ಬಣ್ಣದೋಕಳಿ; ಕಾಮದಹನ
ಚಿಂಚೋಳಿ: ಪಟ್ಟಣದಲ್ಲಿ ಹೋಳಿ ಹಬ್ಬದ ನಿಮಿತ್ತ ಬುಧವಾರ ಅನೇಕ ಬಡಾವಣೆಗಳಲ್ಲಿ ಕಾಮದಹನ ನಡೆಸಲಾಯಿತು. ಚಂದಾಪುರ ನಗರದ ಬಸವನಗರ, ಆಶ್ರಯ ಕಾಲೋನಿ ಮತ್ತು ಹೊಸನಗರ, ಧನಗರ ಗಲ್ಲಿ, ಬೈವಾಡ್, ಮೋಮಿನಪುರ, ಚೋಟಿ ದರ್ಗಾ, ಬೋಯಿ ಗಲ್ಲಿ, ಜೋಶಿ ಗಲ್ಲಿ, ಹರಿಜನವಾಡ ಮುಂತಾದ ಕಡೆಗಳಲ್ಲಿ ಕಾಮದಹನ ನಡೆಸಲಾಯಿತು. ಅನೇಕ ಮಹಿಳೆಯರು ಕಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬೆಂಕಿಯಲ್ಲಿ ಕೊಬ್ಬರಿ ಮತ್ತು ಸಗಣಿ ಕುಳ್ಳುಗಳು ಎಸೆಲಾಯಿತು. ಚಿಂಚೋಳಿ ಪಿಎಸ್ಐ ಸುರೇಶ ಬೆಂಡೆಗುಂಬಳ, ಎಎಸ್ಐ ರಾಜಣಪ್ಪ ಜಮಾದಾರ, ಸುಭಾಶ್ಚಂದ್ರ ಬಿರಾದಾರ ಮುಂತಾದವರು ಪೊಲೀಸ್ ಬೀಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದರು. ಗುರುವಾರ ಹೋಳಿ ಹಬ್ಬದ ರಂಗುರಂಗಿನ ಬಣ್ಣದೋಕಳಿ ನಡೆಯಿತು.
ನಾಳೆ ಸಾಮಾನ್ಯ ಸಭೆ
ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸಾಮಾನ್ಯ ಸಭೆ ಮಾ.30ರಂದು ಬೆಳಗ್ಗೆ 10.30 ಗಂಟೆಗೆ ಕಾರ್ಯಸೌಧದ ರಾಧಾಕೃಷ್ಣ ಸಭಾಂಗಣದಲ್ಲಿ ಜರುಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

