ಅಪರೂಪದ ರಾಜಕಾರಣಿ ಬಾಪುಗೌಡ ದರ್ಶನಾಪುರ
ಶಹಾಪುರ: ಹೈ-ಕ ಪ್ರದೇಶದ ಅಪರೂಪದ ರಾಜಕಾರಣಿ ದಿ. ಬಾಪುಗೌಡ ದರ್ಶನಾಪುರ. ರೈತರು, ದೀನ ದಲಿತರು, ದುರ್ಬಲರ ಪರ ಧ್ವನಿ ಎತ್ತುವುದರ ಜೊತೆಗೆ ಈ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದವರು. ಬಾಪುಗೌಡರು 1922ರಲ್ಲಿ ಶಹಾಪುರ ತಾಲೂಕಿನ ಚಿಕ್ಕ ಗ್ರಾಮ ದರ್ಶನಾಪುರದಲ್ಲಿ ಜನಿಸಿದರು. ಹೈ-ಕಪ್ರದೇಶದ ಸಮಸ್ಯೆಗಳನ್ನು ಎತ್ತಿಕೊಂಡು ವಿಧಾನಸಭೆಯಲ್ಲಿ ಗರ್ಜಿಸಿದರು. ಈ ಭಾಗದ ಹಕ್ಕುಗಳನ್ನು ಪ್ರತಿಪಾದಿಸಿದರು. ಈ ಭಾಗಕ್ಕೆ ಅನ್ಯಾಯವಾದಾಗೊಮ್ಮೆ ಪ್ರತಿಭಟಿಸುತ್ತಲೇ ಮುನ್ನಡೆದ ಏಕೈಕ ವ್ಯಕ್ತಿ.
ಹಸಿರು ಕ್ರಾಂತಿಗೆ ನಾಂದಿ: ಉತ್ತರ ಕರ್ನಾಟಕ ಜೀವನಾಡಿಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಆಡಳಿತ ಕಚೇರಿಯನ್ನು ಭೀಮರಾಯನ ಗುಡಿಯಲ್ಲಿ ಸ್ಥಾಪನೆಗಾಗಿ ಛಲ ಬಿಡದೆ ಹೋರಾಟ ನಡೆಸಿ ಯಶಸ್ವಿಯಾದರು.
ಜನತಾ ಪರಿವಾರದೊಂದಿಗೆ: ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ನಾಯಕರಾಗಿದ್ದ ಬಾಪುಗೌಡರು ಮೊದಲಿನಿಂದಲೂ ಜನತಾ ಪರಿವಾರದೊಂದಿಗೆ ಗುರ್ತಿಸಿಕೊಂಡಿದ್ದರು. 1983ರಲ್ಲಿ ಶಹಾಪುರ ಮತಕ್ಷೇತ್ರದಿಂದ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಸಣ್ಣ ಕೈಗಾರಿಕಾ ಮಂತ್ರಿಯಾಗಿದ್ದ ಅವರು. ತಮ್ಮ ಸ್ನೇಹಪರ ಮನಸ್ಸಿನಿಂದ ಪ್ರತಿಪಕ್ಷದಿಂದಲೂ ಗೌರವಕ್ಕೆ ಪಾತ್ರರಾಗಿದ್ದರು. 1985ರಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರಾದರು. ಪರಿಣಾಮ ಹತ್ತು ಹಲವು ಅರ್ಹ ಫಲಾನುಭವಿಗಳಿಗೆ ಸೂರು ಒದಗಿಸಿದರು.
ಮತಕ್ಷೇತ್ರದ ಅಭಿವೃದ್ಧಿ: ಶಿಕ್ಷಣಕ್ಕಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಾಲೆ ಕಾಲೇಜುಗಳನ್ನು ಮಂಜೂರು ಮಾಡಿಸಿಕೊಟ್ಟರು. ಮೂಲಭೂತ ಸೌಕರ್ಯ ಒದಗಿಸುವುದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಯಾದರು. 1967ರಲ್ಲಿಯೇ ಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯನ್ನು ಹುಟ್ಟು ಹಾಕಿದರು. ಕೃಷ್ಣಾ ಮೇಲ್ದಂಡೆ ಯೋಜನೆಯ ಕೇಂದ್ರ ಸ್ಥಾನವಾಗಿರುವ ಭೀಮರಾಯನಗುಡಿಯಲ್ಲಿ ಕೃಷಿ ಕಾಲೇಜಿಗಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ಈಗ ಈ ಕಾಲೇಜು ಬಿ. ಗುಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಹೈ-ಕ ಪ್ರದೇಶದ ರಾಜಕೀಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಬಾಪುಗೌಡರು 1988ರ ನ.15ರಂದು ಕೊನೆಯುಸಿರೆಳೆದರು. ಆದರೆ ಅವರು ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಮಾತ್ರ ಜನರು ಇಂದಿಗೂ ನೆನೆಪಿಸಿಕೊಳ್ಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

