ಗುಲ್ಬರ್ಗಾ

ಕುಡಿವ ನೀರಿನ ಬವಣೆಗೆ ಇಂದು ಮುಕ್ತಿ

Published On :

ಗುರುಮಠಕಲ್: ಗುರುಮಠಕಲ್ ಪಟ್ಟಣ ಹಾಗೂ ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಯ 27 ಹಳ್ಳಿಗಳಿಗೆ ಶುದ್ಧ ಕುಡಿವ ನೀರು ಸರಬರಾಜು ಯೋಜನೆಗೆ 2013 ನವೆಂಬರ್ 20ರಂದು ಸಿಎಂ ಚಾಲನೆ ನೀಡಲಿದ್ದಾರೆ.
ಗುರುಮಠಕಲ್ ಪಟ್ಟಣ ಸೇರಿದಂತೆ ಮತಕ್ಷೇತ್ರದ ಹಲವು ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಯಿಂದ ಕೂಡಿರುವುದನ್ನು ಕಂಡು ಮಾನ್ಯ ಕೇಂದ್ರ ಸಚಿವರುಗಳು ಈ ಹಿಂದೆ ಗುರುಮಠಕಲ್ ಮತಕ್ಷೇತ್ರವನ್ನು ಪ್ರತಿನಿಧಿಸಿದ ಸಂದರ್ಭದಲ್ಲಿ ಇಲ್ಲಿನ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಯಾದಗಿರಿಯ ಭೀಮನದಿಯಿಂದ ಗುರುಮಠಕಲ್ ಪಟ್ಟಣದವರೆಗೆ ಮತ್ತು ಅದರ ಮಧ್ಯದಲ್ಲಿ ಬರುವ 27 ಹಳ್ಳಿಗಳಿಗೆ ಕುಡಿವ ನೀರನ್ನು ಸರಬರಾಜು ಮಾಡುವ ಯೋಜನೆಗೆ ಕ್ರಿಯ ಯೋಜನೆ ಸಿದ್ದಪಡಿಸಿ ಆ ಸಂದರ್ಭದಲ್ಲಿಯೇ ಸರ್ಕಾರಕ್ಕೆ ಪ್ರಸ್ತವನೆ ಸಲ್ಲಿಸಿದರು. ಅದರೆ ಸರ್ಕಾರದ ಕಾಲವದಿ ಮುಗಿದ ಹಿನ್ನೆಲೆಯಲ್ಲಿ ಕಾಮಗಾರಿಗೆ ಚಾಲನೆ ದೊರೆತಿರಲಿಲ್ಲ. ನಂತರದಲ್ಲಿ ಸ್ಥಳೀಯ ಶಾಸಕರಾದ ಬಾಬುರಾವ ಚಿಂಚನಸೂರ ಅವರ ಪ್ರಯತ್ನದಿಂದಾಗಿ ಗುರುಮಠಕಲ್ ಮತಕ್ಷೇತ್ರಕ್ಕೆ ಯಾದಗಿರಿಯ ಭೀಮನದಿಯಿಂದ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವ ಸಂದರ್ಭವಾಗಿ ಸುಮಾರು 32 ಕೋಟಿ ಕುಡಿವ ನೀರಿನ ಕಾಮಗಾರಿಗಾಗಿ 2007-08 ನೇ ಸಾಲಿನಲ್ಲಿ ಹಣ ಬಿಡುಗಡೆ ಮಾಡಲಾಯಿತು. ಕಾಮಗಾರಿಗೆ ಹಣ ಬಿಡುಗಡೆಯಾಗಿ ಸುಮಾರು ಐದು ವರ್ಷಗಳ ಅವಧಿಯಲ್ಲಿ ಕಾಮಗಾರಿಯೂ ಪೂರ್ಣಗೊಂಡು ಬಹುದಿನಗಳ ಈ ಭಾಗದ ಜನತೆಯ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ದೊರೆಯಲ್ಲಿದೆ.
ಬೃಹತ್ ಯೋಜನೆ: ರಾಜ್ಯದ 30 ಜಿಲ್ಲೆಗಳಲ್ಲಿ ಎಲ್ಲಿಯೂ ಇಲ್ಲದಂತಹ ರೀತಿಯಲ್ಲಿ ಕಾಮಗಾರಿ ನಡೆದು ಸುಮಾರು 27 ಗ್ರಾಮದ ಜನತೆಗೆ ಶುದ್ಧ ಕುಡಿವ ನೀರು ದೊರೆಯುವುದಕ್ಕಾಗಿ ಭೀಮಾನದಿಯಿಂದ 45 ಕಿ.ಮೀ. ದೂರದಲ್ಲಿರುವ ಗುರುಮಠಕಲ್ ಪಟ್ಟಣಕ್ಕೆ ಪೈಪ್‌ಲೈನ್ ಮೂಲಕ ಶುದ್ಧ ಕುಡಿವ ನೀರು ಪೂರೈಸುವುದು ಹಾಗೂ ಇದರ ಉದ್ದಕ್ಕೂ ದಾರಿಯಲ್ಲಿ ಬರುವ 27 ಗ್ರಾಮಗಳಿಗೂ ಶುದ್ಧ ಕುಡಿವ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಕರ್ನಾಟಕದ 30 ಜಿಲ್ಲೆಗಳಲ್ಲಿ ಎಲ್ಲಿಯೂ ಇಲ್ಲದಂತಹ ಅತಿ ಹೆಚ್ಚಿನ ದೂರದಿಂದ ( 45.ಕಿ.ಮೀ.) ಕುಡಿವ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ.
ಇದಕ್ಕೆ ಒಟ್ಟಾರೆ 3 ನೀರು ಎತ್ತುವ ಕೇಂದ್ರಗಳಿವೆ. ಭೀಮನದಿ, ಅರಕೇರಾ ಬಳಿ ಹಾಗೂ ಚಿನ್ನಕರ್ ಈ ಕೇಂದ್ರಗಳಾ ಮೂಲಕವಾಗಿ ಗುರುಮಠಕಲ್ ಪಟ್ಟಣಕ್ಕೆ ದಿನವೊಂದಕ್ಕೆ 54.30 ಲಕ್ಷ ಲೀಟರ್ ಹಾಗೂ 27 ಹಳ್ಳಿಗಳಿಗೆ 49.70 ಲಕ್ಷ ಲೀಟರ್ ಶುದ್ಧ ಕುಡಿವ ನೀರು ಸರಬರಾಜು ನೀರು ಸರಬರಾಜು ಆಗಲಿವೆ.
ಈ ಮಹತ್ವಕಾಂಕ್ಷಿ ಯೋಜನೆಗೆ ಇಂದು ಬೆಳ್ಳಿಗೆ 10ಕ್ಕೆ ನೀರು ಸರಬರಾಜು ಯೋಜನೆಗೆ ಚಾಲನೆ ನಿಡಲ್ಲಿದ್ದಾರೆ.


ಎನ್. ಕುಮಾರಸ್ವಾಮಿ ಕಲಾಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.