ಗುಲ್ಬರ್ಗಾ

ಫಲಾನುಭವಿಗಳಿಗೆ ಮಾಸಾಶನ ಆದೇಶ ಪತ್ರ ವಿತರಿಸಿದ ಶಾಸಕ

Published On :

ಚಿಂಚೋಳಿ: ತಾಲೂಕಿನ ಕೋಡ್ಲಿ ಗ್ರಾಮದ ಉಪ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಶಾಸಕ ಡಾ. ಉಮೇಶ ಜಾಧವ ತಿಂಗಳ ಮಾಸಾಶನ ಆದೇಶ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ತಾಲೂಕಿನ ಅನೇಕ ವೃದ್ಧರಿಗೆ, ವಿಧವೆ ಮತ್ತು ಅಂಗವಿಕಲರಿಗೆ ಪ್ರತಿ ತಿಂಗಳು ಸಿಗಬೇಕಾದ ಮಾಸಾಶನ ಕಡಿತಗೊಂಡಿದ್ದವು ಹೀಗಾಗಿ ಅನೇಕರು ಸರ್ಕಾರದ ಸೌಲಭ್ಯದಿಂದ ವಂಚಿತಗೊಂಡಿದ್ದರು. ತಾಲೂಕಿನ ಎಲ್ಲರಿಗೂ ಸರ್ಕಾರದ ಸೌಲಭ್ಯ ಸಿಗುವುದಕ್ಕಾಗಿ ಪಿಂಚಣಿ ಅದಾಲತ್ ಕಾರ್ಯಕ್ರಮ ಏರ್ಪಡಿಸಿ ಸ್ಥಳದಲ್ಲಿಯೇ ಆದೇಶ ಪತ್ರವನ್ನು ನೀಡಲಾಗುತ್ತಿದೆ ಎಂದರು.
ಕೆಲವರು ತಹಸೀಲ್ದಾರ್ ಕಚೇರಿಗೆ ತಿಂಗಳ ಪಿಂಚಣೆಗಾಗಿ ಅಲೆದಾಡುವುದನ್ನು ತಪ್ಪಿಸಲು ಇಂತಹ ಕಾರ್ಯಕ್ರಮ ಏರ್ಪಡಿಸಲಾಗುತ್ತಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದರು.
ಎಲ್ಲೆಲ್ಲಿ ಅದಾಲತ್?: ತಹಸೀಲ್ದಾರ್ ಮೋಹನ ಜೋಶಿ ಮಾತನಾಡಿ, ತಾಲೂಕಿನ ಐನಾಪುರ, ಕೋಡ್ಲಿ, ಸುಲೇಪೇಟ್, ಚಿಂಚೋಳಿ, ಕುಂಚಾವರಂ ವಲಯಗಳಲ್ಲಿ ಪಿಂಚಣಿ ಅದಾಲತ್ ಏರ್ಪಡಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಆದೇಶ ಪತ್ರಗಳನ್ನು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರೇಡ್-1 ತಹಸೀಲ್ದಾರ್ ಜಗನ್ನಾಥರೆಡ್ಡಿ, ಕೋಡ್ಲಿ ಗ್ರಾಪಂ ಅಧ್ಯಕ್ಷ ಹಣಮಂತರಾವ ಭೋವಿ, ಜಿಪಂ ಸದಸ್ಯೆ ರೇಣುಕಾ ರಾಠೋಡ, ತಾಪಂ ಸದಸ್ಯ ಗುಂಡಪ್ಪ ಮಾಳಗಿ, ಮಾರುತಿ ಜಮಾದಾರ, ಡಾ. ತುಕಾರಾಮ ಪವಾರ, ಪಿಡಿಒ ಬಂಡೆಪ್ಪ ಧನ್ನಿ, ಅಲೀಮ್ ನಾಯಕೊಡಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.