ಗುಲ್ಬರ್ಗಾ

ಯೋಜನೆಗಳ ಸದುಪಯೋಗಕ್ಕೆ ಸಂಘಟನೆ ಅವಶ್ಯ: ಎಂ.ಪಟೇಲ್

Published On :

ಕ.ಪ್ರ. ವಾರ್ತೆ ೤ ಸುರಪುರ ೤ ಮಾ.30
ತಾಲೂಕಿನಲ್ಲಿ ಮುಸ್ಲಿಂ ಸಮುದಾಯ ಸಂಘಟನೆ ಕೊರತೆಯನ್ನು ಎದುರಿಸುತ್ತಿದೆ. ಹೀಗಾಗಿ ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಲು ವಿಫಲರಾಗುತ್ತಿದ್ದೇವೆ. ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಲು ಸಂಘಟಿತರಾಗುವುದು ಅವಶ್ಯ ಎಂದು ಕೌನ್ಸಿಲ್ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಪಟೇಲ ಹೇಳಿದರು.
ತಾಲೂಕಿನ ಕಕ್ಕೇರಾ ಪಟ್ಟಣದಲ್ಲಿ ಶನಿವಾರ ಕರ್ನಾಟಕ ಮುಸ್ಲಿಂ ಕೌನ್ಸಿಲ್ ಹೋಬಳಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ಸಿ.ಎಂ. ಇಬ್ರಾಹಿಂ ಅವರು ಸಂಘಟನೆಯನ್ನು ಹುಟ್ಟು ಹಾಕಿದ್ದಾರೆ. ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ತಾಲೂಕಿನಾದ್ಯಂತ ಹೋಬಳಿ ಶಾಖೆಗಳನ್ನು ಸ್ಥಾಪಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿನ ಮುಸ್ಲಿಮರಿಗೆ ಯೋಜನೆಗಳನ್ನು ತಲುಪಿಸಲು ಮತ್ತು ಬಳಸಿಕೊಳ್ಳಲು ಸಂಘಟನೆ ಹೋಬಳಿ ಶಾಖೆಯ ಪದಾಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.
ಸಂಘಟನೆ ಹೆಸರಲ್ಲಿ ಮತಾಂಧತೆ ಬೇಡ: ತಾಪಂ ಸದಸ್ಯ ರಾಜು ಹವಾಲ್ದಾರ್ ಮಾತನಾಡಿ, ಮುಸ್ಲಿಂ ಸಮುದಾಯದವರು ಸಂಘಟನೆಯ ಹೆಸರಿನಲ್ಲಿ ಗ್ರಾಮದಲ್ಲಿ ಮತಾಂಧತೆಯನ್ನು ಬಿತ್ತಬಾರದು. ಪಟ್ಟಣದಲ್ಲಿ ಮುಸ್ಲಿಮರು ಇತರೆ ಸಮುದಾಯದವರೊಂದಿಗೆ ಸೌಹಾರ್ದತೆಯಿಂದ ನಡೆದುಕೊಳ್ಳುತ್ತಿದ್ದಾರೆ. ಈ ವಾತಾವರಣ ಇನ್ನಷ್ಟು ಗಟ್ಟಿಯಾಗುವ ಸಂದೇಶ ಒಳಗೊಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
ಇದಕ್ಕೆ ನಾವು ಯಾವತ್ತು ಬೆಂಬಲಿಸುತ್ತೇವೆ. ನೀವೆಲ್ಲ ಸಂಘಟಿತರಾಗಿ ಯೋಜನೆಗಳ ಲಾಭ ಪಡೆದು ಅಭಿವೃದ್ಧಿಯಾಗಬೇಕು. ಸಂಘಟನೆಯನ್ನು ಯಾವತ್ತು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಸಂಘಟನೆಯ ನೂತನ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ರಹೀಮ ಹವಾಲ್ದಾರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಗುಂಡಪ್ಪ ಸೊಲ್ಲಾಪುರ, ಖಾಜಾ ಹಜ್ಮೀರ್ ಖುರೇಶಿ ವೇದಿಕೆಯಲ್ಲಿದ್ದರು. ದಸ್ತಗೀರಸಾಬ, ಹುಸೇನ ದಖನಿ, ಚಾಂದಸಾಬ, ಇಬ್ರಾಹಿಂಸಾಬ ತಾಳಿಕೋಟಿ, ಸಾಧಿಕ್ ಪಾನಶಾಪ, ಇಮ್ರಾನ ಖುರೇಶಿ, ಎನ್.ಎಂ. ತಿಂಥಣೀಕರ್, ಹಸನಸಾಬ ಮುಜಾವರ್, ಚಂದ್ರಶೇಖರ, ರಹೀಮ ಸುರಪುರ, ಬಸವರಾಜ ಕಡಿಮನಿ ಇದ್ದರು.
ಪದಾಧಿಕಾರಿಗಳು: ಇದೇ ಸಂದರ್ಭದಲ್ಲಿ ಹೋಬಳಿ ಶಾಖೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶಫಿ ಸೌಧಾಗರ್- ಅಧ್ಯಕ್ಷ, ಮುಬಾರಕ್ ಖುರೇಶಿ-ಉಪಾಧ್ಯಕ್ಷ, ಸದ್ದಾಂ ಹುಸೇನಿ- ಕಾರ್ಯದರ್ಶಿ, ಮಹ್ಮದ್ ವಸೀಮ್ ಅಕ್ರಂ ಅವರನ್ನು ಖಜಾಂಚಿಯನ್ನಾಗಿ ಆಯ್ಕೆ ಮಾಡಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.