ಗುಲ್ಬರ್ಗಾ

ಶರಣರು ಜನಿಸಿದ ಪವಿತ್ರ ಭೂಮಿ ಭಾರತ: ಶ್ರೀಗಳು

Published On :


ಗುಲ್ಬರ್ಗ/ಶಹಾಬಾದ್: ನಮ್ಮ ದೇಶ ಶರಣರು, ಸಂತರು, ಮಹಾಂತರು ಜನ್ಮತಾಳಿ, ನಾಡನ್ನು ಬೆಳಗಿ ಈ ಭೂಮಿಯನ್ನು ಪವಿತ್ರಗೊಳಿಸಿದ್ದು, ಅಂಥ ಮಹಾನೀಯರ ಉಪದೇಶ, ತತ್ವಗಳನ್ನು ಅನುಸರಿಸಿದಾಗ ಮಾತ್ರ ನಮ್ಮ ಜೀವನವನ್ನು ಉತ್ತಮಗೊಳಿಸಿ, ಬದುಕನ್ನು ಸಾರ್ಥಕಗೊಳಿಸಲು ಸಾಧ್ಯ ಎಂದು ಚಿತ್ತಾಪುರದ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಹೇಳಿದರು.
ಅವರು ನಾಲವಾರ ವಲಯದ ಸೂಗೂರ (ಎನ್) ಗ್ರಾಮದ ಭೋಜಲಿಂಗೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ,  ಸೂಗೂರದ ಮಠದಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಕ ಕಾರ್ಯಕ್ರಮಗಳು ಜರುಗುತ್ತಿದ್ದು, ಅಪಾರ ಭಕ್ತವಣಂದ ಈ ಮಠಕ್ಕೆ ಹರಿದು ಬರುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಸೂಗೂರ ಮಠದ ಹಿರಗಪ್ಪ ತಾತನವರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುವರ್ಣಗಿರಿ ಸಂಸ್ಥಾನ ವಿರಕ್ತ ಕಲ್ಮಠದ ಮಹಾಸ್ವಾಮಿ, ಕನಕಗಿರಿ ಡಾ. ಚನ್ನಮಲ್ಲಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ವಾಲ್ಮೀಕಿ ನಾಯಕ ಅಧ್ಯಕ್ಷತೆ ವಹಿಸಿದ್ದರು.
  ಶಾಸಕ ಡಾ. ಎ.ಬಿ. ಮಲಕರೆಡ್ಡಿ, ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ, ಜಿಪಂ ಅಧ್ಯಕ್ಷ ಶರಣಬಸಪ್ಪ ತೇಲ್ಕೂರ್, ಯಾದರಿಗಿ ಜಿಪಂ ಉಪಾಧ್ಯಕ್ಷ ಶ್ರೇಣಿಕಕುಮಾರ ದೋಖಾ, ಕಾಂಗ್ರೆಸ್ ಪಕ್ಷದ ಮುಖಂಡರಾದ ಲಿಂಗಾರೆಡ್ಡಿ ಬಾಸರೆಡ್ಡಿ, ಕೆಜೆಪಿ ಮುಖಂಡರಾದ ನಾಗರತ್ನ ಕುಪ್ಪಿ, ಸಿದ್ದಣ್ಣಗೌಡ ಕಾಡಮ್ಮನವರ್, ನಿವೃತ್ತ ತಹಸೀಲ್ದಾರ್ ನರಸಿಂಗರಾವ, ಎಪಿಎಂಸಿ ಮಾಜಿ ಅಧ್ಯಕ್ಷ ವೀರಣ್ಣಗೌಡ ಪರಸರೆಡ್ಡಿ, ಪಿಎಸ್‌ಐ ಎಸ್.ಎಸ್. ದೊಡ್ಡಮನಿ, ಪೋಮು ರಾಠೋಡ, ಚಿತ್ತಾಪುರ ಎಪಿಎಂಸಿ ಅಧ್ಯಕ್ಷ ಶಿವುಗೌಡ ಸಾಹು, ಬಸವರಾಜ ಸಾಹು ಕುರಕುಂದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪ್ರಕಾಶ ಹಿರೇಮಠ ಪ್ರಾರ್ಥಿಸಿದರು. ಮಹಿಪಾಲರೆಡ್ಡಿ ಸೂಗೂರ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.