ನೀರಿನ ಸಮಸ್ಯೆ ನಿವಾರಣೆಗೆ ಹಿಂದೇಟು ಹಾಕದಿರಿ
ಕ.ಪ್ರ. ವಾರ್ತೆ ಆಳಂದ ಮೇ 22
ತಾಲೂಕಿನ ಅನೇಕ ಕಡೆ ನೀರಿನ ಸಮಸ್ಯೆ ಎದುರಿಸಲು ಅಧಿಕಾರಿಗಳ ಸೈನ್ಯ ಕಾರ್ಯಪ್ರವರ್ತರಾಗಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಅಕುರಾತಿ ಅವರು ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಕರೆದ ಸಂಬಂಧಿತ ಅಧಿಕಾರಿಗಳು ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಅನುದಾನಕ್ಕೆ ಆಗ್ರಹ: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೈಗೊಂಡ ಕ್ರಮದ ಕುರಿತು ತಾಪಂ ಇಒ ಅಬ್ದುಲ್ ಸಲಾಂ, ಜಿಪಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಶಾಂತಪ್ಪ ಠಕ್ಕಳಕಿ ಅವರಿಗೆ ಪ್ರಶ್ನಿಸಿದರು.
30 ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಿ ಸಮಸ್ಯೆ ನಿವಾರಿಸಲಾಗುತ್ತಿದೆ. ಕೋರಿದ ಹೆಚ್ಚಿನ ಅನುದಾನ ದೊರೆತರೆ ಬಾಕಿ ಸಮಸ್ಯೆ ನಿವಾರಿಸಲು ಅನುಕೂಲವಾಗುತ್ತದೆ ಎಂದು ಠಕ್ಕಳಕಿ ಅವರು ಸಿಇಒ ಗಮನಕ್ಕೆ ತಂದರು.
ಒಟ್ಟಾರೆ ಜನರಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಗತ್ಯಕ್ಕನುಗುಣವಾಗಿ ಅನುದಾನ ನೀಡಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೇಳಿದರು.
ಅಧಿಕಾರಿಗಳಿಗೆ ಪಾಠ: ಪ್ಲಾನ್ ಪ್ಲಸ್ ಮತ್ತು ಆಕ್ಸನ್ ಸಾಪ್ ಎಂದರೇನು ಎಂದು ಸಭೆಯಲ್ಲಿ ಪಲ್ಲವಿ ಆಕುರಾತಿ ಪ್ರಶ್ನಿಸಿದಾಗ ಅಧಿಕಾರಿಗಳು ಮೌನ ಮುರಿಯದೆ ಕೆಲಕಾಲ ತಬ್ಬಿಬ್ಬಾಗಿ ಕುಳಿತ ಘಟನೆ ನಡೆಯಿತು.
ಈ ಮಧ್ಯೆ ಪಿಡಿಒ ಒಬ್ಬರು ಆಡಳಿತಾತ್ಮಕವಾಗಿ ಮಂಜೂರಾತಿ ಪಡೆದ ಕ್ರಿಯಾ ಯೋಜನೆ ಕಾಮಗಾರಿಗಳ ಅಂತರ್ಜಾಲಕ್ಕೆ ಅಳವಡಿಸುವುದೇ ಪ್ಲಾನ್ ಪ್ಲಸ್ ಜಾರಿಯಾಗಿದೆ ಎಂದು ಉತ್ತರಿಸಿದಾಗ ಸಿಇಒ ಗುಡ್ ಎಂದರು.
ಪ್ರತಿ ತಿಂಗಳ ಪ್ರಗತಿ ವರದಿಯನ್ನು ಅಳವಡಿಸುವುದೇ ಆಕ್ಸನ್ ಸಾಪ್ ಜಾರಿಗೆ ಬಂದಿದೆ. ಎಲ್ಲರೂ ಇದನ್ನು ಅನುಷ್ಠಾನ ತರಬೇಕು ಎಂದು ಆಡಳಿತಾತ್ಮಕ ವರದಿ, ದಾಖಲೆ ಸಂಗ್ರಹ ವಿವರವನ್ನು ಪಲ್ಲವಿ ಆಕುರಾತಿ ತಿಳಿ ಹೇಳಿದರು.
ತಾಕೀತು: ಬಸವ ವಸತಿ ನಿಗಮ, ಇಂಧಿರಾ ಅವಾಜ್ ಮನೆಗಳು ನಿರ್ಮಾಣದ ಗುರಿ ತಲುಪಿಲ್ಲ. ತಕ್ಷಣವೇ ಕಾಮಗಾರಿ ಕೈಗೊಂಡು ಮನೆಗಳು ಪೂರ್ಣಗೊಳಿಸಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನ 29 ಗ್ರಾಮ ಪಂಚಾಯತ್ಗಳಿಗೆ ಗ್ರಾಮ ಸ್ವರಾಜ್ ಯೋಜನೆ ಅನುದಾನ ಬಿಡುಗಡೆಯಾಗಿದೆ. 10 ದಿನದೊಳಗೆ ಕ್ರಿಯಾ ಯೋಜನೆ ಕೈಗೊಂಡು ಕಾಮಗಾರಿ ಅನುಮತಿ ಪಡೆಯಬೇಕು ಎಂದರು.
ಜಿಪಂ ಉಪ ಕಾರ್ಯದರ್ಶಿ ವಸಂತಕುಮಾರ ಕುಲಕರ್ಣಿ, ಮುಖ್ಯ ಲೇಕಾಧಿಕಾರಿ ಎನ್.ಎ. ಪಟವೇಗಾರ, ಯೋಜನಾಧಿಕಾರಿ ವಿರೂಪಾಕ್ಷಪ್ಪ ಇತರರು ಉಪಸ್ಥಿತರಿದ್ದರು. ಕೆಲ ಗ್ರಾಪಂ ಪಿಡಿಓ ಗೈರು ಹಾಜರಾಗಿರುವುದಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿಡಿಮಿಡಿಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

