ಧೂಳ್ ಮಗಾ ಧೂಳ್...
ಕನ್ನಡಪ್ರಭ ವಾರ್ತೆ , ಚಿಂಚೋಳಿ , ನ.9
ತಾಲೂಕಿನಲ್ಲಿ ರಾಜ್ಯ ಹೆದ್ದಾರಿ ರಸ್ತೆಗಳ ಸುಧಾರಣೆ ಮತ್ತು ರಸ್ತೆ ಡಾಂಬರಿಕರಣ ಕಾಮಗಾರಿಗಳು ಭರದಿಂದ ನಡೆಯುತ್ತಿದ್ದು, ರಸ್ತೆ ಕಾಮಗಾರಿಯಲ್ಲಿ ನೀರು ಸಿಂಪರಣೆಯಾಗದಿರುವುದರಿಂದ ರಸ್ತೆಗಳ ತುಂಬೆಲ್ಲ ಮಣ್ಣಿನ ಧೂಳಿಂದಾಗಿ ವಾಹನ ಸವಾರರು ತೊಂದರೆ ಪಡುವಂತಾಗಿದೆ.
ತಾಲೂಕಿನ ರಾಜ್ಯ ಹೆದ್ದಾರಿಗಳಾದ ರಾಯಚೂರು- ವನಮಾರಪಳ್ಳಿ-15 (ಚಿಂಚೋಳಿ- ಮನ್ನಾಎಕ್ಕೆಳ್ಳಿ) ಮತ್ತು ಉಮರ್ಗಾ-ಸುಲೇಪೇಟ್-32 ಹಾಗೂ ಚಿಂಚೋಳಿ- ತಾಂಡೂರ, ಚಿಂಚೋಳಿ- ಸೇಡಂ ಇವುಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ.
ಕಾಮಗಾರಿಯಲ್ಲಿ ನೀರು ಬಳಕೆ ಆಗುತ್ತಿಲ್ಲ. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು ಮೂಗು ಮುಚ್ಚಿಕೊಂಡು ಪ್ರಯಾಣಿಸುವಂತಾಗಿದೆ. ಸುಲೇಪೇಟ್- ಮಹಾಗಾಂವ ರಸ್ತೆ 29 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಆಗುತ್ತಿದೆ. ಈಗಾಗಲೇ ಕೊರವಿ, ಹೊಡೇಬೀರನಳ್ಳಿ, ರಟಕಲ್, ಕೋಡ್ಲಿ, ನಾವದಗಿ, ಕುಡಹಳ್ಳಿ ಮುಂತಾದ ಗ್ರಾಮಗಳ ಹತ್ತಿರ ಬರೀ ಮುರುಮ ಹಾಕಿದ್ದರಿಂದ ಕ್ಯೂರಿಂಗ್ ಆಗದ ಕಾರಣ ರಸ್ತೆ ತುಂಬೆಲ್ಲ ಧೂಳು ಅವರಿಸಿಕೊಳ್ಳುತ್ತಿದೆ. ಮುಂದೆ ವಾಹನ ಸಂಚರಿಸಿದಾಗ ಹಿಂದೆ ಬರುವ ವಾಹನಗಳ ಸವಾರರು ಧೂಳಿನಲ್ಲಿ ರಸ್ತೆ ಕಾಣಿಸದಿರುವುದರಿಂದ ವಾಹನ ಸವಾರರು ರಸ್ತೆಯಲ್ಲಿ ಬಿದ್ದು ಗಾಯಗೊಳ್ಳುತ್ತಿದ್ದಾರೆ.
ಇನ್ನೂ ಕೊಳ್ಳೂರ, ದೇಗಲಮಡಿ, ಐನೋಳಿ, ಚಿಂಚೋಳಿ ಹೊರವಲಯದಲ್ಲಿ ರಸ್ತೆಗಳು ಹದಗೆಟ್ಟಿದ್ದು, ಇದರ ಸ್ಥಿತಿಗತಿ ನೋಡುವವರೇ ಇಲ್ಲದಂತಾಗಿದೆ ಎಂದು ಕೆಜೆಪಿ ಮುಖಂಡ ಭೀಮಶೆಟ್ಟಿ ಜಾಬಶೆಟ್ಟಿ ಆರೋಪಿಸಿದ್ದಾರೆ.
ಸದ್ಯ ತಾಲೂಕಿನಲ್ಲಿ ರಸ್ತೆ ಸುಧಾರಣೆ ಸರಿಯಾಗಿಲ್ಲದ ಕಾರಣ ಪ್ರಯಾಣಿಕರು ಪ್ರಯಾಣ ಸಂದರ್ಭ ಪ್ರಯಾಸ ಪಡುವಂತಾಗಿದೆ. ಇದರ ಬಗ್ಗೆ ನೂತನ ಶಾಸಕರು ಗಮನಿಸಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

