ಗುಲ್ಬರ್ಗಾ

ಲಿಂಗಾಯತ ಸಕಲ ಜೀವಾತ್ಮರ ಸ್ವತ್ತು

Published On :

ಕ.ಪ್ರ. ವಾರ್ತೆ  ಶಹಾಪುರ  ಮೇ 26
ಸೂರ್ಯ, ಭೂಮಿ, ಗಾಳಿಯಂತೆ ಲಿಂಗಾಯತವೂ ಕೂಡ ಸಕಲ ಜೀವಾತ್ಮರ ಸ್ವತ್ತು. ಯಾವುದೋ ಒಂದು ಜಾತಿಯಲ್ಲಿ ಹುಟ್ಟಿದವರು ಆಯಾ ಜಾತಿಯವರು ಅಲ್ಲವೇ ಅಲ್ಲ. ಚೆನ್ನಯ್ಯನನ್ನು ಮಾದಾರನೆಂದಾಗಲಿ, ಡೋಹರನನ್ನು ಕಕ್ಕಯ್ಯನೆಂದಾಗಿ ಬಸವಣ್ಣರನ್ನು ಬ್ರಾಹ್ಮಣನೆಂದು ಕರೆಯಲು ಸಾಧ್ಯವಿಲ್ಲ.
 ಬಸವ ಜಯಂತ್ಯುತ್ಸವದ ಸಂದರ್ಭದಲ್ಲಿ ಲಿಂಗಾಯತರೆಂದು ಹೇಳಿಕೊಳ್ಳುವವರು ಆತ್ಮಾವಲೋಕನ ಮಾಡಿಕೊಳ್ಳಲೇಬೇಕಾಗಿದೆ ಎಂದು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿಗಳು ಕರೆ ನೀಡಿದರು.
  ಪಟ್ಟಣದ ಬಸವ ಮಾರ್ಗ ಪ್ರತಿಷ್ಠಾನ ಏರ್ಪಡಿಸಿದ್ದ, ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ ನಡೆದ ಬಸವ ಬೆಳಕು- 20ರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಮೌಢ್ಯ, ಕಂದಾಚಾರಗಳನ್ನು ಜನಮಾನಸದಲ್ಲಿ ಬಿತ್ತುವ ಕಾರ್ಯವನ್ನು ಮಾಡುವ ಮಠಾಧೀಶರು ಮೊದಲು ಬದಲಾಗಬೇಕು.
ಲಿಂಗಾಯತ ಇಂದು ಮಾಯ: ಉಪನಿಷತ್ತಿನಲ್ಲಿ ಇರುವುದೆಲ್ಲ ವಚನ ಸಾಹಿತ್ಯದಲ್ಲಿ ಇದೆ. ಆದರೆ ವಚನ ಸಾಹಿತ್ಯದಲ್ಲಿ ಇರುವುದೆಲ್ಲವೂ ಉಪನಿಷತ್ತಿನಲ್ಲಿ ಇಲ್ಲ. ಧರ್ಮ ಮತ್ತು ತತ್ವ ಬೆಳೆಸುವಲ್ಲಿ ಲಿಂಗಾಯತರು ವಿಫಲವಾಗಿದ್ದಾರೆ. ವಿಶ್ವದ್ಯಾಂತ ಮಾನ್ಯ ಮಾಡಬಹುದಾದ ತತ್ವಗಳು ಹೊಂದಿದ ಲಿಂಗಾಯತ ಇಂದು ನಶಿಸಿ ಹೋಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಮ್ಮ ಜೀವನ ಸಾರ್ಥಕ: ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರುಪಾಟೀಲ ಶಿರವಾಳ ಮಾತನಾಡಿ, ಸರಳತೆಯಿಂದ ವ್ಯಕ್ತಿಯ ವ್ಯಕ್ತಿತ್ವ ಬೆಳಗುತ್ತದೆಯೆ ಹೊರತು, ಗತ್ತುಗಾರಿಕೆಯಿಂದಲ್ಲ. ಎನಗಿಂತ ಕಿರಿಯರಿಲ್ಲ ಎಂದು ಹೇಳಿದ ಬಸವಣ್ಣನವರು ಇಂದು ವಿಶ್ವಮಾನ್ಯ ವ್ಯಕ್ತಿಯಾಗಿದ್ದಾರೆ. ಅವರನ್ನು ಎಲ್ಲರೂ ಗೌರವಿಸಿ, ಅನುಸರಿಸುವ ಮೂಲಕ ನಮ್ಮ ಜೀವನ ಸಾರ್ಥಕಪಡಿಸಿಕೊಳ್ಳಬೇಕೆಂದು ಹೇಳಿದರು.
  ಶರಣುಕುಮಾರ ಜಾಲಹಳ್ಳಿ, ಭೀಮರಾಯ ನುಚ್ಚಿನ ಬಸವ ಮಾರ್ಗದ ಹಾಡುಗಳನ್ನು ಹಾಡಿದರು. ಚಂದ್ರಕಾಂತ ಕರದಳ್ಳಿ ಸ್ವಾಗತಿಸಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
 ರಾಚಪ್ಪ ಕೋಟಿಕಾನಿ ಹಾಗೂ ಶಾಸಕ ಗುರುಪಾಟೀಲರನ್ನು ಬಸವ ಮಾರ್ಗ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.
  ಸಭೆಯಲ್ಲಿ ಸೂಗಪ್ಪ ಚುಕ್ಕಿ, ಶರಣಬಸವ ಕಲ್ಲಾ, ಸೋಮಶೇಖರ ಮಣ್ಣೂರ, ಎಚ್. ದಂಡಪ್ಪ ದೇವದುರ್ಗ, ರಾಜು ನಗನೂರ, ಗುರು ಕಾಮ, ಸಣ್ಣ ನಿಂಗಪ್ಪ ನಾಯ್ಕೋಡಿ, ರವಿ ಆನೇಗುಂದಿ, ಸಿದ್ದಲಿಂಗಪ್ಪ ಆನೇಗುಂದಿ, ಮಹೇಶ ಗಂವಾರ, ಹುಸನಪ್ಪ ಕಟ್ಟಿಮನಿ, ಡಾ. ಬಸವರಾಜ ಇಜೇರಿ, ಬಸವರಾಜ ಸಿನ್ನೂರ, ಅವಿನಾಶ ಸಿನ್ನೂರ, ಷಣ್ಮುಖ ಅಣಬಿ, ಸಾಯಿಬಣ್ಣ ಪುಲರ್, ಡಾ.ಎಸ್.ಆರ್.ಸಿನ್ನೂರ, ಡಾ. ಚಂದ್ರಶೇಖರ ಸುಬೇದಾರ, ಸಂಗಣ್ಣ ದೋರನಹಳ್ಳಿ, ಶಿವಯೋಗಪ್ಪ ಮುಡಬೂಳ, ಎ.ವೈ. ಪದ್ಮಾಕರ್, ಜೆ.ಎಸ್. ನಾಡಗೌಡರ, ಚಂದ್ರಶೇಖರ ಆನೇಗುಂದಿ, ಬಸವ ಅಭಿಮಾನಿಗಳು ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.