ಗುತ್ತೇದಾರ ಅಭಿಮಾನಿಗಳಿಂದ ಭುಗಿಲೆದ್ದ ಆಕ್ರೋಶ
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಮೇ 18
ಅಫಜಲ್ಪುರ ಮತಕ್ಷೇತ್ರದಿಂದ ಕಾಂಗ್ರೆಸ್ನಿಂದ ಶಾಸಕರಾಗಿ ಆಯ್ಕೆಯಾದ ಮಾಲಿಕಯ್ಯ ಗುತ್ತೇದಾರ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಅವರ ಕಾರ್ಯಕರ್ತರು, ಅಭಿಮಾನಿಗಳು ಪರಹತಾಬಾದ್ ಬಳಿ ರಸ್ತೆತಡೆ ನಡೆಸಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 25 ವರ್ಷಗಳಿಂದ ಅಫಜಲ್ಪುರ ತಾಲೂಕಿನ ಹಿಂದುಳಿದ ಧೀನ ದಲಿತರ ನಾಯಕರಾಗಿ ಎಲ್ಲಾ ಜನಾಂಗದ ವರ್ಗಗಳಿಗೆ ಸಮವಾಗಿ ಕಾಣುತ್ತಾ ಅವರ ಏಳಿಗೆಗಾಗಿ ದುಡಿಯುತ್ತ ಸಮಾಜದ ಮೇಲು- ಕೀಳು ಎಂಬ ಭಾವನೆ ಇಲ್ಲದೇ ಒಂದೇ ರೀತಿಯಿಂದ ಕಾಣುತ್ತ ಬಂದಿದ್ದಾರೆಂದು ಅಭಿಪ್ರಾಯಪಟ್ಟರು.
ನೇರ ದಿಟ್ಟ, ನಡಿಗೆ, ನಾಯಕರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಂಡು ಈ ಹಿಂದುಳಿದ ಭಾಗಕ್ಕೆ ನ್ಯಾಯ ಒದಗಿಸಿಕೊಡಬೇಕು. ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ ಗುತ್ತೇದಾರ ಅವರು ಯಾವುದೇ ಕಷ್ಟದ ಕಾಲದಲ್ಲಿ ಅವರು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದುಕೊಂಡು ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಆದರೆ ಈ ಬಾರಿ ಅಂತಹ ಒಳ್ಳೆಯ ನಾಯಕರಿಗೆ ಕಾಂಗ್ರೆಸ್ ಪಕ್ಷ ಮೋಸ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದತ್ತಾತ್ರೆಯ ಪಾಟೀಲ್, ಚಂದನಕುಮಾರ ಬುಳ್ಳಾ, ಸಿದ್ದು ಹಳ್ಳಿ, ಮಲ್ಲಿನಾಥ ಪಾಟೀಲ್ ಚಿಣಮಗೇರಾ, ವಿಶ್ವನಾಥ ಪಾಟೀಲ್ ತಿಳಗೊಳ, ಶರಣು ಭಾಲ್ಕಿ ಸೇರಿದಂತೆ ಅಭಿಮಾನಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

