ಗುಲ್ಬರ್ಗಾ

ದೇಶಕ್ಕೆ ಮೋದಿ ಸಾಧನೆ ಶೂನ್ಯ: ಧರಂ ಆರೋಪ

Published On :

ಚಿಂಚೋಳಿ: ನರೇಂದ್ರ ಮೋದಿ ಅಲೆ ರಾಜ್ಯದಲ್ಲಿ ಇಲ್ಲ. ಅವರು ದೇಶಕ್ಕೆ ಮಾಡಿದ ಸಾಧನೆ ಏನು ಇಲ್ಲ, ಅವರಿಂದ ಯಾವ ಪರಿವರ್ತನೆ ಆಗುವುದಿಲ್ಲ ಎಂದು ಬೀದರ್ ಸಂಸದ ಎನ್. ಧರ್ಮಸಿಂಗ್ ಹೇಳಿದರು.
ತಾಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ಶನಿವಾರ ಸೋಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಹಮ್ಮಿಕೊಂಡ ದೇವಸ್ಥಾನ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನರೇಂದ್ರ ಮೋದಿ ಕಾರ್ಯಕ್ರಮಗಳಿಗೆ 10 ಕೋಟಿ ಖರ್ಚು ಮಾಡಲಾಗುತ್ತಿದೆ. ಇವರು ದೇಶ ಉದ್ಧಾರ ಮಾಡಲು ಸಾಧ್ಯವೆ ಎಂದು ಪ್ರಶ್ನಿಸಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲಿ ಕಾಂಗ್ರೆಸ್ 20 ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂದರು.
ಸಿದ್ದು ಗಟ್ಟಿ ಸಿಎಂ: ರಾಜ್ಯದ ಮುಖ್ಯಮಂತ್ರಿ ಸಿದ್ರಾಮಯ್ಯ ಒಬ್ಬ ಗಟ್ಟಿ ಮುಖ್ಯಮಂತ್ರಿಯಾಗಿದ್ದಾರೆ. ಶಾದಿಭಾಗ್ಯ ಯೋಜನೆ ಬಗ್ಗೆ ಕೆಲವು ವಿರೋಧ ಪಕ್ಷದವರು ಟೀಕಿಸುವುದು ಸರಿಯಲ್ಲವೆಂದು ಎಂದರು.
ವಿಧಾನಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ಮಾತನಾಡಿ, ಮಾಜಿ ಮುಖ್ಯಮಂತ್ರಿಗಳು ತಮ್ಮ ಕ್ಷೇತ್ರದಲ್ಲಿ ಉತ್ತಮ ಶಿಕ್ಷಣಕ್ಕಾಗಿ ಶಾಲಾ ಕೋಣೆಗಳನ್ನು ನಿರ್ಮಿಸಲು ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ 14ಕೋಟಿ ಮಂಜೂರಿಗೊಳಿಸಿದ್ದಾರೆ ಎಂದರು.
ಸಂಸದರಿಗೆ ಮನವಿ: ಚಿಂಚೋಳಿ ಶಾಸಕ ಡಾ. ಉಮೇಶ ಜಾಧವ ಮಾತನಾಡಿ, ಚಿಂಚೋಳಿ ಮತಕ್ಷೇತ್ರವು ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಸರಿಯಾದ ರಸ್ತೆಗಳಿಲ್ಲ, ಅನೇಕ ಗ್ರಾಮಗಳಲ್ಲಿ ಇನ್ನೂ ಮೂಲಸೌಕರ್ಯಗಳಿಲ್ಲ, ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಿ ಆದ್ಯತೆ ನೀಡಬೇಕೆಂದು ಸಂಸದರಿಗೆ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖ್ಯಸ್ಥರಾದ ಸಿ.ವಿ. ದೇಶಮುಖ, ದಿಗಂಬರಾವ ಕುಲಕರ್ಣಿ ಮಾತನಾಡಿದರು. ಜಿಪಂ ಸದಸ್ಯ ದೀಪಕನಾಗ ಪುಣ್ಯಶೆಟ್ಟಿ, ಭೀಮರಾವ ತೇಗಲತಿಪ್ಪಿ, ನೀಲಕಂಠರಾವ ದೇಶಮುಖ, ಬಸಯ್ಯ ಗುತ್ತೇದಾರ, ಅನೀಲಕುಮಾರ್ ಜಮಾದಾರ, ಶಿವಕುಮಾರ್ ಕೊಳ್ಳೂರ್, ರೇವಣಸಿದ್ದಪ್ಪ ಮಾಸ್ಟರ್, ನರಸಮ್ಮ ಗಂಗನಪಳ್ಳಿ, ಇಂದುಮತಿ ಸ್ವಾಮಿ, ಕೆ.ಎಂ. ಬಾರಿ, ಅಬ್ದುಲ್ ಬಾಸೀತ್, ಜಗದೀಶಸಿಂಗ್ ರಾಠೂರ್, ಕನಕಪುರ ಗ್ರಾಪಂ ಅಧ್ಯಕ್ಷೆ ನರಸಮ್ಮ ಅವಂಟಿ, ಲಕ್ಷ್ಮಣ ಅವಂಟಿ, ಜಗದೇವ ಗುತ್ತೇದಾರ, ಸತೀಶಕುಮಾರ್, ಬಸವರಾಜ, ಜರಣಪ್ಪ, ನರಸಪ್ಪ ಕಿವಣೋರ, ಜಗನ್ನಾಥ ಕಟ್ಟಿ ಇತರರು ಉಪಸ್ಥಿತರಿತ್ದರು.
ಅಡಿಗಲ್ಲು ಸಮಾರಂಭಕ್ಕೆ ಹಾರಕೂಡ ಚೆನ್ನವೀರಶ್ರೀ ನೆರವೇರಿಸಿದರು. ಮನಿಷ ಕಲ್ಯಾಣಶ್ರೀ ಸಾನ್ನಿಧ್ಯ ವಹಿಸಿದ್ದರು. ಚಂದ್ರಶೇಖರ ಗುತ್ತೇದಾರ ಸ್ವಾಗತಿಸಿ, ಗಂಗಾಧರ ನಿರೂಪಿಸಿ, ಬಬ್ಲು ದೇಶಮುಖ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.