ನಾಲ್ವಡಿ ವೆಂಕಟಪ್ಪ ನಾಯಕರ ಕೊಲೆ ಮಾಡಿದ್ದು ಬ್ರಿಟಿಷರು
ಕನ್ನಡಪ್ರಭ ವಾರ್ತೆ, ಸುರಪುರ, ಮಾ.17
ದಕ್ಷಿಣ ಭಾರತದಲ್ಲಿ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಹಳೆಯನ್ನು ಪ್ರಥಮವಾಗಿ ಊದಿದ ಸುರಪುರ ಸಂಸ್ಥಾನದ ವೀರ ಅರಸ ರಾಜಾ ನಾಲ್ವಡಿ ವೆಂಕಟಪ್ಪನಾಯಕರು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಅವರನ್ನು ಬ್ರಿಟಿಷರೇ ಸಂಚು ರೂಪಿಸಿ ಕೊಲೆ ಮಾಡಿದರು ಎಂದು ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಭಾಸ್ಕರರಾವ ಮೂಡಬೂಳ ತಿಳಿಸಿದರು.
ಸಮೀಪದ ರಂಗಂಪೇಟೆಯ ಕರ್ನಾಟಕ ಬಿಇಡಿ ಕಾಲೇಜಿನಲ್ಲಿ ನೃಪತುಂಗ ಶಿಕ್ಷಣ ಸಂಸ್ಥೆ ಮತ್ತು ಕನ್ನಡ ಸಾಂಸ್ಕೃತಿಕ ಶಕ್ತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುರಪುರ ಇತಿಹಾಸದ ಪುನರಾವಲೋಕನ ಎಂಬ ಉಪನ್ಯಾಸ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಜಾಣ, ಶೂರ ಅರಸನಾಗಿದ್ದ: ನಾಲ್ವಡಿ ವೆಂಕಟಪ್ಪನಾಯಕ ಜಾಣ ಮತ್ತು ಶೂರ ಅರಸನಾಗಿದ್ದ. ಈತನ ಶೂರ ಮತ್ತು ಶೌರ್ಯದಿಂದ ಆಂಗ್ಲರು ಬೆಚ್ಚಿಬಿದಿದ್ದರು. ಅಲ್ಲದೆ ದಕ್ಷಿಣ ಭಾರತದ ದಂಗೆಯ ನೇತೃತ್ವ ವಹಿಸಿದ್ದು ಬ್ರಿಟಿಷರ ಪಾಲಿಗೆ ನುಂಗದ ತುತ್ತಾಗಿತ್ತು. ಹೇಗಾದರೂ ಮಾಡಿ ನಾಲ್ವಡಿ ವೆಂಕಟಪ್ಪ ನಾಯಕನನ್ನು ಮುಗಿಸಬೇಕು ಎಂದು ಬ್ರಿಟಿಷರು ಒಳಸಂಚು ರೂಪಿಸಿ ಅರಸನನ್ನು ಕೊಲೆ ಮಾಡಿದರು ಎಂದು ಅವರು ಹೇಳಿದರು.
ರಾಜಾ ನಾಲ್ವಡಿ ವೆಂಕಟಪ್ಪ ನಾಯರ ಸಾವು ಆತ್ಮಹತ್ಯೆ ಅಲ್ಲ, ಇದು ಕೊಲೆ ಎಂದು ನಿರಂತರ ಹೋರಾಟದ ಪ್ರತಿಫಲವಾಗಿ 150 ವರ್ಷಗಳ ನಂತರ ನಾಲ್ವಡಿ ವೆಂಕಟಪ್ಪನಾಯಕರದು ಕೊಲೆ ಎಂದು ಇದೀಗ ನಿರೂಪಿತವಾಗಿದೆ ಎಂದರು.
ಹೆಚ್ಚೆಚ್ಚು ಸಂಶೋಧನೆ ನಡೆಯಲಿ: ಕಾಲೇಜಿನ ಪ್ರಾಚಾರ್ಯ ನಾಗಣ್ಣ ಪೂಜಾರಿ, ಉಪನ್ಯಾಸಕ ಸಿದ್ದಪ್ಪ ದಿಗ್ಗಿ ಮಾತನಾಡಿ, ಸುರಪುರ ಸಂಸ್ಥಾನದ ಇತಿಹಾಸ ಪ್ರತಿಯೊಬ್ಬರಿಗೂ ಕೆಚ್ಚು ಮತ್ತು ದೇಶಪ್ರೇಮ ಮೂಡಿಸುತ್ತದೆ. ಸಂಸ್ಥಾನಕ್ಕೆ ಸಂಬಂಧಿಸಿದಂತೆ ಇನ್ನು ಹೆಚ್ಚಿನ ಸಂಶೋಧನೆಯಾಗಬೇಕು ಎಂದರು.
ರಾಜಗೋಪಾಲ ವಿಭೂತೆ ಮಾತನಾಡಿ, ಸುರಪುರದ ಭವ್ಯ ಇತಿಹಾಸ ಪಠ್ಯ ಪುಸ್ತಕಗಳಲ್ಲಿ ಸೇರುವಂತಾಗಬೇಕು. ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಪೀಠ ಸ್ಥಾಪನೆಯಾಗಬೇಕು ಮತ್ತು ಸುರಪುರ ವಿಜಯೋತ್ಸವ ಆಚರಿಸಬೇಕೆಂದು ಆಗ್ರಹಿಸಿದರು. ಆದಿಶೇಷ ನೀಲಗಾರ ಪ್ರಾಸ್ತಾವಿಕ ಮಾತನಾಡಿದರು. ತಿರುಪತಿ ನಾಯಕ ಸ್ವಾಗತಿಸಿದರು. ದೇವು ಹೆಬ್ಬಾಳ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

