ಚಿಂಚೋಳಿ: ಮುಸ್ಲಿಮರಿಂದ ಸಂಭ್ರಮದ ಮೊಹರಂ
ಕನ್ನಡಪ್ರಭ ವಾರ್ತೆ ಚಿಂಚೋಳಿ ನ.17
ಚಿಂಚೋಳಿ ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಹಿಂದೂ-ಮುಸ್ಲಿಮರ ಭಾವೈಕ್ಯತೆ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಶುಕ್ರವಾರ ಸಡಗರ ಸಂಭ್ರಮದಿಂದ ಶಾಂತಿಯುತವಾಗಿ ಆಚರಿಸಲಾಯಿತು.
ಪಟ್ಟಣದಲ್ಲಿ ನಿಜಾಮ್ ದೊರೆ ಆಳ್ವಿಕೆಯಿಂದಲೂ ಆಚರಿಸಲಾಗುತ್ತಿರುವ ಮೊಹರಂ ಹಬ್ಬ ದಿನದಂದು ಬಡಿದರ್ಗಾದಲ್ಲಿರುವ ಚಂದಾ ಹುಸೇನ್ ಮತ್ತು ಹಸನ್ ಹುಸೇನ್ ಮೌಲಾಲಿ ಲಾಲ್ಸಾಬ್ ಮತ್ತು ಬೀಬೀ ಫಾತಿಮಾ ಮತ್ತು ಅಲಿ ಅಜಗರ್ ಇಮಾಮ್ ಕಾಶಿಮ್ ಪೀರಾ ಅಲಾಯಿಗಳನ್ನು ಹೊತ್ತವರ ಮೈಯಲ್ಲಿ ದೇವರ ಆವಾಹನೆ, ಅಗ್ನಿ ಹಾಯುವ ಆಚರಣೆ ವೀಕ್ಷೀಸಲು ಸುತ್ತಲಿನ ಅನೇಕ ಗ್ರಾಮಸ್ಥರು ಇಲ್ಲಿಗೆ ಆಗಮಿಸಿ ಚಂದಾ ಹುಸೇನ್ ಮತ್ತು ಹಸನ್ ಹುಸೇನ್ ಪೀರ್ ಅಲಾಯಿಗಳ ಮೇಲೆ ಹೂ ಮತ್ತು ನಾಣ್ಯ ಎಸೆದು ತಮ್ಮ ಹರಕೆಗಳನ್ನು ಅರ್ಪಿಸಿದರು.
ಚೋಚಿ ದರ್ಗಾದ ಮಗದೂಮ್ ಅಲ್ಲಾವುದ್ದೀನ್ ಪೀರ್ ಸೇರಿದಂತೆ ಪಟ್ಟಣದಲ್ಲಿ 18 ಸ್ಥಳಗಳಲ್ಲಿ ಅಲಾಯಿ ಪೀರ್ಗಳನ್ನು ಕೂಡಿಸಲಾಗಿತ್ತು. ಮೊಹರಂ ಹಬ್ಬದ ನಿಮಿತ್ತವಾಗಿ ಅನೇಕರು ಹುಲಿವೇಷ ಮತ್ತು ಕುದುರೆ ಕುಣಿತ ಹಾಗೂ ಕೆಲವು ಕಾಲಿಗೆ ಗೆಜ್ಜೆಯನ್ನು ಕಟ್ಟಿಕೊಂಡು ಮೊಹರಂ ಹಾಡುಗಳನ್ನು ಹಾಡಿ ಆನಂದಿಸಿದರು.
ತಾಲೂಕಿನ ಹೊಡೇಬೀರನಳ್ಳಿ ಮರನಳ್ಳಿ ಗ್ರಾಮದ ಬಾಬಾ ದೇವರ (ಹೂವಿನಬಾವಿ ಹತ್ತಿರ) ಮೊಹರಂ ಸಡಗರದಿಂದ ಆಚರಿಸಲಾಯಿತು. ಸುಲೇಪೇಟ್, ರಟಕಲ್, ಕೋಡ್ಲಿ, ಚಂದನಕೇರಾ, ಐನಾಪುರ, ಕುಂಚಾವರಂ, ನಿಡಗುಂದಾ, ಗಡಿಕೇಶ್ವರ, ಇನ್ನಿತರ ಗ್ರಾಮಗಳಲ್ಲಿ ಮೊಹರಂ ಹಬ್ಬ ಶಾಂತಿಯುತವಾಗಿ ಆಚರಿಸಲಾಯಿತು.
ಪಟ್ಟಣದ ಬಡಿದರ್ಗಾ ಸಾಹೇಬ್ ಸಜ್ಜಾದೆ ನಶೀನ್ ಅಕ್ಬರ್ ಹುಸೇನಿ, ಪಪಂ ಉಪಾಧ್ಯಕ್ಷ ಶಾಮರಾವ್ ಕೊರವಿ, ಸದಸ್ಯರಾದ ಅಬ್ದುಲ್ ಬಾಸಿತ್, ರಾಮಶೆಟ್ಟಿ ಪವಾರ, ಪಪಂ ಮಾಜಿ ಉಪಾಧ್ಯಕ್ಷ ಕೆ.ಎಂ. ಬಾರಿ, ಸೈಯದ್ ಮಂಜಲೆ, ಖಾಜಾ ಮೈನೋದ್ದೀನ್, ಅಮೀರ ಸಾಬ್, ಗೋಪಾಲರಾವ್ ಕಟ್ಟಿಮನಿ, ವಿಜಯಕುಮಾರ ಘಾಟಗೆ, ಸುರೇಶ ಶ್ರೀಕಾಂತ ಜಾನಕಿ ಇತರರು ನೇತೃತ್ವ ವಹಿಸಿದ್ದರು.
ಸಿಪಿಐ ಇಸ್ಮಾಯಿಲ್ ಶರೀಫ್, ಪಿಎಸ್ಐ ಶಿವಶಂಕರ ಸಾಹು, ರಾಘವೇಂದ್ರ ಸೂಕ್ತ ಪೊಲೀಸ್ ಬಂದೋಬಸ್ತ್ವ್ಯವಸ್ಥೆಗೊಳಿಸಿದ್ದರು. ಐನೋಳಿ, ದೇಗಲಮಡಿ, ನಿಮಾಹೊಸಳ್ಳಿ, ಪೋಲಕಪಳ್ಳಿ, ಚಂದಾಪುರ, ಚಿಮ್ಮ ಇದಲಾಯಿ, ಇನ್ನಿತರ ಕಡೆಗಳಿಂದ ಜನರು ಆಗಮಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

