ಗುಲ್ಬರ್ಗಾ

ಹೋಳಿ ಹಬ್ಬ ಶಾಂತಿಯುತ ಆಚರಣೆಗೆ ಡಿಸಿ ಮನವಿ

Published On :

ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮಾ.21
ಮಾ.26ರಂದು ಕಾಮದಹನ ಹಾಗೂ 27ರಂದು ಧುಲಂಡಿ ಹಬ್ಬಗಳು ಇರುವುದರಿಂದ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿ ಎಸ್.ಎನ್. ಪ್ರಸನ್ನಕುಮಾರ ಮನವಿ ಮಾಡಿದರು.
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ಶಾಂತಿಸಭೆ ಸದಸ್ಯರು ಹಾಗೂ ವಿವಿಧ ಧಾರ್ಮಿಕ ಸಂಘಟನೆಗಳ ಸದಸ್ಯರೊಂದಿಗೆ ನಡೆಸಿದ ಶಾಂತಿಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗುವ ಯಾವುದೇ ಕ್ರಮಗಳನ್ನು ಹಬ್ಬದ ಸಂದರ್ಭದಲ್ಲಿ ಆಚರಿಸಬಾರದು ಎಂದರು.
ಇಲಾಖೆಗಳಿಗೆ ಸೂಚನೆ: ರಾತ್ರಿ 10 ಗಂಟೆಯ ನಂತರ ಡಿ.ಜೆ. ಮ್ಯೂಜಿಕ್ ಹಚ್ಚಬಾರದು, ನಗರದಲ್ಲಿರುವ ಎಲ್ಲ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸಬೇಕು, ನಗರದ ಸ್ವಚ್ಛತೆ ಕಾಪಾಡಲು ಹೆಚ್ಚಿನ ವಾಹನಗಳನ್ನು ಹಾಗೂ ಪೌರ ಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಛಗೊಳಿಸಬೇಕು, ರಸ್ತೆ ಮೇಲಿರುವ ಯಾವುದೇ ತರಹದ ವಸ್ತುಗಳನ್ನು ನಗರ ಪಾಲಿಕೆಯ ಪರಿವಿಧಿಗೆ ಪಡೆದು ಸ್ವಚ್ಛಗೊಳಿಸಬೇಕು, ಮಾ.26 ಮತ್ತು 27ರಂದು ಹೋಳಿ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸುವ ಹಿನ್ನೆಲೆಯಲ್ಲಿ ತಡೆರಹಿತ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸರಬರಾಜು, ಸ್ವಚ್ಛತೆ ಕಾಪಾಡಲು ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಆಯಾ ಇಲಾಖೆಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಹಾನಿಕಾರಕ ಬಣ್ಣ ಬೇಡ: ಈ ಎರಡೂ ದಿನಗಳ ಕಾಲ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಬಣ್ಣ ಆಡುವ ಸಂದರ್ಭದಲ್ಲಿ ಯಾವುದೇ ಹಾನಿಕಾರಕ ಬಣ್ಣಗಳನ್ನು ಬಳಸದಂತೆ ಹಾಗೂ ಪುಡಿ ಬಣ್ಣವನ್ನು ಗಾಳಿಯಲ್ಲಿ ತೂರದಂತೆ ಮನವಿ ಮಾಡಿದರು.
ಮಾ.26ರಂದು ಹಾಗೂ 27ರಂದು ಎರಡೂ ದಿನಗಳ ಕಾಲ ಹೋಳಿ ಹಬ್ಬ ಇರುವುದರಿಂದ ಬಣ್ಣ ಆಡುವ ಹಾಗೂ ಬಂಡಿ ಉತ್ಸವ ನಡೆಸಲಾಗುತ್ತದೆ ಎಂದು ಶಾಂತಿ ಸಮಿತಿ ಸದಸ್ಯ ಬಾಬುರಾವ ಜಹಾಗೀರದಾರ್ ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶಕುಮಾರ್, ಸಮಿತಿ ಸಭೆ ಸದಸ್ಯರಾದ ಬಾಬುರಾವ ಯರಸಕರ್, ಬಿ.ಆರ್. ಜಮಾದಾರ, ಶಿವಾಜಿ, ಶರಣಪ್ಪ, ಶಂಕರರಾವ ತಿಮ್ಮಾಜಿ, ಹುಲಿಗೆಪ್ಪ, ಲಕ್ಷ್ಮಣರಾವ ಪೊಲೀಸ್‌ಪಾಟೀಲ್, ಮಹ್ಮದ್ ಅಮಜದ್, ಗೋಪಾಲ, ರಾಜೇಶ ಕುಲಕರ್ಣಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.