ದೇಶದ ಉನ್ನತಿಗೆ ಶ್ರಮಿಸಿ: ನಾಲವಾರ ಶ್ರೀ
ಕನ್ನಡಪ್ರಭ ವಾರ್ತೆಜೇವರ್ಗಿಮಾ.23
ಮನುಷ್ಯ ಪ್ರಪಂಚದ ಅತೀ ಬುದ್ದಿಶಾಲಿ. ಮಾನವ ತನ್ನ ಬುದ್ದಿಯನ್ನು ವಿವೇಚನಾಯುಕ್ತವಾಗಿ ಬಳಸಿಕೊಂಡು ದೇಶದ ಉನ್ನತಿಗೆ ಶ್ರಮಿಸಬೇಕೆಂದು ನಾಲವಾರ ಕೋರಿಸಿದ್ದೇಶ್ವರ ಮಠದ ಡಾ. ಸಿದ್ದ ತೋಟೆಂದ್ರ ಶಿವಾಚಾರ್ಯರು ನುಡಿದರು.
ತಾಲೂಕಿನ ಯನಗುಂಟ ಗ್ರಾಮದಲ್ಲಿ ಸದಾಶಿವ ಬೆಂಕಿತಾತನವರ 26ನೇ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ಧರ್ಮಸಭೆಯಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ನಾಡಿನಲ್ಲಿ ಧರ್ಮಬೇಕು. ಅದನ್ನು ತಿಳಿದವರು ಧರ್ಮ ತಿಳಿದಿದೆ ಎಂದು ಹೇಳುವುದು ಮುಖ್ಯವಲ್ಲ, ಧರ್ಮವನ್ನು ತಿಳಿದವರು ತಿಳಿಯದವರಿಗೆ ತಿಳಿಸುವಂತಹ ಕೆಲಸವಾಗಬೇಕು. ಅಂದಾಗ ಇಂತಹ ಧರ್ಮಸಭೆಗಳಿಗೆ ಅರ್ಥ ಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ನಾಲವಾರ ಶ್ರೀಗಳು ಧಾರ್ಮಿಕ ಕಾರ್ಯಕ್ರಮ, ಆರೋಗ್ಯ ಶಿಬಿರ, ಉಚಿತ ಸಾಮೂಹಿಕ ವಿವಾಹದಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಜೆಡಿಎಸ್ ಮುಖಂಡರಾದ ಅಶೋಕ ಸಾಹು ಗೋಗಿ, ಕಸಾಪ ನಿಕಟ ಪೂರ್ವ ಅಧ್ಯಕ್ಷ ಶಾಂತಪ್ಪ ಪಾಟೀಲ್ ನರಿಬೋಳ, ನಿಂಗಣ್ಣ ಭಂಡಾರಿ, ಗ್ರಾಪಂ ಅಧ್ಯಕ್ಷ ಬಸವರಾಜಗೌಡ ಪಾಟೀಲ್, ಶಿವಣ್ಣಗೌಡ ಪಾಟೀಲ್ ನರಿಬೋಳ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಶ್ಯಾಮರಾಯಗೌಡ ಪಾಟೀಲ್, ಸೋಮಶೇಖರ ಬಂಡಿ, ಅಮೃತಗೌಡ ಪಾಟೀಲ್ ಗುಡೂರ, ಸಂಗಯ್ಯ ಹಿರೇಮಠ, ಸಾಹೇಬಗೌಡ ಮರತ, ಅಯ್ಯಪ್ಪ ಕರಗಾರ, ದೇವಿಂದ್ರಪ್ಪ ಸಾಹು ಮ್ಯಾಳೇಸಿ, ಮಲ್ಲಣ್ಣ ಪ್ರಭಾ, ನಾಗಣ್ಣ ಸಾಹು, ಸಂಗಣ್ಣ ವಾಲಿಕಾರ, ಶರಣಪ್ಪ ಮಾಂಗ ಹಾಗೂ ಗ್ರಾಮದ ನೂರಾರು ಜನರು ಪಾಲ್ಗೊಂಡಿದ್ದರು.
ಕಾಶಿನಾಥ ಪ್ರಾರ್ಥಿಸಿದರು. ಅಯ್ಯಣ್ಣ ಕರಗಾರ ಸ್ವಾಗತಿಸಿದರು. ಸಂಗಯ್ಯ ಹಿರೇಮಠ ನಿರೂಪಿಸಿದರು. ಗುರುಲಿಂಗಯ್ಯ ಹಿರೇಮಠ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

