಮಸ್ಥರ ವಿವಿಧ ಬೇಡಿಕೆಗಳನ್ನು ಕೆಲವು ಈಡೇರಿಸಲಾಗಿದೆ. ಹಂತ ಹಂತವಾಗಿ ಬೇಡಿಕೆಗಳನ್ನು ಈಡೇರಿಸಲಾಗುವುದು ಮುಂದಿನ ದಿನಗಳಲ್ಲಿ  ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದೆಂದು ವಿಕಾಟ್ ಸಾಗರ ಸಿಮೆಂಟ್ ಕಂಪನಿ ವ್ಯವಸ್ಥಾಪಕ ಕೋದಂಡರಾಮರೆಡ್ಡಿ ಭರವಸೆ ನೀಡಿದರು ರೈತರು ಅನಿರ್ದಿಷ್ಟ ಧರಣಿ ಮುಂದುವರಿಸಿದ್ದಾರೆ ಎಂದು ಕಾಶಪ್ಪ ಕುಂಬಾರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.