ಮಾನವೀಯ ಅಂತಃಕರಣದ ಬಸವ ಧರ್ಮವೇ ಶ್ರೇಷ್ಠ
ಆಳಂದ: ಜಗತ್ತಿನಲ್ಲೇ ಮಾನವೀಯ ಅಂತಃಕರಣದಿಂದ ಕೂಡಿದ ಬಸವಾದಿ ಶರಣರ ಧರ್ಮವೇ ಅತ್ಯಂತ ಸರ್ವ ಶ್ರೇಷ್ಠವಾಗಿದೆ ಎಂದು ಉತ್ತರ ಕನ್ನಡ ಗಣೇಶಗುಡಿ ಕರ್ನಾಟಕ ವಿದ್ಯುತ್ ನಿಗಮದ ಮುಖ್ಯ ಅಭಿಯಂತರ ಆಗಿರುವ ಸಾಹಿತಿ ಶಂಕರ ದೇವನೂರ್ ಪ್ರತಿಪಾದಿಸಿದರು.
ಪಟ್ಟಣದ ಶರಣ ಏಕಾಂತರಾಮಯ್ಯನ ಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಸರಸಂಬಾದ ಲಿಂಗೈಕ್ಯ ಗಂಗಾಬಾಯಿ ರಾಮಚಂದ್ರಪ್ಪ ಪಾಟೀಲ್ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯದ ಮೌಲ್ಯಗಳು ಕುರಿತು ಮಾತನಾಡಿದರು.
ಆಚರಣೆಗೆ ತಂದರೆ ಸಾರ್ಥಕ: ಇಂದಿನ ಶಿಕ್ಷಣ ಬಂಧು ಬಾಂಧವರಿಗೆ ಬೇರ್ಪಡಿಸುತ್ತಿದೆ. ಆದರೆ ಶರಣ ಸಾಹಿತ್ಯ ಸಂಸ್ಕೃತಿ ಪರಂಪರೆ ಎಲ್ಲ ವರ್ಗ ಸಮುದಾಯದವರನ್ನು ಒಂದುಗೂಡುಸುತ್ತದೆ. ಇಂಥ ಸಾಹಿತ್ಯ ಪರಂಪರೆಯನ್ನು ಕಿಂಚಿತವಾದರೂ ಆಚರಣೆಗೆ ತಂದರೆ ಸಾರ್ಥಕವಾಗುತ್ತದೆ ಎಂದರು. ಸಂವಿಧಾನದ ನೀತಿ ಆಸೆಗಳು ವಚನದಲ್ಲಿವೆ. ವಿಧಾನಸೌಧ, ಸಂಸದಭವನ ಕಟ್ಟಡದಲ್ಲಿ ಶರಣರ ವಚನಗಳು ಅಳವಡಿಸಿದರೆ, ರಾಜಕಾರಣಿ ಮತ್ತು ಅಧಿಕಾರಿಗಳಿಗೆ ಸನ್ಮಾರ್ಗ ತೋರುತ್ತವೆ. ಕಾಯಕ, ದಾಸೋಹ ಶರಣರು ಕೊಟ್ಟ ಜೀವಂತ ಕೊಡುಗೆಯಾಗಿದೆ. ಆಧ್ಯಾತ್ಮದ ಜೊತೆಗೆ ಸಮಾಜ ಪರಿವರ್ತನೆ ಕೆಲಸವನ್ನು ಮಾಡಿದ್ದಾರೆ. ಎಲ್ಲರಿಗೂ ಈ ಮಾರ್ಗ ಅನಿವಾರ್ಯ ಎಂದರು.
ತೊಡೆದುಹಾಕಲು ಸಾಧ್ಯ: ತಹಸೀಲ್ದಾರ್ ಪರಮೇಶ್ವರ ಕೆ.ಸ್ವಾಮಿ ಮಾತನಾಡಿ, ಶರಣ ಸಾಹಿತ್ಯ ಮಾನವರ ಜೀವನಕ್ಕೆ ಮೌಲ್ಯದ ದೊಡ್ಡ ಬಂಡಾರ ಅಡಗಿದೆ. ತಿಳಿದು ನಡೆದರೆ ಜೀವನ ಸಾರ್ಥಕವಾಗುತ್ತದೆ. ಇಂಥ ಕಾರ್ಯಕ್ರಮ ನಿರಂತರವಾಗಿ ನಡೆದರೆ ಮೂಢನಂಬಿಕೆ, ಕಂದಾಚಾರ ತೊಡೆದುಹಾಕಲು ಸಾಧ್ಯವೆಂದರು.
ಪಡಸಾವಳಿಯ ಎಸ್.ಎಂ.ದುಲಂಗೆ, ಬಂಡಾಯ ಸಾಹಿತಿ ಡಾ. ಪ್ರಭು ಖಾನಾಪುರೆ, ಉಪನ್ಯಾಸಕ ಸುಭಾಷ ದೊಡ್ಮನಿ ಬಸವ ತತ್ವ ಕುರಿತು ಮಾತನಾಡಿದರು.
ಶಾಸಕ ಬಿ.ಆರ್. ಪಾಟೀಲ್, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ್, ಬಾಬುರಾವ ಮಡ್ಡೆ, ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ, ಬಿ.ಕೆ. ಪಾಟೀಲ್, ಪುರಸಭೆ ಸದಸ್ಯ ಮಲ್ಲಿನಾಥ ಹತ್ತರಕಿ, ಹುಸೇನ್ ಲಾಡಕ್, ಮುಖಂಡ ಗುರುನಾಥ ಷಣ್ಮೂಖ, ತಾಪಂ ಮಾಜಿ ಅಧ್ಯಕ್ಷ ಮೋಹನಗೌಡ ಪಾಟೀಲ್, ಗುರುಶರಣ ಪಾಟೀಲ್ ಕೊರಳ್ಳಿ, ಕಲ್ಯಾಣರಾವ ಪಾಟೀಲ್, ಶಂಕರರಾವ ದೇಶಮುಖ, ಮಹಾಂತಪ್ಪ ಸಾಲೇಗಾಂವ, ಪಂಡಿತ ಎಂ. ಶೇರಿಕಾರ, ದಯಾನಂದ ಶೇರಿಕಾರ, ಮಲ್ಲಿಕಾರ್ಜುನ ಬೋಳಣಿ, ಎಂ.ಎಸ್. ವಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಂಕರ ಹೂಗಾರ ಮತ್ತು ಶಿವಶರಣಪ್ಪ ಪೂಜಾರಿ ವಚನ ಗಾಯನ ನಡೆಸಿದರು. ಸಂಜು ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಮೇಶ ಮಾಡಿಯಾ ಸ್ವಾಗತಿಸಿದರು. ಗುರು ಪಾಟೀಲ್ ಹಳ್ಳಿಸಲಗರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

