ಗುಲ್ಬರ್ಗಾ

ಅಬ್ದುಲ್ ಕಲಾಂ ಜನ್ಮ ದಿನಾಚರಣೆ

Published On :

ಯಾದಗಿರಿ: ತಾಲೂಕಿನ ಹತ್ತಿಕುಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ದೇಶದ ಮೊದಲ ಶಿಕ್ಷಣ ಮಂತ್ರಿಯಾಗಿದ್ದ ದಿ.ಮೌಲಾನ ಅಬ್ದುಲ್ ಕಲಾಂ ಅವರ 126ನೇ ಜನ್ಮದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳಾದ ಚಂದಪ್ಪ ಚಿಕ್ಕೆ ಮೇಟಿ, ಕಲಾಂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಕಲಾಂ ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಿದಂತಹ ಧೀಮಂತ ನಾಯಕ ಎಂದು ಬಣ್ಣಿಸಿದರು.  ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಜ್ಯೋತಿಲರಂಗ, ಶಕೀಲ್ ರಹಿಮಾನ್, ಶಿಕ್ಷಕಿಯರಾದ ಮಲ್ಲಿಕಾ, ನಿವೇದಿತಾ ಪಟ್ಟೇದಾರ, ಅಕ್ಕಮಹಾದೇವಿ , ಶೈಲಾ ಬಿ.ಪಾಟೀಲ, ಲತಾ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹತ್ತಿಕುಣಿಗೆ ಸಿಟಿ ಬಸ್ ಆರಂಭ
ಯಾದಗಿರಿ: ಯಾದಗಿರಿ ಜಿಲ್ಲಾ ಕೇಂದ್ರಕ್ಕೆ 10 ಕಿ.ಮೀ ದೂರದಲ್ಲಿರುವ ಹತ್ತಿಕುಣಿ ಗ್ರಾಮಕ್ಕೆ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ಮಂಗಳವಾರ ಹೊಸ ಎರಡು ಸಿಟಿ ಬಸ್ ಓಡಾಟಕ್ಕೆ ಆರಂಭಿಸಿದೆ. ಬಹುದಿನಗಳ ಕಾಲೇಜು ವಿದ್ಯಾರ್ಥಿಗಳ ಹಾಗೂ ಜನರ ಬೇಡಿಕೆಯನ್ನು ಇಲಾಖೆ ಅಧಿಕಾರಿಗಳು ಪರಿಗಣಿಸಿ ಬಸ್ ಯಾದಗಿರಿ- ಹತ್ತಿಕುಣಿ ಮಧ್ಯೆ ಓಡಾಟಕ್ಕೆ ಅನುಕೂಲತೆ ಮಾಡಿಕೊಟ್ಟಿರುವುದರಿಂದ ಇಂದು ಬೆಳಿಗ್ಗೆ ಬಸ್ಗಳು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಯಿತು. ಗ್ರಾಮದ ಪ್ರದೀಪ ಸ್ವಾಮಿ ಅವರು ಬಸ್ಗಳಿಗೆ ಪೂಜೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮೀಕಾಂತ ತಮ್ಮಣೋರ್, ಮುಖಂಡರಾದ ಶರಣಪ್ಪ ಸಾಹು ಗಡೇದ್, ಶರಣಪ್ಪಗೌಡ ಮಾಲಿಪಾಟೀಲ, ಸಾಬಣ್ಣ ಪೂಜಾರಿ ಮುಂಡ್ರಿಗಿ, ಸುಭಾಶ ನಾಯಕ, ರವಿ ಕಂಬಾರ, ಭೀಮರೆಡ್ಡಿ ಕೌಳೂರ್, ಶರಣು ಗಡೇದ್, ರವಿ ಎಲ್ಹೇರಿ ಗ್ರಾಮಸ್ಥರಿದ್ದರು. ಪತ್ರಿಕೆಯೊಂದಿಗೆ ಮಾತನಾಡಿದ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ಮಹಿಪಾಲ ಬೇಗಾರ್, ಹತ್ತಿಕುಣಿ, ಯಡ್ಡಳ್ಳಿ, ಬಂದಳ್ಳಿ ಗ್ರಾಮಗಳಿಂದ ಬೆಳಿಗ್ಗೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರದ ಕಾಲೇಜುಗಳಿಗೆ ಆಗಮಿಸುತ್ತಾರೆ. ಅವರ ಬೇಡಿಕೆಯಂತೆ ದಿನಾಲೂ ಬೆಳಿಗ್ಗೆಯಿಂದ ರಾತ್ರಿಯವರೆಗೆ ಎರಡು ಸಿಟಿ ಬಸ್ಗಳನ್ನು ಓಡಾಟ ಆರಂಭಿಸಲಾಗಿದೆ ಎಂದರು.
ಕನಕ ಪ್ರಶಸ್ತಿಗೆ ಆಯ್ಕೆ
ಗುಲ್ಬರ್ಗ: ಧಾರವಾಡದ ರೇವಣಸಿದ್ದೇಶ್ವರ ಮಹಾಮಠದ ವಿದ್ಯಾಪೀಠದ ಆಶ್ರಯದಲ್ಲಿ ಕನಕ ಜಯಂತಿ ಅಂಗವಾಗಿ ನ.18ರಿಂದ 22ರವರೆಗೆ ಏರ್ಪಡಿಸಿರುವ ರಾಜ್ಯಮಟ್ಟದ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಕ್ಷೇತ್ರದಲ್ಲಿ ಗಣನೀಯ ಸಾಧನೆ ಹಾಗೂ ಸೇವೆ ಸಲ್ಲಿಸಿದ ವೆಂಕಟಸ್ವಾಮಿಗೆ 22 ರಂದು ಬೆ.11ಕ್ಕೆ ರಾಜ್ಯಮಟ್ಟದ ಪ್ರತಿಷ್ಠಿತ ಕನಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.