ಗುಲ್ಬರ್ಗಾ

ಸುರಪುರ ಅರಮನೆ ವೀಕ್ಷಿಸಿದ ಸಿದ್ದೇಶ್ವರ ಶ್ರೀ

Published On :

ಸುರಪುರ: ಶೌರ್ಯ, ಸಾಹಸ, ಹೋರಾಟ, ಕಲೆ, ಸಾಹಿತ್ಯ, ಸಂಸ್ಕೃತಿಗಳ ಆಗರವಾಗಿದ್ದ ಸುರಪುರ ಸಂಸ್ಥಾನ ಇತಿಹಾಸ ಅದ್ಭುತ ಮತ್ತು ರೋಮಾಂಚನಕಾರಿಯಾಗಿದೆ ಎಂದು ಬಿಜಾಪುರ ಜ್ಞಾನಯೋಗಾಶ್ರವುದ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಸುರಪುರ ಸಂಸ್ಥಾನದ ಅರಮನೆಗೆ ಭೇಟಿ ವೀಕ್ಷಿಸಿದ ನಂತರ ಪ್ರತಿಕ್ರಿಯಿಸಿ, 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದ ಅರಸರನ್ನು ಒಗ್ಗೂಡಿಸಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಕೀರ್ತಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕಗೆ ಸಲ್ಲುತ್ತದೆ ಎಂದರು.
ಸುರಪುರ ಸಂಸ್ಥಾನದ ಹೆಮ್ಮೆ: ಬಿಜಾಪುರ ಆದಿಲ್‌ಶಾಹಿ ಅರಸರು ಹಮ್ಮಿಕೊಂಡಿದ್ದ ಸ್ಪರ್ದೆಯಲ್ಲಿ ಮದವೇರಿದ ಮದ್ದಾನೆಯ ಮಣಿಸಿದ ಸೊಕ್ಕನ್ನಡಗಿಸಿದ ಶೂರರು ಇಲ್ಲಿನ ಅರಸರು ಎಂದು ತಿಳಿಸಿದ ಅವರು, ಇದರ ಜೊತೆಗೆ ಭಾರತದ ಕಲೆ, ಸಾಹಿತ್ಯ, ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಜಗತ್ಪ್ರಸಿದ್ದ ಗರುಡಾದಿ ಚಿತ್ರಕಲೆ ಇಲ್ಲಿಯ ಸಂಸ್ಥಾನದ ಎಂದಾಗ ಹೆಮ್ಮೆ ಎನ್ನಿಸುತ್ತದೆ ಎಂದರು.
ನಂತರ ಸ್ವಾಮೀಜಿ ದರಬಾರ್‌ನಲ್ಲಿ ಹಿಂದೆ ಮೊಗಲ್ ಸಾಮ್ರಾಟ್ ಔರಂಗಜೇಬ್ ಇಲ್ಲಿಯ ಅರಸರ ಸಾಹಸ ಮೆಚ್ಚಿ ಆತನ ಮುದ್ರೆ ಹಾಗೂ ಪತ್ರದ ಶಿರೋಭಾಗದಲ್ಲಿ ಚಂದನದಲ್ಲಿ ಅದ್ದಿ ಮೂಡಿಸಿದ ಬಾದ್‌ಶಹನ ಹಸ್ತದ ಗುರುತುವುಳ್ಳ ಮೆಚ್ಚುಗೆ ಪತ್ರವನ್ನು ಮತ್ತು ಮೊಂಡಗೈ ರಾಜಾ ವೆಂಕಟಪ್ಪನಾಯಕ ಉಪಯೋಗಿಸುತ್ತಿದ್ದ ಕಬ್ಬಿಣದ ಕೃತಕ ಕೈಯನ್ನು ನೋಡಿ ಸಂತೋಷಪಟ್ಟರು.
ಬಳಿಕ ಸಗರನಾಡಿನ ಆರಾಧ್ಯದೈವ ವೇಣುಗೋಪಾಲಸ್ವಾಮಿ ದೇವಸ್ಥಾನ, ನಿಷ್ಠಿ ಕಡ್ಲಪ್ಪನವರ ವಿರಕ್ತಮಠ, ಜೈನ ಮಂದಿರ, ಟೇಲರ್ಸ್ ಮಂಜಿಲ್ ವೀಕ್ಷಿಸಿದರು. ಅರಸು ಮನೆತನದ ರಾಜಾ ವೆಂಕಟಪ್ಪ ನಾಯಕ(ತಾತಾ), ರಾಜಾ ಕೃಷ್ಟಪ್ಪ ನಾಯಕ, ರಾಜಾ ಲಕ್ಷ್ಮೀನಾರಾಯಣ ನಾಯಕ,  ವೇಣುಮಾಧವ ನಾಯಕ, ಎಸ್.ಗೋಪಾಲ ನಾಯಕ, ಬಸವರಾಜ, ಅಮರಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.