ದುಶ್ಚಟ ಮುಕ್ತಿಗೆ ಜ್ಞಾನ ದಾಸೋಹ ಅವಶ್ಯ
ಕನ್ನಡಪ್ರಭ ವಾರ್ತೆ ಆಳಂದ ನ.9
ಜನರು ವಿವಿಧ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನೆ ಕಳೆದುಕೊಂಡು ಇಡೀ ಸಂಸಾರ ಹಾಳಾಗುತ್ತಿದೆ. ಇದನ್ನು ತಡೆಯಲು ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶರಣರಿಂದ ಜ್ಞಾನದ ದಾಸೋಹ ನೀಡಬೇಕೆಂದು ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ ಹೇಳಿದರು.
ತಾಲೂಕಿನ ಹಡಲಗಿ ಗ್ರಾಮದ ಬಸವೇಶ್ವರ ಮಠದಲ್ಲಿ ಬಸವೇಶ್ವರ ಮತ್ತು ಶಿವಲಿಂಗ ಮೂರ್ತಿ ಸ್ಥಾಪನೆ ನಿಮಿತ್ತ ಆಯೋಜಿಸಲಾದ ಧಾರ್ಮಿಕ ಕಾರ್ಯಕ್ರಮ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಮಹಾತ್ಮ ಬಸವಣ್ಣ ಅವರು ಜಾತೀಯತೆ ತೊಲಗಿಸುವುದರ ಜತೆಗೆ ಕುಲಕ್ಕೊಬ್ಬರನ್ನು ಶರಣರನ್ನಾಗಿ ಮಾಡಿದರು. ಅಲ್ಲದೇ ಯಾವುದೇ ಸಮುದಾಯಕ್ಕೆ ಸೇರಿದರೂ ಕಾಯಕದಲ್ಲಿ ನಿರತರಾಗಬೇಕೆಂಬುದು ಅವರ ಮೂಲ ಧ್ಯೇಯವಾಗಿತು. ಆದರೆ, ಜಾತೀಯತೆ ಬೇರು ಇನ್ನೂ ಜೀವಂತವಾಗಿದೆ. ಇದನ್ನು ಬುಡಸಮೇತ ಕಿಳುವ ಅಸ್ತ್ರ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ಕೌಟಾ(ಬಿ) ಬಸವ ಯೋಗಾಶ್ರವು ಸಿದ್ದರಾಮ ಶರಣರು ಬೆಲ್ದಾಳ ಆಶೀರ್ವಚನ ನೀಡಿ, ಭೂಮಿಯ ಮೇಲೆ ಜನಿಸಿದ ಎಲ್ಲರೂ ಸಮಾನರು. ಇಲ್ಲಿ ಯಾರೂ ಮೇಲೂ ಅಲ್ಲ ಕಿಳು ಅಲ್ಲ. ವಿಶ್ವಗುರು ಬಸವಣ್ಣ ನೀಡಿದ ಸಮಾನತೆಯ ಸಂದೇಶ ಪಾಲನೆ ಮಾಡಿ ಎಂದರು.
ಲಿಂಗವನ್ನು ದೇವಾಲಯ, ಬೆಟ್ಟ, ದುರ್ಗಮ ಪ್ರದೇಶದಲ್ಲಿ ಸ್ಥಾಪಿಸುವ ಮೊದಲು ತಮ್ಮ ಹೃದಯ ಮಂದಿರದಲ್ಲಿ ಪ್ರಾಮಾಣಿಕತೆಯ ಲಿಂಗ ಸ್ಥಾಪಿಸಬೇಕು. ಸಂಕಷ್ಟದಲ್ಲಿದ್ದ ಬಡಜನರ ನೆರವಿಗೆ ಸಹಾಯಹಸ್ತ ಮಾಡಿದರೆ ಅದುವೇ ನಿಜವಾದ ಲಿಂಗ. ನಾವು ಎಲ್ಲರೂ ಒಂದೆ ಎನ್ನುತ್ತ ಕೂಡಿ ಬಾಳಬೇಕೆಂದು ಸಲಹೆ ನೀಡಿದರು.
ಸಿದ್ದಾರೂಢ ಮಠದ ಪೀಠಾಧಿಪತಿ ಪರಮಾನಂದ ಸ್ವಾಮಿಜಿ ತಮ್ಮ ಪ್ರವಚನದಲ್ಲಿ ಮಾತನಾಡಿ, ಯಾವುದೇ ಸಾಧನೆಗೆ ಗುರು ಮಾರ್ಗ ಬೇಕು ಎಂದರು.
ಶಾಂತಬಸವ ಶಿವಾಚಾರ್ಯ, ಗೋಪಾಲ್ ಶಾಸ್ತ್ರಿ ಕಲ್ಲಹಂಗರಗಾ, ಮಾತೋಶ್ರೀ ರತ್ನಮ್ಮದೇವಿ ಕೆರಿಬೋಸಗಾ, ಯಳಸಂಗಿ ಗ್ರಾಪಂ ಅಧ್ಯಕ್ಷ ಮೋತಿರಾಮ ಚವ್ಹಾಣ ಮಾತನಾಡಿದರು.
ಗ್ರಾಮದ ಮುಖಂಡ ಶ್ರೀಶೈಲ್ ನಿಲೂರ, ರಾವಸಾಬ್ ಪಾಟೀಲ್, ದತ್ತಾ ಸುಳನ, ಕಮಲಕರ ಗೌರಕರ, ರಾಯಗುಂಡ ಘೋರ್ಪಡೆ, ಹಿರಗಪ್ಪ ದೊಡ್ಡಮನಿ, ಮೌಲಪ್ಪ ಜೋಗನ, ಜೈಭೀಮ ಸುಳನ, ಹಾಜಪ್ಪ ತಮ್ಮನ, ಲಕ್ಕಪ್ಪ ಕಡಗಂಚಿ, ಯಲ್ಲಾಲಿಂಗ ಕಲಾಲ್ ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡಿದರು. ಗುರುನಾಥ ಶಿವುಪುರೆ ಸ್ವಾಗತಿಸಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

