ಸಹೋದರತ್ವ ಬೆಳೆಸಲು ಶ್ರಮಿಸಿ: ಬಗಾಲೆ
ಗುಲ್ಬರ್ಗ: ಸಮಾಜದಲ್ಲಿ ಸಹೋದರತ್ವ ನಶಿಸಿ ಹೋಗುತ್ತಿರುವುದು ವಿಷಾದಕರ ಸಂಗತಿ. ಇದನ್ನು ಬೆಳೆಸಲು ನಾವೆಲ್ಲರೂ ಶ್ರಮಿಸಬೇಕೆಂದು ಪ್ರೊ. ಕೆ.ಎಸ್. ಬಗಾಲೆ ಹೇಳಿದರು. ಗುಲ್ಬರ್ಗ ಥಿಯಾಸೋಫಿಕಲ್ ಸೊಸೈಟಿ ವತಿಯಿಂದ ನಗರದ ಶೇಠ ಶಂಕರಲಾಲ್ ಲಾಹೋಟಿ ಕಾಲೇಜಿನಲ್ಲಿ ಒಂದು ದಿನದ ವ್ಯಾಸಂಗ್ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಗೋಷ್ಠಿಯ ನಿರ್ದೇಶಕ ಡಾ.ಎಂ. ಗಂಗಾಧರ ಮೂರ್ತಿ ಅವರ ಇಹಪರ ಸಾಧನೆಗಳು ಎಂಬ ವಿಷಯದ ಮೇಲೆ ಸುದೀರ್ಘ ಉಪನ್ಯಾಸ ನೀಡಿದರು. ಪ್ರೊ. ರಾಘವೇಂದ್ರ ರಾಜಪುರೋಹಿತ ವೈರಾಗ್ಯ ಎಂಬ ವಿಷಯ ಕುರಿತು ಮಾತನಾಡಿದರು. ಸದಾಚಾರ ಎಂಬ ವಿಷಯದ ಮೇಲೆ ನಿವೃತ್ತ ಉಪನ್ಯಾಸಕ ವೀರಣ್ಣ ಎಂ. ಪಡಶೆಟ್ಟಿ ಉಪನ್ಯಾಸ ನೀಡಿದರೆ, ಪ್ರೇಮ ಎಂಬ ವಿಷಯದ ಮೇಲೆ ಪ್ರೊ. ವೀರಭೂಷಣ ಉಪನ್ಯಾಸ ನೀಡಿದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ವಿನೋದಕುಮಾರ ಜೇನವೇರಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿಶ್ಲೇಷಿಸಿದರು. ಸಂಸ್ಥೆಯ ಅಧ್ಯಕ್ಷ ವೀರಣ್ಣ ಎಂ. ಪಡಶೆಟ್ಟಿ ಸ್ವಾಗತಿಸಿದರು. ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಶಿವರಾಜ ಅಂಡಗಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

