ಚಿತ್ತಾಪುರ; ನ್ಯಾಯವಾದಿ ಸಂಘಕ್ಕೆ ಅಧ್ಯಕ್ಷ ಸಾಲಿಮಠ ಆಯ್ಕೆ
ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಮೇ 6
ಇಲ್ಲಿಯ ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷರಾಗಿ ಗಂಗಾಧರ ಸಾಲಿಮಠ, ಕಾರ್ಯದರ್ಶಿಯಾಗಿ ಅಯ್ಯಪ್ಪ ಅವಂಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅಂಬರೀಶ ಜಾನಿಬ್ ತಿಳಿಸಿದ್ದಾರೆ.
ಸೋಮವಾರ ಜೆಎಂಎಫ್ಸಿ ನ್ಯಾಯಲಯದ ನ್ಯಾಯವಾದಿಗಳ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಹಿರಿಯ ನ್ಯಾಯವಾದಿಗಳ ಸಲಹೆ, ಮಾರ್ಗದರ್ಶನದ ಮೇರೆಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಗಂಗಾಧರ ಸಾಲಿಮಠ, ಉಪಾಧ್ಯಕ್ಷರಾಗಿ ಎಸ್.ಎಂ. ಹೋಳಿ, ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ಅವಂಟಿ, ಸಹ ಕಾರ್ಯದರ್ಶಿ ಸೋಮಶೇಖರ ದಿಗ್ಗಾಂವ, ಕೋಶಾಧ್ಯಕ್ಷರಾಗಿ ಶೇಖ ಹುಸೇನಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಹಿರಿಯ ನ್ಯಾಯವಾದಿ ಬಿ.ಆರ್.ಕಾಂತಾ, ಚಂದ್ರಶೇಖರ ಅವಂಟಿ, ಎಸ್.ಟಿ. ಪಾಟೀಲ್, ಎಸ್.ಎನ್. ಜೋಶಿ, ಎಸ್.ಪಿ. ಸಾತನೂರ, ಮಲ್ಲಿಕಾರ್ಜುನ ಸಾಲಿಮಠ, ಬಿ.ಎಸ್. ಹಿರೇಮಠ, ಬಿ.ಬಿ. ದೊಡ್ಮನಿ, ಎಂ.ಟಿ. ಅರುಣಕರ್, ನಾಗರಾಜ ಕಡಬೂರ, ಎಸ್.ಎಂ. ನಂದೂರಕರ್, ಮಲ್ಲಿಕಾರ್ಜುನ ಭಂಗಿಮಠ, ಎಲ್.ಎ. ಪಾಟೀಲ್, ಸಿ.ಎಸ್. ಪೂಜಾರಿ, ಎಸ್.ಎನ್. ಪಾಟೀಲ್, ರಮೇಶ, ಈಶ್ವರ, ಚಂದ್ರಶೇಖರ, ಮಲ್ಲಿಕಾರ್ಜುನ್.ಎಚ್, ಮಲ್ಲಿಕಾರ್ಜುನ.ಎಂ, ಗೌರಿಶಂಕರ, ಲತಾ ಬೋಮ್ಮನಳ್ಳಿ, ಮಂಜೂಳಾ ಒಡೆಯರ್ ಉಪಸ್ಥಿತರಿದ್ದರು.
--
ಹಣ್ಣು ವಿತರಣೆ
ಗುಲ್ಬರ್ಗ: ಸೋಲಾಪುರದ ಅಶ್ವಿನಿ ಆಸ್ಪತ್ರೆ ಗುಲ್ಬರ್ಗ ಶಾಖೆಯ 3ನೇ ವಾರ್ಷಿಕೋತ್ಸವ ನಿಮಿತ್ತವಾಗಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಆಸ್ಪತ್ರೆಯ ಚೇರಮನ್ ಗಣೇಶ ತಾಪಾಡಿಯಾದ ಹಣ್ಣು ವಿತರಣೆ ಮಾಡಿದರು.
ಈ ವಾರ್ಷಿಕೋತ್ಸವ ನಿಮಿತ್ತವಾಗಿ ಪ್ರತಿ ತಿಂಗಳ 2ನೇ ಶನಿವಾರ ಉಚಿತ ತಪಾಸಣೆ ಮತ್ತು ಪ್ಯಾತೋಲಜಿ, ರೆಡಿಯಾಲೋಜಿ ಟೆಸ್ಟ್ಗಳಿಗೆ ಮತ್ತು ಅದೇ ದಿನ ದಾಖಲಾದ ರೋಗಿಗಳಿಗೆ ಶೇ.10 ರಷ್ಟು ರಿಯಾಯತಿ ಕೊಡಲಾಗುವುದು ಎಂದು ವೈದ್ಯಾಧಿಕಾರಿ ಡಾ. ಎಂ.ಎಸ್. ಪಾಟೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಗೀತಾ ಪೂಜಾರಿ, ಡಾ. ಸಂಗೀತಾ ಪಾಟೀಲ್, ಚಂದ್ರಶೇಖರ ಬಿರಾದಾರ, ಚೇತನ ಮಠ, ನಿಜಲಿಂಗಪ್ಪ ಅಷ್ಠಗಿ, ವಿಕಾಸ ಡಂಕೇ, ಜೈಭೀಮ ಭಂಗಾರೆ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

