ಗುಲ್ಬರ್ಗಾ

ಮಹಾಮನೆ, ವಚನ ಸಂಗೀತೋತ್ಸವ ೤ ಅಲ್ಲಮಪ್ರಭು ಜಯಂತಿ ಕಾರ್ಯಕ್ರಮ

Published On :

ಸಮಾನತೆ ಸಾರಿದ ಬಸವ ತತ್ವಾಚರಣೆಗೆ ವಿಶ್ವನಾಥ ಶ್ರೀ ಕರೆ


ಕನ್ನಡಪ್ರಭ ವಾರ್ತೆ   ಆಳಂದ   ಮಾ.25
ಸಾಮಾಜಿಕ ಸಮಾನತೆ ಸಾರಿದ ಬಸವ ತತ್ವಾಚರಣೆಯಿಂದ ಬದುಕು ಹಸನಾಗಲಿದೆ, ಶರಣರು ಕೈಗೊಂಡ ಬಹುಜನರ ಸ್ವಾಭಿಮಾನದ ಚಳವಳಿ ಮುನ್ನೆಡೆಸಬೇಕೆಂದು ಉಸ್ತುರಿ ಧುತ್ತರಗಾಂವ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಕರೆ ನೀಡಿದರು.
ಪಟ್ಟಣದ ರೇವಣಸಿದ್ಧೇಶ್ವರ ಕಾಲನಿಯ ಶಾಲಾ ಶಿಕ್ಷಕಿ ಶಾಂತಾಬಾಯಿ ಎಸ್. ಭದ್ರೆ ಅವರು ಏರ್ಪಡಿಸಿದ್ದ ಮನೆಯಲ್ಲಿ ಮಹಾಮನೆ ಹಾಗೂ ವಚನ ಸಂಗೀತ್ಯುತ್ಸವ, ಅಲ್ಲಮಪ್ರಭುಗಳ ಜಯಂತಿ ಕಾರ್ಯಕ್ರಮದ ಸಮ್ಮುಖ ವಹಿಸಿ ಅವರು ಮಾತನಾಡಿದರು.
ಸಮಾನತೆ: ಬಸವಣ್ಣನವರು ಅಲ್ಲಮಪ್ರಭುಗಳ ಜ್ಞಾನದ ಮೇರುಪರ್ವತವನ್ನು ಗುರುತಿಸಿ ಅನುಭವ ಮಂಟಪದ ಅಧ್ಯಕ್ಷರನ್ನಾಗಿಸಿದರು. ಕೆಳವರ್ಗದ ಅಲ್ಲಮರಿಗೆ ಅನುಭವ ಮಂಟಪದ ಅಧ್ಯಕ್ಷರನ್ನಾಗಿಸಿ ಸಮಾನತೆ ಸಾರಿದ್ದಾರೆ ಎಂದರು.
ಮನುಸ್ಮೃತಿ ಚಾತುರ್ವರ್ಣ ತಿರಸ್ಕರಿಸಿ ಪ್ರತಿಯೊಬ್ಬರು ಗುರುತತ್ವ, ಜ್ಞಾನ ಸಂಪಾದನೆಗೆ ಅರ್ಹರಿದ್ದಾರೆ ಎಂಬುದನ್ನು ಪ್ರಾಯೋಗಿಕವಾಗಿ ಅವರು ತೋರಿಸಿದ್ದಾರೆ ಎಂದು ನುಡಿದರು.
ಆಳಂದ, ನಂದವಾಡಗಿ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಹಿಂದಿನ ಕಾಲದಲ್ಲಿ ಮಠ, ಆಶ್ರಮಗಳಲ್ಲಿ ಜನರಿಗೆ ಬೋಧನೆ ಮಾಡಲಾಗುತ್ತಿತ್ತು. ಆದರಿಗ ಮಠ, ಪೀಠಾಧೀಶರೆ ಮನೆಗಳಿಗೆ ಹೋಗಿ ಜನತೆಗೆ ಬೋಧನೆ ಮಾಡುವಂತಾಗಿದೆ ಎಂದರು.
ಅಲ್ಲಮಪ್ರಭುಗಳ ಜೀವನ ದರ್ಶನ ಕುರಿತು ಸ್ಥಳೀಯ ಮಹಾಂತೇಶ್ವರ ಹಿರೇಮಠದ ಉತ್ತರಾಧಿಕಾರಿ ಚನ್ನಬಸವ ದೇವರು ಉಪನ್ಯಾಸ ನೀಡಿ, ವೈರಾಗ್ಯನಿಧಿ ಅಲ್ಲಂಪ್ರಭುಗಳು ಆಧ್ಯಾತ್ಮಿಕ ಲೋಕದ ತಾತ್ವಿಕ ಚಿಂತರಾಗಿದ್ದು, ಅವರು ಶರಣ ಸಂಕುಲದ ಕಟ್ಟಿತನದ ವಚನ ಸಾಹಿತ್ಯ ಹೊರತರುವಲ್ಲಿ ಕೊಡುಗೆ ನೀಡಿದ್ದಾರೆ ಎಂದರು.
ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಪಾರ್ವತಿ ತೋಟದ್, ಹಟಗಾರ ಸಮಾಜದ ಅಧ್ಯಕ್ಷ ಗುರುನಾಥ ಅಲಮದ್, ಶಾಂತಾಬಾಯಿ ಭದ್ರೆ ಉಪಸ್ಥಿತರಿದ್ದರು.
ಮಂಗಲಾ ವಿಶ್ವನಾಥ ನಿಪ್ಪಾಣಿ ದಂಪತಿಗಳಿಗೆ ಸನ್ಮಾನಿಸಲಾಯಿತು. ಕಲಾವಿದ ಶಿವಶರಣಪ್ಪ ಪೂಜಾರಿ ಅಶೋಕ ಆಳಂದ ಅವರು ಸಂಗೀತ ನುಡಿಸಿದರು. ಎಸ್.ಎಚ್. ಗೋಧೆ, ಪತ್ರಕರ್ತ ಮಹಾದೇವ ವಡಗಾಂವ, ಭೀಮಾಶಂಕರ ಮಡಿವಾಳ, ಸಿದ್ಧರಾಮ ನಂದಗಾಂವ, ಶ್ರೀಶೈಲ್ ರೆಡ್ಡಿ ಇತರರು ಪಾಲ್ಗೊಂಡಿದ್ದರು.
ಪ್ರಭಾಕರ ಸಲಗರೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಗಜಾನಂದ ಕುಂಬಾರ ನಿರೂಪಿಸಿದರು. ಬಸವರಾಜ ದೊಡ್ಮನಿ ಸ್ವಾಗತಿಸಿದರು. ಮರೆಪ್ಪ ಬಡಿಗೇರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.