ಪುರಸಭೆಯಿಂದ ಬಾವಿಗೆ ತಡೆಗೋಡೆ: ಸಾರ್ವಜನಿಕರ ಹರ್ಷ
ಕನ್ನಡಪ್ರಭ ವಾರ್ತೆ, ಚಿತ್ತಾಪುರ, ನ.10
ಚಿತ್ತಾಪುರ ಪಟ್ಟಣದ ಭುವನೇಶ್ವರಿ ವೃತ್ತದಲ್ಲಿ ಇರುವ ಪುರಾತನ ಬಾವಿಗೆ ರಸ್ತೆ ಅಗಲೀಕರಣ ವೇಳೆ ಅದರ ತಡೆ ಗೋಡೆಯನ್ನು ಕೆಡವಿ ಹಾಕಿದ್ದರಿಂದ ಅದರಲ್ಲಿ ಪ್ರಾಣಿಗಳು ಬಿದ್ದು, ಜೀವ ಕಳೆದುಕೊಂಡಿದ್ದವು. ಇದರ ಬಗ್ಗೆ ಅನೇಕ ದೂರುಗಳು ಬಂದ ಹಿನ್ನಲೆಯಲ್ಲಿ ಎಚ್ಚೆತ್ತ ಪುರಸಭೆಯವರು ಈ ಬಾವಿಗೆ ತಡೆಗೋಡೆಯನ್ನು ಕಟ್ಟಿಸಿ ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ.
ಭುವನೇಶ್ವರಿ ವೃತ್ತವು ಪಟ್ಣಣಕ್ಕೆ ಪ್ರವೇಶಿಸುವ ಪ್ರವೇಶ ದ್ವಾರದಂತಿದ್ದು. ಇದೇ ರಸ್ತೆಯಿಂದ ಸಾರಿಗೆ ಬಸ್ಸುಗಳನ್ನು, ಖಾಸಗಿ ವಾಹನಗಳು ಹಾಗೂ ಪಟ್ಟಣದ ಹಾಗೂ ಸುತ್ತಮತ್ತಲಿನ ಗ್ರಾಮಸ್ಥರು ಸಂಚರಿಸುತ್ತಿದ್ದು, ರಾತ್ರಿ ವೇಳೆ ಕರೆಂಟ್ ಹೋದರೆ ಅಪಘಾತವಾಗುವ ಸಾಧ್ಯತೆಗಳು ಇದ್ದವು.
ಕರವೇ ಅಭಿನಂದನೆ: ಮೂರು ವರ್ಷಗಳ ಹಿಂದೆ ಅಗಲೀಕರಣ ನೆಪದಲ್ಲಿ ಕೆಡವಿ ಹಾಕಿದ್ದ ಬಾವಿ ತಡೆಗೋಡೆಯನ್ನು ಯಥಾಸ್ಥಿತಿ ಪುನರ್ ನಿರ್ಮಾಣ ಮಾಡಿ ಪುರಾತನ ಬಾವಿಯನ್ನು ಸಂರಕ್ಷಿಸಿ ಇದಕ್ಕೆ ತಡೆಗೋಡೆ ಕಟ್ಟಲು ಅನೇಕ ಮನವಿಗಳನ್ನು ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈಗಿನ ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್ ನಮ್ಮ ಬೇಡಿಕೆ ಸ್ಪಂದಿಸಿ ಬಾವಿಯನ್ನು ಸಂರಕ್ಷಿಸಿ ಮುಂಜಾಗ್ರತೆಯಾಗಿ ಬಾವಿಗೆ ತಡೆಗೋಡೆ ಕಟ್ಟಿರುವುದಕ್ಕೆ ಕರವೇ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ತಾಲೂಕು ಅಧ್ಯಕ್ಷ ನರಹರಿ ಕುಲ್ಕರ್ಣಿ ತಿಳಿಸಿದ್ದಾರೆ.
--
ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜಲಾಶಯ
ಯಾದಗಿರಿ: ತಾಲೂಕಿನ ಹತ್ತಿಕುಣಿ ಗ್ರಾಮದ ಹತ್ತಿರ ಹಸಿರು ಬೆಟ್ಟಗಳ ಮಧ್ಯವಿರುವ ಹತ್ತಿಕುಣಿ ಜಲಾಶಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಈಗಾಗಲೇ ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಜಲಾಶಯ ತುಂಬಿದ್ದು, ದಿನಾಲು ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಿಂದ ಪ್ರವಾಸಿಗರು ಬೆಳಿಗ್ಗೆ ಜಲಾಶಯಕ್ಕೆ ಭೇಟಿ ಕೊಟ್ಟು ನಿಸರ್ಗದ ಸೌಂದರ್ಯ ಸವಿದು ಜಲಾಶಯದಲ್ಲಿ ಈಜಾಡಿ ಸಮಯ ಕಳೆಯುತ್ತಿದ್ದಾರೆ. ನಂತರ ಜಲಾಶಯ ವೀಕ್ಷಿಸಿ ಪಕ್ಕದಲ್ಲಿಯೇ ಇರುವ ಸರ್ಕಾರಿ ತೋಟಗಾರಿಕೆ ಇಲಾಕೆಯ ತೋಟಕ್ಕೆ ತೆರಳಿ ಭೋಜನ ಮಾಡಿ, ಸಂಜೆ ತಮ್ಮ ಗ್ರಾಮಗಳಿಗೆ ತೆರಳುತ್ತಾರೆ.
ಜಲಾಶಯ ಮೇಲು ಉಸ್ತುವಾರಿ ನೋಡಿಕೊಳ್ಳುತ್ತಿರುವ ಕರ್ನಾಟಕ ನೀರಾವರಿ ನಿಗಮವು ಜಲಾಶಯ ಮುಂಭಾಗದಲ್ಲಿರುವ ಸ್ಥಳದಲ್ಲಿ ವಿಶಾಲವಾದ ತೋಟ ನಿರ್ಮಾಣ ಮಾಡಬೇಕು. ಜಲಾಶಯಕ್ಕೆ ತೆರಳಲು ಉತ್ತಮ ರಸ್ತೆ ನಿರ್ಮಾಣ ಮಾಡಬೇಕು. ಅಲ್ಲಿರುವ ಪ್ರವಾಸಿ ಮಂದಿರಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದರ ಜೊತೆಗೆ ಜಲಾಶಯದಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಿದಲ್ಲಿ ಕುಟುಂಬ ಸಮೇತ ಆಗಮಿಸುವ ಜನರು ನಿಸರ್ಗದ ಸೌಂದರ್ಯ ವೀಕ್ಷಿಸಲು ಹೆಚ್ಚಿನ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಿದಲ್ಲಿ ಜಿಲ್ಲಾಡಳಿತಕ್ಕೆ ಜಲಾಶಯ ಹೆಚ್ಚಿನ ಮೆರಗು ತರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

