ಗುಲ್ಬರ್ಗಾ

'ರಾಷ್ಟ್ರಗೀತೆ ಬಗ್ಗೆ ಗೌರವ, ಶ್ರದ್ಧೆ ಇರಲಿ'

Published On :

ಹುಣಸಗಿ: ಪಟ್ಟಣದ ಯುಕೆಪಿ ಕ್ಯಾಂಪಿನ ಜ್ಞಾನಜ್ಯೋತಿ ವಿದ್ಯಾ ಕೇಂದ್ರದಲ್ಲಿ ಸೋಮವಾರ ಭಾರತ ಭಾವನಾ ದಿವಸ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯರಾದ ಮಲ್ಲಣ್ಣಾ ಡಂಗಿ, ರಾಷ್ಟ್ರಗೀತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ನಮ್ಮ ರಾಷ್ಟ್ರಗೀತೆಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಹಾಡುವ ಮೂಲಕ ಭಾರತೀಯರ ಭಾವನಾತ್ಮಕ ಭಾವೈಕ್ಯ ಮತ್ತು ರಾಷ್ಟ್ರೀಯ ಭಾವೈಕ್ಯವನ್ನು ಇಡೀ ವಿಶ್ವವೇ ನೋಡುವಂತೆ ಮಾಡೋಣ ಎಂದು ಹೇಳಿದರು. ಶಾಲೆಯ ಮುಖ್ಯ ಶಿಕ್ಷಕ ನಾಗರಾಜ ರೇಶ್ಮಿ ಮಾತನಾಡಿ, ಸಿಕ್ಕ ಸಿಕ್ಕ ಸ್ಥಳಗಳಲ್ಲಿ ರಾಷ್ಟ್ರಗೀತೆಯನ್ನು ಹಾಡುವುದು ಅಪರಾಧ. ರಾಷ್ಟ್ರಗೀತೆಗೆ ಅದರದ್ದೇ ಆದ ಮಹತ್ವವಿದೆ. ತೋರಿಕೆಗೆ ಹಾಡುವುದಕ್ಕಿಂತ ದೇಶಾಭಿಮಾನ ಬೆಳೆಸಿಕೊಳ್ಳುವುದು ಮುಖ್ಯ. ನಮ್ಮ ದೇಶ, ನಮ್ಮ ಜನ ಎಂಬ ಭಾವನೆ ಎಲ್ಲರಲ್ಲೂ ಬೆಳೆಯಬೇಕು. ಆಗ ಮಾತ್ರ ಸಮೃದ್ಧ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ರಾಷ್ಟ್ರಗೀತೆಯನ್ನು ಹಾಡಿದರು. ಬಸರೆಡ್ಡಿ ಕುಪ್ಪಿ, ಸೈಯದ್ ಮೀರ್ ಇತರರು ಇದ್ದರು.
ಐಶ್ವರ್ಯಗೆ ಶೇ. 94.4 ಅಂಕ
ಸುರಪುರ: ಸಮೀಪದ ರಂಗಂಪೇಟೆಯ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಐಶ್ವರ್ಯ ಸುಖಾನಂದ ತೋಟದ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 94.4ರಷ್ಟು(590) ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಉಪ ಪ್ರಾಚಾರ್ಯ ಮಲ್ಲಪ್ಪ ಬಿಲ್ಲವ್, ಎಸ್ಡಿಎಂಸಿ ಅಧ್ಯಕ್ಷ ರಾಜೂ ಪುಲ್ಸೆ, ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
ಬಿಸಿಲಿನ ತಾಪಕ್ಕೆ ಮತದಾರ ತತ್ತರ
ಗುಲ್ಬರ್ಗ/ಶಹಾಬಾದ್: ಸಿಮೆಂಟ್ ನಗರಿ ಶಹಾಬಾದ್, ವಾಡಿಯಲ್ಲಿ ಸೂರ್ಯ ಕೆಂಡದುಂಡೆಯಾಗಿದ್ದರಿಂದ ಬಿಸಿಲಿನ ತಾಪಕ್ಕೆ ಮತದಾರರು ತತ್ತರಿಸಿ, ಮತದಾನ ಮಂದಗತಿಯಲ್ಲಿ ನಡೆದರೆ, ಮತ ಕೇಂದ್ರದಲ್ಲಿದ್ದ ಅಧಿಕಾರಿಗಳು ಉಸ್ಸಪ್ಪ ಎನ್ನುವಂತಾಗಿತ್ತು. ಬೆಳಗ್ಗೆ 7ಗಂಟೆಗೆ ನಗರದ ಎಲ್ಲ ಮತಕೇಂದ್ರಗಳಲ್ಲಿ ಮತದಾನ ಪ್ರಾರಂಭವಾಗುತ್ತಿದ್ದಂತೆ ಜನರು ಹೆಚ್ಚು ಮತದಾನ ಮಾಡತೊಡಗಿದರು. ಸೂರ್ಯ ಮೇಲೆರುತ್ತಿದ್ದಂತೆ ಜನರು ಮತದಾನಕ್ಕೆ ಬರುವುದು ಮಂದಗತಿಯಾಗುತ್ತಿದ್ದಂತೆ, ಮತಗಟ್ಟೆಗಳು ಭಣಗುಟ್ಟತೊಡಗಿತ್ತು. ಮಧ್ಯಾಹ್ನದ ವೇಳೆಗೆ ಬಿಸಿಲು ಕೆಂಡದುಂಡೆಯಾಗುತ್ತಿದ್ದಂತೆ ಬೆಳಗ್ಗೆಯಿಂದ ಉತ್ಸಾಯದಿಂದ ಓಡಾಡುತ್ತಿದ್ದ ಪಕ್ಷಗಳ ಕಾರ್ಯಕರ್ತರು ನೆರಳನ್ನು ಹುಡುಕಿಕೊಂಡು ಹೋದರೆ, ಮತಕೇಂದ್ರದಲ್ಲಿದ್ದ ಅಧಿಕಾರಿಗಳು ಸೆಕೆ ತಾಳದೆ ಗಾಳಿಗಾಗಿ ಹೊರಗೆ- ಒಳಗೆ ಓಡಾಡುತ್ತಿದ್ದರು. ಪೊಲೀಸರು, ಕೇಂದ್ರ ಮೀಸಲು ಪೊಲೀಸರು ಬಿಸಿಲಿನ ತಾಪಕ್ಕೆ ತತ್ತರಿಸುವಂತಾಗಿತ್ತು. ಸಂಜೆ 4ರವರೆಗೆ ಮಂದಗತಿಯಲ್ಲಿದ್ದ ಮತದಾನ ನಂತರ ಮತ್ತೆ ಸ್ವಲ್ಪಮಟ್ಟಿಗೆ ಚುರುಕುಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.