'ಸಂಸ್ಕೃತಿ ಭಂಜಕರ ತಿರಸ್ಕರಿಸಿ'
ಚಿಂಚೋಳಿ: ಸಾಮಾಜಿಕ ಮತ್ತು ಆರ್ಥಿಕ ಹಾಗೂ ಸಂಸ್ಕ ೃತಿ ಹಾಳು ಮಾಡುವವರನ್ನು ತಿರಸ್ಕರಿಸಬೇಕು ಮತು ಪಾದಪೂಜೆ ಮಾಡಿ ನೀರು ಕುಡಿಯುವ ಅನಿಷ್ಟ ಪದ್ಧತಿ ನಿಲ್ಲಿಸಬೇಕೆಂದು ಗುಲ್ಬರ್ಗ ಪ್ರಜ್ಞಾ ಕಾನೂನು ಸಮಿತಿ ಅಧ್ಯಕ್ಷೆ, ಕನ್ನಡ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಬಾಳಿ ಹೇಳಿದರು.
ಪಟ್ಟಣ ಚಂದಾಪುರ ನಗರದ ಹಾರಕೂಡ ಚೆನ್ನಬಸವೇಶ್ವರ ಪ್ರೌಢಶಾಲೆ ಆವರಣದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಮೂಢಾಚರಣೆಗಳು ಮತ್ತು ಶರಣರ ವಿಚಾರ ಕುರಿತು ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಾದಪೂಜೆ ನೀರು ಅಶುದ್ಧವಾಗಿ ಇರುವುದರಿಂದ ಅನಾರೋಗ್ಯಕ್ಕೆ ಎಡೆಮಾಡಿಕೊಡುತ್ತದೆ. ಮೂಢನಂಬಿಕೆಗಳು ನಮ್ಮ ದೇಶದ ಸಂಸ್ಕೃಯಲ್ಲ. ದೇಶವನ್ನು ಪ್ರೀತಿಸುವ ಸಂಸ್ಕ ೃತಿ ಮಕ್ಕಳಿಗೆ ತಿಳಿಸಬೇಕಾಗಿದೆ ಎಂದರು.
ರಾಜ್ಯ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಕೆ.ನೀಲಾ ಮಾತನಾಡಿ, ಅಡ್ಡಪಲ್ಲಕ್ಕಿ ಅನಿಷ್ಟ ಪದ್ಧತಿ, ಮೂಢನಂಬಿಕೆಗಳು ತನ್ನಷ್ಟೇ ತಾನೇ ಹುಟ್ಟಿಕೊಂಡಿಲ್ಲ. ಇವುಗಳನ್ನು ಕಟ್ಟು ಕಥೆಯನ್ನಾಗಿ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗುಲ್ಬರ್ಗ ಜ್ಞಾನವಿಜ್ಞಾನ ಸಮಿತಿ ಜಿಲ್ಲಾ ಕಾರ್ಯದರ್ಶಿ ನಾಗೇಂದ್ರಪ್ಪ ಅವರಾದಿ, ಪಪಂ ಉಪಾಧ್ಯಕ್ಷ ಶಾಮರಾವ್ ಕೊರವಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜಗದೀಶಸಿಂಗ್ ಠಾಕೂರ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರ, ವಿಶ್ವನಾಥ ಪಾಟೀಲ್ ಭಾಗವಹಿಸಿದ್ದರು.
ಸಂವಾದ ಕಾರ್ಯಕ್ರಮದಲ್ಲಿ ಜನಾರ್ಧನರೆಡ್ಡಿ ಪಾಟೀಲ್, ಜಗನ್ನಾಥ ಸೇರಿಕಾರ, ಶಾಂತವೀರ ಹೀರಾಪುರ, ಖುರ್ಷಿದ ಅಲಿ, ಶಾಮಲಾ ನರನಾಳ, ಗೀತಾರಾಣಿ ಐನೋಳಿ, ಗೋಪಾಲ್ ರಾಂಪುರೆ, ವೀರಣ್ಣ ಸುಗಂಧಿ, ಮಹಿಳೆಯರು ಮಕ್ಕಳು ಗಣ್ಯರು ಪಾಲ್ಗೊಂಡಿದ್ದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರ ಸ್ವಾಗತಿಸಿದರು. ಬಸವರಾಜ ಐನೋಳಿ ನಿರೂಪಿಸಿದರು. ಚೆನ್ನಬಸಪ್ಪ ನಾವದಗಿ ವಂದಿಸಿದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

