ಗುಲ್ಬರ್ಗಾ

ಸ್ವಾವಲಂಬಿ ಬದುಕಿಗೆ ಕೃಷಿ ಉತ್ತಮ ಆಯ್ಕೆ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ನ.4
ಧಾನ್ ಫೌಂಡೇಶನ್ ಹಾಗೂ ಕೃಷಿ ವಿಜ್ಞಾನ ಕೇಂದ್ರ ಗುಲ್ಬರ್ಗ ಜಂಟಿ ಆಶ್ರಯದಿಂದ ಆಳಂದ ತಾಲೂಕಿನ ದುತ್ತರಗಾಂವ ಗ್ರಾಮ ಪಂಚಾಯತಿ ಆವರಣದಲ್ಲಿ ರೈತ, ರೈತ ಮಹಿಳೆಯರಿಗೆ ತೊಗರಿ ಸಸ್ಯ ಸಂರಕ್ಷಣಾ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಧಾನ್ ಫೌಂಡೇಶನ್ ಕೃಷಿ ಕಾರ್ಯಕ್ರಮ ಸಂಯೋಜಕ ಹನುಮಂತಪ್ಪ ಮಾತನಾಡಿ, ರೈತರು ಸ್ವಾವಲಂಬಿ ಬದುಕು ನಡೆಸಲು ಕೃಷಿ ಉತ್ತಮ ಕಾಯಕವಾಗಿದೆ. ರೈತರ ಒಕ್ಕೂಟ ನಡೆಸಿದಲ್ಲಿ ಅನೇಕ ಅನುಕೂಲತೆಗಳಿವೆ. ಗ್ರಾಮೀಣ ರೈತರ ಬದುಕು ಹಸನಾಗಲು ಅನೇಕ ಕೃಷಿ ಕಾರ್ಯಕ್ರಮ ಹಾಗೂ ಸ್ವಯಂ ಉದ್ಯೋಗ ಕಲ್ಪಿಸುವ ಯೋಜನೆಗಳನ್ನು ಸಂಸ್ಧೆ ಹಮ್ಮಿಕೊಂಡಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ತಜ್ಞ ಬಿ.ಜಹೀರ್ ಅಹ್ಮದ್ ಮಾತನಾಡಿ, ಹವಾಮಾನ ವೈಪರಿತ್ಯದಿಂದ ರೈತರು ಬೆಳೆದ ವಿವಿಧ ಬೆಳೆಗಲ್ಲಿ ಕಂಡುಬರುವ ಕೀಟ ರೋಗಗಳ ನಿರ್ವಹಣೆ ಅತ್ಯಗತ್ಯ. ಗುಲ್ವರ್ಗ ಜಿಲ್ಲೆಯ ಮುಖ್ಯ ಬೆಳೆ ತೊಗರಿಯಾಗಿದೆ. ರೈತರ ಸಕಾಲಕ್ಕೆ ಕ್ಷೇತ್ರ ವೀಕ್ಷಣೆ ಮಾಡಿ ರೋಗಪೀಡಿತ ಕೀಟಪೀಡಿತ ಮಾದರಿಗಳನ್ನು ಗಮನಿಸಿ ವಿಜ್ಞಾನಿಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಸೂಕ್ತ ಮಾಹಿತಿ ಪಡೆದು ಹತೋಟಿ ಕ್ರಮ ಕೈಗೊಳ್ಳಬೇಕು ಎಂದರು.
ದ್ವಿದಳ ಧಾನ್ಯ ಹಾಗೂ ಮುಖ್ಯ ಬೆಳೆ ಬೆಳೆಯದ ಮುನ್ನ ಬೀಜೋಪಚಾರ ಅತ್ಯಗತ್ಯ ಮುಂಗಾರು ಹಂಗಾಮಿ ಕೊಟ್ಟಿಗೆ ಗೊಬ್ಬರ ಬಳಸುವ ಮುನ್ನ 100 ಕಿಗ್ರಾಂ ಕೊಟ್ಟಿಗೆ ಗೊಬ್ಬರಕ್ಕೆ 1 ಕಿ.ಗ್ರಾಂ. ಟೆಕ್ಟೋಡರ್ಮ್ ಬೆರೆಸಿ 22 ದಿನಗಳ ನಂತರ ಮುಖ್ಯ ಹೊಲಕ್ಕೆ ಬಳಸಬೇಕು. ಜೇಡಿರೋಗ ಬಂದಲ್ಲಿ ಫ್ರೂಫನೋಫಾಸ್ 2 ಮಿ.ಲೀ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದರು.
ಸೊರಗು ರೋಗ ಆರಂಭವಾದಲ್ಲಿ ಕಾರ್ಬೆಡಜಿಂ 1.5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಕಾಂಡ ಹಾಗೂ ಬೇರು ವ್ಯಾಪ್ತಿ ನೆನೆಯುವಂತೆ ಸಿಂಪಡಿಸಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುವರ್ಣ, ಕ್ಷೇತ್ರ ಸಂಯೋಜಕಿ ಲಕ್ಷ್ಮೀ ಸಿ.ಪಾಟೀಲ್, ವಿಜಯಲಕ್ಷ್ಮೀ ಮೊಳಕೇರ, ಉದ್ಯಮ ಕಾರ್ಯಕರ್ತರು, ಕೃಷಿ ಅಧಿಕಾರಿ ಬಸವರಾಜ ಕೊಳ್ಳೂರ್, ಕಳಂಜಿ ಸಸ್ವಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ರೇಣುಕಾ ಎಸ್. ಸ್ವಾಗತಿಸಿದರು. ಶೈಲಜಾ ಎನ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.