'ವಿದ್ಯಾವಂತರಲ್ಲಿ ಅಧ್ಯಾತ್ಮಿಕ ಒಲವು ಕಡಿಮೆಯಾಗುತ್ತಿದೆ'
ಯಾದಗಿರಿ: ಆಧುನಿಕ ಜಗತ್ತಿನಲ್ಲಿ ಮನುಷ್ಯ ಎಲ್ಲವನ್ನೂ ಪಡೆದರೂ ಆತ್ಮತೃಪ್ತಿ ಹೊಂದುತ್ತಿಲ್ಲ. ಹಾಗೆಯೇ ವಿದ್ಯಾವಂತರಲ್ಲಿ ಅಧ್ಯಾತ್ಮಿಕ ಒಲವು ಕಡಿಮೆಯಾಗುತ್ತಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಾದ ರಾಮನಗೌಡ ಕನ್ನೊಳ್ಳಿ ಅಭಿಪ್ರಾಯಪಟ್ಟರು.
ವಿಶ್ವಾರಾಧ್ಯ ಸಿದ್ದ ಸಂಸ್ಥಾನ ಮಠ ಸುಕ್ಷೇತ್ರ ಅಬ್ಬೆ ತುಮಕೂರದಲ್ಲಿ ದೀಪಾವಳಿ ಅಮಾವಾಸ್ಯ ನಿಮಿತ್ತವಾಗಿ ಹಮ್ಮಿಕೊಂಡ 339ನೇ ಶಿವಾನುಭವಗೋಷ್ಠಿ ಹಾಗೂ ಮಂಗಳಶುಭ ಆಶೀರ್ವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಡಾ. ಗಂಗಾಧರ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದು ಮಾತನಾಡಿದರು. ಬದುಕಿನಲ್ಲಿ ಹಣ ಆಸ್ತಿ, ಗೌರವ ದೊರೆತರೂ ಶಾಂತಿ ಮತ್ತು ನೆಮ್ಮದಿ ಪಡೆಯಲು ಆಗುವುದಿಲ್ಲ. ಅದನ್ನು ಅಧ್ಯಾತ್ಮಿಕ ಕ್ಷೇತ್ರ ಒದಗಿಸುತ್ತದೆ.
ಮಾಡುವ ಕೆಲಸದ ಮೇಲೆ ಭಕ್ತಿ ಇರಬೇಕು. ಅದೇ ಬಸವಣ್ಣ ಹೇಳಿದ ಕಾಯಕವೇ ಕೈಲಾಸ ಎಂಬ ಮಾತಿನ ಅರ್ಥ ಎಂದರು. ದೈವ ಸಂಕಲ್ಪ ಮತ್ತು ದೃಢ ಸಂಕಲ್ಪ ಮಾನವನ ಬದುಕಿಗೆ ಅತೀ ಮುಖ್ಯ ಎಂದು ಅವರು ಹೇಳಿದರು.
ಯುವ ಸಾಹಿತಿ ಸಾಹೇಬಗೌಡ ಬಿರಾದಾರ ಮಾತನಾಡಿ, ವಿಶ್ವಾರಾಧ್ಯರ ಜೀವನ ಮತ್ತು ತತ್ವಗಳು, ಮಠದ ಕಾರ್ಯಚಟುವಟಿಕೆಗಳು, ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳ ಮೂಲಕ ಮಠವು ಹೆಸರು ವಾಸಿಯಾಗಿದ್ದು, ಸಮಾಜದಲ್ಲಿ ಕಾರ್ಯನಿರ್ವಹಿಸುವ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಸಾಧಕರಿಗೆ ಸ್ಪೂರ್ತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಗಂಗಾಧರ ಸ್ವಾಮೀಜಿ ಅವರು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಮನಗೌಡ ಕನ್ನೊಳ್ಳಿ ಅವರಿಗೆ ಶಾಲು ಹೊದಿಸಿ, ಸನ್ಮಾನಿಸಿದರು.
ಪ್ರಮುಖರಾದ ಎಸ್.ಎನ್. ಮಿಂಚಿನಾಳ, ಅನಿರುದ್ಧ ಗವಾಯಿ, ಹಣಮಂತಪ್ಪ ನರಬೋಳಿ, ಚನ್ನಬಸಪ್ಪ ಶಾಸ್ತ್ರಿ, ಮಲ್ಲಿಕಾರ್ಜುನ ಶಾಸ್ತ್ರಿ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

