ಬಸವೇಶ್ವರ ಆಸ್ಪತ್ರೆಗೆ ಮತ್ತೊಂದು ಗರಿ
ಕ.ಪ್ರ. ವಾರ್ತೆ, ಗುಲ್ಬರ್ಗ, ಮೇ 13
ಬಸವೇಶ್ವರ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಪೂರ್ಣ ಸುಸಜ್ಜಿತ ನ್ಯೂರೋ ಸರ್ಜರಿ ಐಸಿಯು ಘಟಕವನ್ನು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ. ನಮೋಶಿ ಅವರು ಬಸವ ಜಯಂತಿ ಶುಭ ದಿನದಂದು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ನಮೋಶಿ ಮಾತನಾಡಿ, ಈ ದಿನ ಉದ್ಘಾಟನೆಗೊಂಡಿರುವ ನ್ಯೂರೋ ಸರ್ಜರಿ ಐಸಿಯು ಘಟಕವು ಬಸವೇಶ್ವರ ಆಸ್ಪತ್ರೆಗೆ ಮತ್ತೊಂದು ಗೌರವದ ಗರಿ ತೊಡಿಸಿದಂತಾಗಿದೆ ಎಂದರು.
ಈ ಘಟಕದಲ್ಲಿ 9 ಹಾಸಿಗೆ, 4 ತೀವ್ರ ನಿಗಾ ಘಟಕ ಮತ್ತು 5 ಹೈಡಿಪೆಂಡೆಸ್ಸಿ ಘಟಕ ಹಾಗೂ ಪ್ರತಿ ಹಾಸಿಗೆಗೆ ಸುಸಜ್ಜಿತ ಮಲ್ಟಿ ಪ್ಯಾರಾ ಮಾನಿಟರ್, ಆಧುನಿಕ ವೆಂಟಿಲೇಟರ್, ಕೇಂದ್ರೀಯ ಆಕ್ಸಿಜನ್(ಆಮ್ಲಜನಕ) ವಿತರಣಾ ಸೌಲಭ್ಯ ಹೊಂದಿದೆ ಎಂದರು.
ಹೈ-ಕ ಭಾಗದಲ್ಲಿ ಮೊದಲನೆಯದು: ಆಸ್ಪತ್ರೆಯಲ್ಲಿ ಅಳವಡಿಸಿರುವ ನ್ಯೂರೋ ಸರ್ಜರಿ ಐಸಿಯು ಘಟಕವು ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿಯೇ ಮೊದಲನೆಯದು. ನರ ಸಂಬಂಧಿತ ಸಶ್ತ್ರಚಿಕಿತ್ಸೆ ನಂತರ ರೋಗಿಗಳನ್ನು ಉತ್ತಮ ರೀತಿಯಲ್ಲಿ ಕಾಳಜಿಪೂರ್ವಕ ಉಪಚರಿಸಲು ಅನುಕೂಲವಾಗಿದೆ. ಈ ಘಟಕಕ್ಕೆ ಸುಮಾರು 70 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
ನ್ಯೂರೋ ಸರ್ಜರಿ ವಿಭಾಗ ಆರಂಭವಾಗಿ ಕಳೆದ ಒಂದು ವರ್ಷದಲ್ಲಿ ಸುಮಾರು 200 ನವಜಾತ ಶಿಶುವಿನಿಂದ ವೃದ್ಧಾಪ್ಯದವರೆಗಿನ ನರ ಸಂಬಂಧಿತ ಪ್ರಮುಖ ಸಶ್ತ್ರ ಚಿಕಿತ್ಸೆ ಮಾಡಲಾಗಿದೆ.
ನ್ಯೂರೋಸರ್ಜರಿ ವಿಭಾಗವು ಈ ಭಾಗದ ಜನರಿಗೆ ಮತ್ತು ವಿಶೇಷವಾಗಿ ನರ ಸಂಬಂಧಿತ ರೋಗಿಗಳಿಗೆ ಆರ್ಥಿಕವಾಗಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡಿದೆ. ಹೆಚ್ಚಿನ ಚಿಕಿತ್ಸೆಗಾಗಿ ಪಕ್ಕದ ನಗರಗಳಿಗೆ ಹೋಗುವುದನ್ನು ತಪ್ಪಿಸಲಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಬಾಬುರಾವ ಮಂಗಾಣೆ, ಸಹ ಕಾರ್ಯದರ್ಶಿ ಡಾ. ಸಂಪತಕುಮಾರ ಲೋಯಾ, ಬಸವೇಶ್ವರ ಆಸ್ಪತ್ರೆಯ ಸಂಚಾಲಕ ಡಾ. ಭೀಮಾಶಂಕರ ಬಿಲಗುಂದಿ ಮತ್ತು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಶಿವಾನಂದ ಮಾನಕರ್, ಶಿವರಾಜ ನಿಗ್ಗುಡಗಿ, ಎನ್.ಡಿ.ಪಾಟೀಲ್, ರಾಜಾ ಭೀಮಳ್ಳಿ ಮತ್ತು ಸಂಜೀವ ಪಾಟೀಲ್ ಹಾಗೂ ಎಂ.ಆರ್. ಮೆಡಿಕಲ್ ಕಾಲೇಜಿನ ಡೀನರಾದ ಡಾ. ಬಿ.ಮಲ್ಲಿಕಾರ್ಜುನ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಆರ್. ಹರವಾಳ ಮತ್ತು ನ್ಯೂರೋ ಸರ್ಜನ್ ಡಾ. ಶಶಾಂಕ ರಾಮದುರ್ಗ ಹಾಗೂ ಮೆಡಿಕಲ್ ಕಾಲೇಜಿನ ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

