ಬಸವಣ್ಣನ ಆದರ್ಶ ಸರ್ವರಿಗೂ ಮಾದರಿ: ಸಜ್ಜನ್
ಕ.ಪ್ರ. ವಾರ್ತೆ ಸುರಪುರ ಮೇ 14
ಬಸವೇಶ್ವರರು ದಲಿತ, ಅಸ್ಪೃಶ್ಯತೆ,ಶೋಷಿತರ ವರ್ಗದ ಆಶಾಕಿರಣವಾಗಿದ್ದಾರೆ. ಮಾನವ ಜನಾಂಗವನ್ನು ಸಮಾನತೆಯಿಂದ ಕಾಣುವ ಅವರ ತತ್ವಗಳು ವಿಶ್ವಕ್ಕೆ ಮಾದರಿ. ಯಾವುದೇ ಜಾತಿ ಜನಾಂಗಕ್ಕೆ ಸಿಮೀತವಾದ ವ್ಯಕ್ತಿಯಲ್ಲ. ಸರ್ವರಿಗೂ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ತಾಲೂಕು ವೀರಶೈವ ಸಮಿತಿ ಅಧ್ಯಕ್ಷ ಸುರೇಶ ಸಜ್ಜನ್ ಹೇಳಿದರು.
ಇಲ್ಲಿಗೆ ಸಮೀಪದ ರಂಗಂಪೇಟೆಯ ಬಸವೇಶ್ವರ ಉಚಿತ ಪ್ರಸಾದ ನಿಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಮಸ್ಮರಣೆಯಿಂದ ಕಷ್ಟ ದೂರ: ಬಸವಣ್ಣ ಎಂಬ ಹೆಸರಿನಲ್ಲೇ ಅದ್ಭುತ ಶಕ್ತಿ ಅಡಗಿದೆ. ಕಷ್ಟ ಮತ್ತು ಆಪತ್ಕಾಲದಲ್ಲಿ ನಮಗರಿವಿಲ್ಲದಂತೆ ಬಸವ ಎಂಬ ನಾಮ ಉಚ್ಚಾರವಾಗುತ್ತದೆ. ಈ ನಾಮಸ್ಮರಣೆಯಿಂದ ಕಷ್ಟ ದೂರವಾಗುತ್ತದೆ. ಹೀಗಾಗಿ ಬಸವಣ್ಣ ಒಬ್ಬ ವ್ಯಕ್ತಿಯಲ್ಲ, ಶಕ್ತಿಯಾಗಿ ನಿಲ್ಲುತ್ತಾರೆ ಎಂದರು.
ಬಿಜಾಪುರ ಮಹಿಳಾ ಕಾಲೇಜು ಉಪನ್ಯಾಸಕ ಯು.ಎನ್. ಕುಂಟೋಜಿ ಮಾತನಾಡಿದರು. ಕಸಾಪ ಅಧ್ಯಕ್ಷ ಶಾಂತಪ್ಪ, ಸಂಗಣ್ಣ, ಸೋಮಶೇಖರ, ಮಂಜುನಾಥ, ಶಿವರಾಜಪ್ಪ, ಶಿವಕುಮಾರ, ಮಹೇಶ ಗುಳಗಿ, ಶರಣಪ್ಪ ಕಲಕೇರಿ, ಮಲ್ಲಿಕಾರ್ಜುನ ರೆಡ್ಡಿ, ನಿಂಗಣ್ಣ , ಅಮರೇಶ, ಆದಪ್ಪ ಜಾಲಹಳ್ಳಿ, ವಿರೇಶ ವಾರದ, ಶಿವಶರಣಪ್ಪ ಹೆಡಗಿನಾಳ, ದೊಡ್ಡ ದೇಸಾಯಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

