ಪರೋಪಕಾರದಿಂದ ಬದುಕು ಸಾರ್ಥಕ: ಶೈಲೇಶಾಚಾರ್ಯ
ಗುಲ್ಬರ್ಗ: ವಯಸ್ಸಿನಿಂದ ಹಿರಿತನ ಪ್ರಾಪ್ತವಾಗದು, ಬದಲಾಗಿ ಜೀವಿತಾವಧಿಯಲ್ಲಿ ಧಾರ್ಮಿಕ ಮತ್ತು ಸಾಮಾಜಿಕವಾಗಿ ಎಷ್ಟು ಪರೋಪಕಾರಿಯಾಗಿ ಜೀವನ ಸಾಗಿಸಿದ್ದೇವೆ ಎಂಬುವುದನ್ನು ಹಿರಿತನ ಅವಲಂಬಿಸುತ್ತದೆ ಎಂದು ವಿದ್ವಾನ್ ಶೈಲೇಶಾಚಾರ್ಯ ಗೋಠೆ ನುಡಿದರು.
ಲೋಕಾಪುರದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಗುರುರಾಜ ಜೋಶಿ ಹಾಗೂ ಗುಲ್ಬರ್ಗದ ಹಿರಿಯ ಪತ್ರಕರ್ತ ಸುಭಾಷ ಜೋಶಿ ಅವರ ಷಷ್ಠಿಪೂರ್ತಿ ಸಮಾರಂಭದ ನಿಮಿತ್ತ ಬೆಂಗಳೂರಿನ ಶಾಣ್ಯಾ ಮಾಸ್ತರ ಸೇವಾ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುರು ಪರಂಪರೆಯಿಂದಲೇ ಬಂದಿರುವ ಶಾಣ್ಯಾ ಮಾಸ್ತರ (ಬಿ.ಎನ್. ಜೋಶಿ) ಅವರು ಜಾತ್ಯತೀತರಾಗಿದ್ದರಲ್ಲದೇ ಶಿಕ್ಷಣ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ವಿಧಾಯಕ ಕೆಲಸ ಮಾಡುವುದರೊಂದಿಗೆ ಮರಾಠಿಮಯವಾಗಿದ್ದ ಸ್ಥಳದಲ್ಲಿ ಕನ್ನಡ ಬಿತ್ತಿ ಬೆಳೆಸಿದವರು ಅಂಥವರ ಮಾರ್ಗದರ್ಶನದಲ್ಲಿ ಸಾಗಿ ಬಂದಿರುವ ಜೋಶಿ ಸಹೋದರರು ಕೂಡ ಜನಮುಖಿಯಾಗಿ ಅನೇಕ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಜನಾನುರಾಗಿಯಾಗಿದ್ದಾರೆ ಎಂದರು.
ಜಿ.ಬಿ. ಜೋಶಿ, ಎಸ್.ಬಿ. ಜೋಶಿ ದಂಪತಿಯನ್ನು ಶಿಷ್ಯ ಬಳಗ ಸನ್ಮಾನಿಸಿ ಗೌರವಿಸಿತು. ಗಣ್ಯರನ್ನು ಸತ್ಕರಿಸಲಾಯಿತು.
ಪ್ರಾಸ್ತಾವಿಕ ಮಾತನಾಡಿದ ಕೆ.ಎಸ್. ಆಚಾರ್ಯ ಶಾಣ್ಯಾ ಮಾಸ್ತರ ಸೇವಾ ಪ್ರತಿಷ್ಠಾನದಿಂದ ಅನೇಕ ರಚನಾತ್ಮಕ ಮತ್ತು ಸಾಮಾಜಿಕ ಕಾರ್ಯ ಯೋಜನೆಗಳನ್ನು ಹಾಕಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅವರ ಹೆಸರಿನಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ವೆಬ್‌ಸೈಟ್‌ನ್ನು ಮಂತ್ರಾಲಯದಲ್ಲಿ ಲೋಕಾರ್ಪಣೆಗೊಳಿಸುವ ಚಿಂತನೆ ನಡೆದಿದೆ ಎಂದರು.
ಪ್ರತಿಷ್ಠಾನದ ಪ್ರಶಾಂತ ಗೋಕಾಕ ಸ್ವಾಗತಿಸಿದರು. ಜೆ. ಸುಧೀಂದ್ರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

