ನೇತಾರರ ಬದುಕು ಯುವಜನತೆಗೆ ಮಾದರಿಯಾಗಲಿ: ಮಹೇಶ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ನ.4
ಎಐಡಿವೈಓ ಬ್ರಹ್ಮಪುರ ಘಟಕ ವತಿಯಿಂದ ಇತ್ತೀಚೆಗೆ ಬ್ರಹ್ಮಪುರದ ಕನಕ ನಗರದ ಖಣಿ ಏರಿಯಾದಲ್ಲಿನ ಉದ್ಯಾನವನದಲ್ಲಿ ಶ್ರಮದಾನ ಹಮ್ಮಿಕೊಳ್ಳಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ಮಹೇಶ ನಾಡಗೌಡ ಕಾರ್ಯಕ್ರಮ ಉದ್ಘಾಟಿಸಿ, ಪ್ರಾರಂಭದಲ್ಲಿ ಕೆಲವೇ ಕೆಲವು ವಿದ್ಯಾರ್ಥಿ ಯುವಕರು ಸಾಮಾಜಿಕ ಕಾರ್ಯಕ್ಕೆ ಮುಂದೆ ಬರುತ್ತಾರೆ. ಅವರೇ ನಿಜವಾಗಿ ಯುವಕರಾಗಿದ್ದಾರೆ. ಸಾಮಾಜಿಕ ಕಾಳಜಿಯುಳ್ಳವರು, ಸಮಾಜವನ್ನು ಪ್ರೀತಿಸುವವರು, ಅಲ್ಲದೇ ಹೊಸ ನೀತಿ ನೈತಿಕತೆ, ಉನ್ನತ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಆಕರ್ಷಿತರಾಗಿ ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ತೊಡಗಲು ಉತ್ಸಾಹದಿಂದ ಮುಂದೆ ಬರುತ್ತಾರೆ ಎಂದು ಹೇಳಿದರು.
ನಮ್ಮ ಸಂಘಟನೆ ಭಾರತದ ಏಕೈಕ ಕ್ರಾಂತಿಕಾರಿ ಯುವಜನ ಸಂಘಟನೆಯಾಗಿದ್ದು, ಹೋರಾಟದ ಮುಂಚೂಣಿಯಲ್ಲಿದೆ. ಸಂಘಟನೆಯು ಯುವಜನ ಶಿಬಿರ, ಪ್ರವಾಹ ಸಂತ್ರಸ್ತರಿಗೆ ನೆರವು, ಗ್ರಾಮೀಣ ಕ್ರೀಡಾಕೂಟಗಳು, ನಾಟಕ ತರಬೇತಿ, ಪವಾಡ ರಹಸ್ಯ ಬಯಲುಗಳಂತಹ ವಿಶೇಷ ಕಾರ್ಯ ಚಟುವಟಿಕೆಗಳನ್ನು ಆಯೋಜಿಸುತ್ತಿದೆ ಎಂದು ಹೇಳಿದರು.
ಪ್ರಸಕ್ತ ಪರಿಸ್ಥಿತಿಯಲ್ಲಿ ಯುವಜನರು ಅಶ್ಲೀಲತೆ ಮತ್ತು ಮಾದಕ ವಸ್ತುಗಳಂತಹ ಮತ್ತಿತರ ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುವುದು ವಿಷಾದದ ಸಂಗತಿ. ನೇತಾಜಿ, ಭಗತಸಿಂಗ್, ಚಂದ್ರಶೇಖರ ಆಜಾದರಂತಹ ಮಹಾನ ವ್ಯಕ್ತಿಗಳ ಆದರ್ಶವನ್ನು ವಿದ್ಯಾರ್ಥಿ ಯುವಕರು ಅಳವಡಿಸಿಕೊಳ್ಳಬೇಕು. ಆದ್ದರಿಂದ ಇಂತಹ ಸೇವಾ ಮನೋಭಾವನೆಯ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ತಮ್ಮನ್ನೇ ತಾವು ತೊಡಗಿಸಿಕೊಳ್ಳಬೇಕು ಎಂದರು.
ಘಟಕದ ಅಧ್ಯಕ್ಷ ಭೀಮಾಶಂಕರ ಪಾಣೇಗಾಂವ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನೆಯ ಕಚೇರಿ ಕಾರ್ಯದರ್ಶಿ ಶಂಕರ ಹೂಗಾರ, ಘಟಕದ ಉಪಾಧ್ಯಾಕ್ಷ ಶಿವಲಿಂಗ ಎಸ್.ಎಚ್. ಮತ್ತು ಘಟಕದ ಕಾರ್ಯದರ್ಶಿ ಅನಿಲ್ ಮದ್ದೂರ್, ಸದಸ್ಯರಾದ ಮಹೇಶ ಎಸ್.ಪಿ., ರಾಕೇಶ ಬಂಡುಗೊಳ್, ಮಹೇಶ ಅಣಿಗೇರಿ, ರವಿ ಬಿರಾಳ್, ಮನೋಜ ಸುರಪುರ, ಸಂಜು ಹಡಪದ ಹಾಗೂ ಸಿದ್ದರಾಮ ರೋಜೆ ಅವರನ್ನು ಒಳಗೊಂಡು ಬಡವಣೆಯ ವಿದ್ಯಾರ್ಥಿ ಯುವಕರು, ಹಿರಿಯರು, ನಾಗರಿಕರು ಉತ್ಸಾಹದಿಂದ ಭಾಗವಹಿಸಿ ಶ್ರಮದಾನವನ್ನು ಯಶಸ್ವಿಗೊಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

