ದೇವಿಕೇರಾ: 65 ಲಕ್ಷ ವೆಚ್ಚದ ಶಾಲಾ ಕಟ್ಟಡಕ್ಕೆ ಅಡಿಗಲ್ಲು
ಸುರಪುರ: ಪ್ರತಿ ಶಾಲೆಯಲ್ಲಿ ವಿದ್ಯಾಥರ್ಗಳ ಅಭ್ಯಾಸಕ್ಕಾಗಿ ತೊಂದರೆಯಾಗದಂತೆ ಸರಕಾರ ಶಾಲಾ ಕಟ್ಟಡಗಳನ್ನು ನಿರ್ಮಾಣಕ್ಕೆ ಅನುದಾನ ಒದಗಿಸುತ್ತಿದೆ. ಶಾಲಾ ಕಟ್ಟಡದ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಕರೆ ನೀಡಿದರು.
ತಾಲೂಕಿನ ದೇವಿಕಾರ ಗ್ರಾಮದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ರು. 65 ಲಕ್ಷ ವೆಚ್ಚದ ಶಾಲಾ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿ, ಕಾಮಗಾರಿಯನ್ನು ಜವಾಬ್ದಾರಿಯಿಂದ ಮತ್ತು ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಕಟ್ಟಡಕ್ಕೆ ಭೂದಾನ ನೀಡಿದ ರಾಘಮ್ಮ ಹಣಮಂತಯ್ಯ ಕಲ್ಲಕುಂಡಿ ಅವರನ್ನು ಸನ್ಮಾನಿಸಲಾಯಿತು. ಬಿಇಒ ಎ.ವಿ. ಕೆಂಪರಂಗಯ್ಯ, ಜಿಲ್ಲಾ ಸಮನ್ವಯಾಧಿಕಾರಿ ಶಾಂತಗೌಡ ಪಾಟೀಲ್, ಗ್ರಾಪಂ ಅಧ್ಯಕ್ಷೆ ಕಲಾವತಿ ದೇವಿ, ಪ್ರಮುಖರಾದ ಸೂಲಪ್ಪ ಕಮತಗಿ, ಶ್ರೀನಿವಾಸ ಪಾಟೀಲ್, ಸಾಬಮ್ಮ ದೇಸಾಯಿ, ಪರಮಣ್ಣ ಪೂಜಾರಿ, ಮಾನಪ್ ಸಾಹು ಆಲ್ಧಾಳ, ದೊಡ್ಡ ದೇಸಾಯಿ, ಮಲ್ಲಣ್ಣಗೌಡ ಮಾಲಿ ಪಾಟೀಲ್ ದೇವಿಕೇರಾ, ಸುರೇಶ ತಂಬಾಕೆ, ಮಲ್ಲಪ್ಪ ಗೋಗಿ, ರಾಮಚಂದ್ರ ಪೂಜಾರಿ, ಸೂಗರೇಶ ವಾರದ ರಂಗನಾಥ ಇನ್ನಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

