ಗುಲ್ಬರ್ಗಾ

ಇಂದು ವಿಶ್ವ ತಂಬಾಕು ರಹಿತ ದಿನ

Published On :

ಗುಲ್ಬರ್ಗ: ಜಿಲ್ಲಾ ಆಸ್ಪತ್ರೆಯ ಜಿಲ್ಲಾ ತಂಬಾಕು ನಿಯಂತ್ರಣ ಘಟಕವು ಮೇ 31ರಂದು ವಿಶ್ವ ತಂಬಾಕು ರಹಿತ ದಿನಾಚರಣೆ ಆಚರಿಸಲಿದೆ. 31ರ ಮೇ ವಿಶ್ವತಂಬಾಕು ರಹಿತ ದಿನಾಚರಣೆ ಅಂಗವಾಗಿ ಜಾಥಾ ಹಾಗೂ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 8ಕ್ಕೆ ನಿಗದಿಪಡಿಸಿದ ಆಯಾ ಸ್ಥಳಗಳಲ್ಲಿ ತಂಬಾಕು ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಆ ಸ್ಥಳದಿಂದಲೇ ಜಾಥಾವನ್ನು ಪ್ರಾರಂಭಿಸಿ ಜಗತ್ ವೃತ್ತಕ್ಕೆ ಬೆಳಗ್ಗೆ 10ಕ್ಕೆ ತಲುಪುವುದು.
ವಿವಿಧೆಡೆಯಿಂದ ಆರಂಭವಾಗುವ ಜಾಥಾದ ವಿವರ: ಎಸ್. ನಿಜಲಿಂಗಪ್ಪ ದಂತ ಕಾಲೇಜು ಗುಲ್ಬರ್ಗದ ವಿದ್ಯಾರ್ಥಿಗಳು ಸುಂದರ ನಗರದ ಸಮುದಾಯ ಭವನದಿಂದ ಜಾಥಾವನ್ನು ಆರಂಭಿಸಿ, ಜಗತ್ ವೃತ್ತಕ್ಕೆ ತಲುಪುವುದು. ಅಲಬದರ್ ದಂತ ಕಾಲೇಜು ವಿದ್ಯಾರ್ಥಿಗಳು ತಾರಫೈಲ್ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಾಥಾ ಆರಂಭಿಸಿ, ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದ ಮಾರ್ಗವಾಗಿ ಜಗತ್ ವೃತ್ತಕ್ಕೆ ತಲುಪುವುದು. ಕಾಲೇಜು ಆಫ್ ನರ್ಸಿಂಗ್ ವಿದ್ಯಾರ್ಥಿಗಳು ಮಾಣಿಕೇಶ್ವರಿ ನಗರ, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಾಥಾ ಪ್ರಾರಂಭಿಸಿ, ಶರಣಬಸವೇಶ್ವರ ದೇವಸ್ಥಾನ ಹಾಗೂ ಗೋವಾ ಹೋಟೇಲ್ ಮಾರ್ಗವಾಗಿ ಜಗತ್ ವೃತ್ತಕ್ಕೆ ತಲುಪುವುದು. ಅಲ್ ಕರಿಮ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಶಿವಾಜಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಾಥಾವನ್ನು ಆರಂಭಿಸಿ, ಜಗತ್ ವೃತ್ತಕ್ಕೆ ತಲುಪುವುದು.
ನಾಳೆ ಜಯಂತಿ
ಚಿತ್ತಾಪುರ: ತಾಲೂಕಿನ ಭಾಗೋಡಿಯಲ್ಲಿ ಜೂನ್ 1ರಂದು ಬುದ್ಧ, ಬಸವ, ಅಂಬೇಡ್ಕರ್ ಅವರ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಗ್ರಾಮ ಶಾಖೆ ಸಂಚಾಲಕ ಭೀಮರಾಯ ಹೆಡಗಿ ಮತ್ತು ಮಲ್ಲಿಕಾರ್ಜುನ ಏರಿ ತಿಳಿಸಿದ್ದಾರೆ. ಅಂದು ಬೆಳ್ಳಗೆ 9ಕ್ಕೆ ಗ್ರಾಪಂ ಸದಸ್ಯೆ ಚಂದ್ರಮತಿ ಕುದ್ರಿ ಮೆರವಣೆಗೆ ಚಾಲನೆ ನೀಡಲಿದ್ದಾರೆ. ಸಂಜೆ 4ಕ್ಕೆ ನಡೆಯುವ ಬಹಿರಂಗ ಸಭೆಯನ್ನು ಶಾಸಕ ಪ್ರಿಯಾಂಕ್ ಖರ್ಗೆ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ.ಆರ್.ಕೆ. ಹುಡಗಿ, ಅರ್ಜುನ ಭದ್ರೆ, ಸುರೇಶ ಹಾದಿಮನಿ ಆಗಮಿಸಲಿದ್ದಾರೆ. ಚಿತ್ತಾಪುರ ಪುರಸಭೆ ನೂತನ ಸದಸ್ಯರಿಗೆ ಸನ್ಮಾನಿಸಲಾಗುವುದು. ಕಾರ್ಯಕ್ರಮಕ್ಕೆ ತಾಲೂಕಿನ ದಲಿತ ಪರ ಸಂಘಟನೆಗಳ ಮುಖಂಡರು, ಬುದ್ದಿ ಜೀವಿಗಳು, ಅಂಬೇಡ್ಕರ್ ಅನುಯಾಯಿಗಳು ಆಗಮೀಸಬೇಕೆಂದು ಶಿವಶರಣ ಬುಳ್ಳಾ, ಕಾಶಿನಾಥ ಏರಿ, ಮಲ್ಲಿಕಾರ್ಜುನ ಕುದರಿ, ಶಿವಾನಂದ ಏರಿ, ಬಸವರಾಜ ಮದಲಿ, ಸಾಯಬಣ್ಣ ಮುಗಳನಾಗಾಂವ, ಗಂಗಾಧರ ಬುಳ್ಳಾ, ಶಾಂತಪ್ಪ ಕೋಡದೂರ, ರಾಜು ಪೋತನಕರ್ ಕೋರಿದ್ದಾರೆ.
ಯರನಾಳ ಆಯ್ಕೆ
ಗುಲ್ಬರ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರನ್ನಾಗಿ ಲೇಖಕ ಡಾ. ರಾಜೇಂದ್ರ ಯರನಾಳ ಅವರನ್ನು ನೇಮಕ ಮಾಡಲಾಗಿದೆ. ಸುಮಾರು 15ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ ಡಾ. ರಾಜೇಂದ್ರ ಯರನಾಳ ಅವರು ಜನಪದ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ. ಮುಂದಿನ 2 ವರ್ಷಗಳವರೆಗೆ ಜಿಲ್ಲಾ ಘಟಕಕ್ಕೆ ಗೌರವ ಕೋಶಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.