ಪೊಲೀಸ್ ವ್ಯವಸ್ಥೆ ಸಂಪೂರ್ಣ ಅಸ್ಥಿರ: ಯಳಸಂಗಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.20
ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಪೊಲೀಸ್ ವ್ಯವಸ್ಥೆ ಸಂಪೂರ್ಣ ಅಸ್ಥಿರವಾಗಿದೆ ಎಂದು ದಲಿತ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತ ಜಿ. ಯಳಸಂಗಿ ದೂರಿದರು.
ಚಿತ್ತಾಪುರ ತಾಲೂಕಿನ ಇವಣಿ ಗ್ರಾಮದಲ್ಲಿ ದಲಿತ ಸೇನೆ ನೂತನ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿ, ಮನುವಾದಿಗಳು ತಮ್ಮ ಕುಟಿಲ ನೀತಿಯ ಕುತಂತ್ರದಿಂದ ಶೋಷಿತ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಉದ್ರೇಕಿಸುವಂತಹ ಪ್ರಯತ್ನ ಮಾಡುತ್ತಿದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಲಿತ ಸೇನೆ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಮಹ್ಮದ್ ಮೋಯಿನ್ ಶೇಟ್, ದೇವಣ್ಣ ನಾಟಿಕಾರ, ಮರೆಪ್ಪ ದೊಡ್ಮನಿ, ಯಲ್ಲಾಲಿಂಗ ದಿಡ್ಡಿಮನಿ, ಎಂ. ಪಟೇಲ್ ಅವಧಾನಿ, ಡಾ. ಹಸನ ಪಟೇಲ್, ಮಾಡಬೂಳ ಠಾಣೆ ಪಿಎಸ್‌ಐ ಮಾನಯ್ಯ ದೋರೆ, ಕಾಳಗಿ ಪಿಎಸ್‌ಐ ಬಿರಾದಾರ, ದುನಿಯಾ ವಿಠ್ಠಲ್, ಸಂತೋಷ ಬಿ. ಪಾಳಾ, ರೋಹಿಣಿ ಬಾಗೋಡಿ ಅತಿಥಿಗಳಾಗಿ ಆಗಮಿಸಿದ್ದರು. ವಿರುಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು.
ಪದಾಧಿಕಾರಿಗಳು: ಈ ಸಂದರ್ಭದಲ್ಲಿ ಇವಣಿ ಗ್ರಾಮ ಶಾಖೆಯ ಮಹಿಳಾ ಘಟಕದ ನೂತನ ಅಧ್ಯಕ್ಷರನ್ನಾಗಿ ಕುಮಾರಿ ಯಲ್ಲಮ್ಮ ಸೂಗೂರ, ಪ್ರಧಾನ ಕಾರ್ಯದರ್ಶಿಯಾಗಿ ಮರಿಲಿಂಗಮ್ಮ ಸಂಗಾವಿ ಅವರನ್ನು ಆಯ್ಕೆ ಮಾಡಲಾಯಿತು. ದಲಿತ ಸೇನೆ ಇವಣಿ ಗ್ರಾಮ ಶಾಖೆ ನೂತನ ಅಧ್ಯಕ್ಷರನ್ನಾಗಿ ವಿಜಯಕುಮಾರ ಸಂಗಾವಿ, ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ ಕಣಸೂರ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಕಾಂತ, ಖಜಾಂಚಿಯಾಗಿ ಜೈಭೀಮ ದೊಡ್ಡಮನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

