ಉಪ್ಪಲದಿನ್ನಿ ತಾಂಡಾಕ್ಕೆ ಉಮೇಶ ಜಾಧವ ಭೇಟಿ
ಹುಣಸಗಿ: ಉಪ್ಪಲದಿನ್ನಿ ತಾಂಡಾಕ್ಕೆ ಚಿಂಚೋಳಿ ಶಾಸಕ ಉಮೇಶ ಜಾಧವ ಭಾನುವಾರ ಭೇಟಿ ನೀಡಿ, ಮಡಿದವರ ಕುಟುಂಬಗಳಿಗೆ ಸ್ವಾಂತಾನ ಹೇಳಿದರು. ನಮ್ಮ ಜನ ಬಡ ಕೂಲಿಕಾರರು, ಹೆಚ್ಚಿನವರು ಭೂ ರಹಿತರಾಗಿದ್ದು, ಕೂಲಿ ಇವರಿಗೆ ಅನಿವಾರ್ಯ. ಆದರೆ ಇಲ್ಲಿನ ಜಿಲ್ಲಾಡಳಿತ, ತಾಲೂಕಾಡಳಿತ, ಸರಿಯಾಗಿ ಸ್ಪಂದಿಸಿಲ್ಲ ಎಂದು ತಾಂಡಾ ನಿವಾಸಿಗಳು ಗೋಳು ತೋಡಿಕೊಂಡರು ಎಂದರು.
ದುರ್ಘಟನೆಯಲ್ಲಿ ಮೃತಪಟ್ಟವರಲ್ಲಿ ಶಾಲಾ ಮಕ್ಕಳೂ ಇದ್ದು, ಕಡ್ಡಾಯ ಮಕ್ಕಳ ಕಲಿಕಾ ಹಕ್ಕು ಕೂಡಾ ಇಲ್ಲಿ ಪಾಲನೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿರುವ ಕಂದಾಯ ಸಿಬ್ಬಂದಿ, ಗ್ರಾಪಂ, ಬರದೇವನಾಳ ಪಿಡಿಒ, ತಾಪಂ ಕಾರ್ಯ ನಿರ್ವಹಣಾ ಅಧಿಕಾರಿ, ಜಿಪಂ ಕಾರ್ಯ ನಿರ್ವಹಣಾ ಅಧಿಕಾರಿಗಳೂ ತಾಂಡಾಕ್ಕೆ ಯಾಕೆ ಭೇಟಿ ನೀಡಿಲ್ಲ? ಇದು ವಿಷಾದನೀಯ. ಎಲ್ಲಾ ಗೊಂದಲಗಳನ್ನು ನಾನು ಸಿಎಂ ಜೊತೆ ಚರ್ಚಿಸಿ ಪರಿಹಾರ ಕೊಡಿಸವುದಾಗಿ ಚಿಂಚೋಳಿ ಶಾಸಕ ಉಮೇಶ ಜಾಧವ ಸುದ್ದಿಗಾರರಿಗೆ ತಿಳಿಸಿದರು. ಶಾಸಕರೊಂದಿಗೆ ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಮಾನಸಿಂಗ್ ಗೋಗಿ, ವೆಂಕಟೇಶ ಗೆದ್ದಲಮರಿ, ನಿಂಗಾನಾಯಕ, ಲಕ್ಷಣ ನಾಯಕ, ಬಾಸು ನಾಯಕ, ತುಕಾರಾಮ, ಶಂಕರ ಚವ್ಹಾಣ ಇತರರು ಇದ್ದರು.
ಕರಕುಶಲ ತರಬೇತಿಗೆ ನೇರ ಸಂದರ್ಶನ
ಯಾದಗಿರಿ: ಬೆಂಗಳೂರಿನ ಬಿಡದಿ ಬಳಿಯಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕರಿಗೆ ಮರ ಮತ್ತು ಕಲ್ಲು ಕೆತ್ತನೆ ಹಾಗೂ ಲೋಹ ಶಿಲ್ಪ ವಿಭಾಗಗಳಲ್ಲಿ 18 ತಿಂಗಳು ನೀಡಲಾಗುವುದು. ಕುಂಭ ಕಲೆಯಲ್ಲಿ 6 ತಿಂಗಳಾವಧಿಯ ಉಚಿತ ತರಬೇತಿ ವ್ಯವಸ್ಥೆಗೊಳಿಸಿದೆ. ತರಬೇತಿಗೆ ಸೇರಲಿಚ್ಛಿಸುವವರು ನೇರ ಸಂದರ್ಶನಕ್ಕೆ ನ. 26ರಿಂದ 28ರವರೆಗೆ ನಡೆಯಲಿದೆ . ಮಾಹಿತತಿಗಾಗಿ ಸಂಸ್ಥೆಯ ನಿರ್ದೇಶಕ ವೆಂಕಟೇಶ ಶೇಷಾದ್ರಿ ಮೊ. 9900158885ಗೆ ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

