ಗುಲ್ಬರ್ಗಾ

ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಆಗ್ರಹ

Published On :

ಸುರಪುರ: ಪಟ್ಟಣದಲ್ಲಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ನಿರ್ಮಿಸಲು ಪರವಾನಿಗೆ ನೀಡುವಂತೆ ಆಗ್ರಹಿಸಿ ತಾಲೂಕು ವೀರಶೈವ ಲಿಂಗಾಯತ ಯುವ ವೇದಿಕೆ ಕಾರ್ಯಕರ್ತರು ಶನಿವಾರ ಆಗ್ರಹಿಸಿದರು.
  ಇಲ್ಲಿನ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಿಂದ ವೇದಿಕೆಯ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ಬಳಿಕ ಪುರಸಭೆ ಕಾರ್ಯಾಲಯದ ಎದುರು ಸಮಾವೇಶಗೊಂಡು ಪ್ರತಿಭಟಿಸಿದರು.
  ವೇದಿಕೆಯ ಹಲವು ಮುಖಂಡರು ಮಾತನಾಡಿ, ಪಟ್ಟಣದಲ್ಲಿ ಈಗಾಗಲೇ ಅನೇಕ ಮಹಾತ್ಮರ ಪುತ್ಥಳಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಆದರೆ, ಬಸವೇಶ್ವರ ಪುತ್ಥಳಿ ಇಲ್ಲದಿರುವುದು ಬಸವ ತತ್ವ ಅನುಯಾಯಿಗಳಿಗೆ ನೋವು ತಂದಿದೆ ಎಂದರು.
  ಪುರಸಭೆ ಮುಂದುಗಡೆ ಇರುವ ಸರ್ಕಾರಿ ಖುಲ್ಲಾ ನಿವೇಶನದಲ್ಲಿ ಬಸವೇಶ್ವರರ ನಾಮಫಲಕವುಳ್ಳ ವೃತ್ತ ನಿರ್ಮಿಸಿ ಪುತ್ಥಳಿ ಪ್ರತಿಷ್ಠಾಪಿಸಲು ಪರವಾನಿಗೆ ನೀಡಬೇಕು. ಈ ಕುರಿತಂತೆ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿ ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ ಅವರಿಗೆ ಮನವಿ ಸಲ್ಲಿಸಲಾಯಿತು.
 ಪುರಸಭೆ ಪ್ರತಿಪಕ್ಷದ ನಾಯಕ ವೇಣುಮಾಧವ ನಾಯಕ, ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣಿಗೇರೆ, ಮಂಜುನಾಥ ಜಾಲಹಳ್ಳಿ, ಕೊಟ್ರಯ್ಯಸ್ವಾಮಿ ಮಠಪತಿ, ಚಂದ್ರಶೇಖರ ಪಂಚಾಂಗಮಠ, ವೀರೇಶ ನಿಷ್ಠಿ ದೇಶಮುಖ, ಶಾಂತರಾಜ ಬಾರಿ, ಸೋಮಶೇಖರ ಶಾಬಾದಿ, ಬಸವರಾಜ ಅಮ್ಮಾಪುರ, ಚಂದ್ರಶೇಖರ, ಚನ್ನು ವಾಲಿ, ಅಮೀನರಡ್ಡಿ ಹೆಮನೂರ, ಮೌನೇಶ, ರವಿ, ಶಿವರುದ್ರ ಹುಳ್ಳಿ, ಬಸನಗೌಡ ಸೂಗೂರು, ಸಿದ್ದನಗೌಡ ಹೆಬ್ಬಾಳ, ವಿನೋದ,, ಸಿದ್ದಯ್ಯಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.